ಶ್ರೀನಗರ: ದಕ್ಷಿಣ ಕಾಶ್ಮೀರದ ಅನಂತ್‌ನಾಗ್ ಜಿಲ್ಲೆಯಲ್ಲಿ ಪೊಲೀಸರು ಮತ್ತು ಭದ್ರತಾ ಪಡೆಗಳು ಜಂಟಿ ಕಾರ್ಯಾಚರಣೆ ನಡೆಸಿ ಉಗ್ರರ ಅಡಗುತಾಣವನ್ನು ಭೇದಿಸಿದ್ದಾರೆ.
ಮೂರು ಎಕೆ 56 ರೈಫಲ್‌ಗಳು, ಎರಡು ಚೀನಿ ಪಿಸ್ತೂಲ್‌ಗಳು, ಎರಡು ಗ್ರೆನೇಡ್‌ಗಳು ಸೇರಿದಂತೆ ಉಗ್ರರು ಅಡಗಿಸಿಟ್ಟಿದ್ದ ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: 16 ಗಂಟೆಗಳ ಕಾಲ ಭಾರತ-ಚೀನಾ ಮಿಲಿಟರಿ ಮಾತುಕತೆ: ಇನ್ನೂ 3 ಪ್ರದೇಶಗಳಿಂದ ಹಿಂದಕ್ಕೆ ಸರಿಯಲಿವೆಯೇ ಸೇನೆಗಳು?
ವಿದೇಶಿ ರಾಯಭಾರಿಗಳ ನಿಯೋಗವು ಕಾಶ್ಮೀರ ಭೇಟಿಯಲ್ಲಿದ್ದ ವೇಳೆ ಬುಧವಾರ ಶ್ರೀನಗರದ ಪ್ರಸಿದ್ಧ ಢಾಬಾವೊಂದರ ಮೇಲೆ ದಾಳಿ ನಡೆಸಿದ್ದ ಉಗ್ರರು, ಢಾಬಾ ಮಾಲೀಕನ ಮಗನ ಮೇಲೆ ಹಲ್ಲೆ ಮಾಡಿದ್ದರು. 48 ಗಂಟೆಯೊಳಗಾಗಿ ಮೂವರು ಉಗ್ರರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದರು.