ಪೂಂಚ್ (ಜಮ್ಮು ಮತ್ತು ಕಾಶ್ಮೀರ): ಜಮ್ಮು ವಿಮಾನ ನಿಲ್ದಾಣದಲ್ಲಿ ಮೋಸ್ಟ್ ವಾಂಟೆಡ್ ಭಯೋತ್ಪಾದಕ ಶೇರ್ ಅಲಿಯನ್ನು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಬಂಧಿಸಿದ್ದಾರೆ.
ಪೂಂಚ್ನ ರ್ಗ್ಲೂನ್ ನಿವಾಸಿಯಾದ ಶೇರ್ ಅಲಿ, ವಿವಿಧ ಭಯೋತ್ಪಾದಕ ಸಂಘಟನೆಗಳಿಗೆ ಭಾರತದ ಒಳನುಸುಳಲು, ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳ ಕಳ್ಳಸಾಗಣೆ ಮಾಡಲು, ಪಾಕಿಸ್ತಾನ ಆಕ್ರಮಿತ ಜಮ್ಮು ಮತ್ತು ಕಾಶ್ಮೀರ (ಪಿಒಕೆ)ದಿಂದ ಪೂಂಚ್ ಜಿಲ್ಲೆಯ ಬಾಲಕೋಟೆಗೆ ಮಾದಕ ವಸ್ತುಗಳನ್ನು ಸಾಗಿಸಲು ಸಹಾಯ ಮಾಡುತ್ತಿದ್ದನು.
ಈತನ ಮೇಲೆ ವಿವಿಧ ಪೊಲೀಸ್ ಠಾಣೆಗಳಲ್ಲಿ ಹಲವು ಪ್ರಕರಣಗಳು ದಾಖಲಾಗಿದ್ದು, 2020 ರ ನವೆಂಬರ್ನಲ್ಲಿ ಇಬ್ಬರು ಪಾಕಿಸ್ತಾನ ಉಗ್ರರನ್ನು ಬಾಲಾಕೋಟ್ಗೆ ಕಳುಹಿಸಲು ಭಾಗಿಯಾಗಿದ್ದ ಆರೋಪದಡಿ ಇದೀಗ ಬಂಧಿಸಲಾಗಿದೆ.
ಇದನ್ನೂ ಓದಿ: ಬೆಂಗಳೂರೇ ಜೆಎಂಬಿ ಉಗ್ರರ ಪಾಲಿನ ಹಾಟ್ಸ್ಪಾಟ್: 21 ಶಂಕಿತರ ವಿರುದ್ಧ ಚಾರ್ಜ್ ಶೀಟ್
ಅಲ್ಲದೇ ಬಾಲಕೋಟ್ ಸೆಕ್ಟರ್ಗೆ 3 ಪಿಸ್ತೂಲ್, ಒಂದು ಸುಧಾರಿತ ಸ್ಫೋಟಕ ಸಾಧನ (ಐಇಡಿ) ಸೇರಿದಂತೆ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಕಳುಹಿಸಿದ್ದನ್ನು ಸ್ವೀಕರಿಸಿದ್ದ ಶೇರ್ ಅಲಿಯ ತಂದೆ ಮುಷ್ತಾಕ್ ಅಹ್ಮದ್ ಹಾಗೂ ಆತನ ಸಹೋದರಿ ರಸ್ಕೀಮ್ ಅಖ್ತರ್ರನ್ನು ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ಪೊಲೀಸರು ಬಂಧಿಸಿದ್ದರು.
ಶೇರ್ ಅಲಿ ನೇತೃತ್ವದ ಭಯೋತ್ಪಾದಕ ಜಾಲದಲ್ಲಿ ಭಾಗಿಯಾಗಿದ್ದ ಇತರರನ್ನೂ ಬಂಧಿಸಲಾಗಿದ್ದು, 8 ಕೋಟಿ ರೂ. ಮೌಲ್ಯದ 2 ಕೆಜಿ ಹೆರಾಯಿನ್, ಐದು ಪಿಸ್ತೂಲ್‌ಗಳು, 13 ಗ್ರೆನೇಡ್‌ಗಳು ಮತ್ತು ಒಂದು ಜೀವಂತ ಐಇಡಿ ವಶಪಡಿಸಿಕೊಳ್ಳಲಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ.