ಮಂಗಳೂರು: ದೇರಳಕಟ್ಟೆಯ ಕಣಚೂರು ನರ್ಸಿಂಗ್ ಕಾಲೇಜಿನಲ್ಲಿ ಐವರು ವಿದ್ಯಾರ್ಥಿಗಳಿಗೆ ರ‌್ಯಾಗಿಂಗ್ ಮಾಡುತ್ತಿದ್ದ 11 ವಿದ್ಯಾರ್ಥಿಗಳನ್ನು ಉಳ್ಳಾಲ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಓದಿ: ನಾದಿನಿ-ಆಕೆಯ ಮಗುವಿನ ಮೇಲೆ ಆ್ಯಸಿಡ್ ಎರಚಿದ್ದ ಪ್ರಕರಣ: ಆರೋಪಿಯ ಜಾಮೀನು ರದ್ದು ಮಾಡಿದ ಹೈಕೋರ್ಟ್
ಜಫಿನ್ ರೋಯ್ಚಾನ್, ಅಕ್ಷಯ್ ಕೆ.ಎಸ್, ಜಬಿನ್ ಮೊಹಮ್ಮದ್, ಜೆರೊನ್ ಸಿರಿಲ್, ರಾಬಿನ್ ಬಿಜು, ಅಬ್ದುಲ್ ಜಸಿತ್, ಅವಿನ್ ಜಾನ್, ಅಶಿನ್ ಬಾಬು, ಮೊಹಮ್ಮದ್ ಸೂರಜ್, ಅಬ್ದುಲ್ ಅನಾಶ್, ಮೊಹಮ್ಮದ್ ಎಂಬುವರನ್ನು ವಶಕ್ಕೆ ಪಡೆಯಲಾಗಿದೆ. ಇವರೆಲ್ಲರೂ ಕೇರಳ ಮೂಲದ ವಿದ್ಯಾರ್ಥಿಗಳಾಗಿದ್ದಾರೆ.
ದೇರಳಕಟ್ಟೆಯ ಕಣಚೂರು ಮೋನು ಕಾಲೇಜಿನಲ್ಲಿ ಪಿಸಿಯೋಥರಪಿ ಮತ್ತು ನರ್ಸಿಂಗ್ ಕಲಿಯುತ್ತಿದ್ದ ಪ್ರಥಮ ವರ್ಷದ ಐವರು ವಿದ್ಯಾರ್ಥಿಗಳಿಗೆ ಹಿರಿಯ 11 ವಿದ್ಯಾರ್ಥಿಗಳು ರ‌್ಯಾಗಿಂಗ್ ಮಾಡುತ್ತಿದ್ದರು. ಐವರು ವಿದ್ಯಾರ್ಥಿಗಳಿಗೆ ಕೂದಲು ಸಣ್ಣದಾಗಿ ಕತ್ತರಿಸಿಕೊಂಡು, ಮೀಸೆ ಬೋಳಿಸಿಕೊಂಡು ಬರಬೇಕು. ಬೆಂಕಿಕಡ್ಡಿಯನ್ನು ಎಣಿಸಬೇಕು. ಬೆಂಕಿಕಡ್ಡಿಯಿಂದ ಕೋಣೆಯ ಅಳತೆ ಮಾಡಬೇಕು ಎಂದು ರ‌್ಯಾಗಿಂಗ್ ಮಾಡುತ್ತಿದ್ದರು.
ದೈಹಿಕ ಹಲ್ಲೆ ಮಾಡಿ ಬೆದರಿಕೆ ಹಾಕುತ್ತಿದ್ದ ಇವರ ವಿರುದ್ದ ವಿದ್ಯಾರ್ಥಿಗಳು ಮ್ಯಾನೇಜಮೆಂಟ್ಗೆ ದೂರು ನೀಡಿದ್ದಾರೆ. ಮ್ಯಾನೇಜಮೆಂಟ್ನವರು ನವರು ಉಳ್ಳಾಲ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಹನ್ನೊಂದು ಮಂದಿ ವಿದ್ಯಾರ್ಥಿಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.