ETV Bharat / crime

ಪಾಂಡವಪುರ: ಶಾಸಕ ಪುಟ್ಟರಾಜು ಮನೆ, ಕಾರಿಗೆ ಕಿಡಿಗೇಡಿಗಳಿಂದ ಕಲ್ಲು - ಶಾಸಕ ಪುಟ್ಟರಾಜು

ಮಂಡ್ಯ ಜಿಲ್ಲೆಯ ಪಾಂಡವಪುರದಲ್ಲಿ ಕಿಡಿಗೇಡಿಗಳು ಅಟ್ಟಹಾಸ ಮೆರೆದಿದ್ದು ಶಾಸಕ ಪುಟ್ಟರಾಜು ಅವರ ಮನೆ ಹಾಗೂ ಕಾರಿನ ಮೇಲೆ ಕಲ್ಲು ತೂರಿ ಗಾಜುಗಳನ್ನು ಪುಡಿ ಪುಡಿ ಮಾಡಿದ್ದಾರೆ.

stone pelting in pandavapura, mla puttaraju house and car damaged
ಅಪರಿಚಿತರ ಅಟ್ಟಹಾಸ: ಪಾಂಡವಪುರದಲ್ಲಿ ಶಾಸಕ ಪುಟ್ಟರಾಜು ಮನೆ, ಕಾರಿಗೆ ಕಲ್ಲು ತೂರಿ ಗಾಜು ಪುಡಿ ಪುಡಿ
author img

By

Published : Oct 8, 2021, 1:27 PM IST

Updated : Oct 8, 2021, 2:21 PM IST

ಮಂಡ್ಯ: ಮಾಜಿ ಸಚಿವ, ಜೆಡಿಎಸ್‌ ಶಾಸಕ ಸಿ.ಎಸ್‌.ಪುಟ್ಟರಾಜು ಮನೆ ಮತ್ತು ಕಾರಿನ ಮೇಲೆ ಅಪರಿಚಿತ ಯುವಕರ ಗುಂಪು ಕಲ್ಲು ತೂರಾಟ ನಡೆಸಿ ಗಾಜು ಪುಡಿಗಟ್ಟಿರುವ ಘಟನೆ ಪಾಂಡವಪುರದಲ್ಲಿ‌ ನಡೆದಿದೆ.

ಸಿ.ಎಸ್.ಪುಟ್ಟರಾಜು ಅವರ ಹುಟ್ಟುಹಬ್ಬಕ್ಕೆ ಹಾಕಿದ್ದ ಫ್ಲೆಕ್ಸ್‌ಗಳನ್ನು ಕಿಡಿಗೇಡಿಗಳು ಹರಿದು ಹಾಕಿದ್ದಲ್ಲದೇ, ಮನೆಯ ಗಾಜಿಗೂ ಹಾನಿ ಮಾಡಿದ್ದಾರೆ.

ಪಟ್ಟಣದ ವಿವಿಧೆಡೆ ನಿಲ್ಲಿಸಿದ್ದ ಕಾರುಗಳ ಮೇಲೂ ಕಲ್ಲು ತೂರಾಟ ಮಾಡಿದ್ದಾರೆ. ಈ ವೇಳೆ ಹಲವು ಕಾರು, ಖಾಸಗಿ ಬಸ್‌ಗೂ ಹಾನಿಯಾಗಿದೆ. ಪಾಂಡವಪುರ ಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

'ಇದು ರಾಜಕೀಯ ಪ್ರೇರಿತವಲ್ಲ'

stone pelting in pandavapura, mla puttaraju house and car damaged
ಕಲ್ಲು ತೂರಾಟದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಶಾಸಕ ಪುಟ್ಟರಾಜು ಸ್ಪಷ್ಟನೆ

ಇನ್ನು, ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶಾಸಕ ಪುಟ್ಟರಾಜು, ಇದು ಯಾರೋ ಕಿಡಿಗೇಡಿಗಳು ಮಾಡಿರುವ ಕೃತ್ಯವಾಗಿದ್ದು, ರಾಜಕೀಯ ಪ್ರೇರಿತವಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಸ್ಪಷ್ಟನೆ ನೀಡಿದ್ದಾರೆ.

ಇದಕ್ಕೂ ಮೊದಲು ಕಿಡಿಗೇಡಿಗಳು ಪೆಟ್ರೋಲ್ ಬಂಕ್‌ವೊಂದರಲ್ಲಿ ಗಲಾಟೆ ಮಾಡಿಕೊಂಡಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಕ್ರಮ ಕೈಗೊಳ್ಳಲಿದ್ದಾರೆ. ಯಾರೂ ಆತಂಕಕ್ಕೆ ಒಳಗಾಗದೆ ಶಾಂತಿ ಕಾಪಾಡಬೇಕೆಂದು ಕಾರ್ಯಕರ್ತರು, ಅಭಿಮಾನಿಗಳು, ಸಾರ್ವಜನಿಕರಲ್ಲಿ ಪುಟ್ಟರಾಜು ಮನವಿ ಮಾಡಿದ್ದಾರೆ.

Last Updated : Oct 8, 2021, 2:21 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.