ETV Bharat / crime

ಮಸಾಜ್ ಸೆಂಟರ್ ಮಾಲೀಕನಿಂದ ಲೈಂಗಿಕ ಕಿರುಕುಳ: ಆರೋಪಿಯ ಬಂಧನ - kadaba police station

ಆಯುರ್ವೇದಿಕ್ ಪಂಚಕರ್ಮ ಚಿಕಿತ್ಸಾಲಯ ಎಂಬ ಹೆಸರಿನಲ್ಲಿ ಮಸಾಜ್ ಪಾರ್ಲರ್ ನಡೆಸುತ್ತಿದ್ದ ಆರೋಪದ ಮೇಲೆ ಓರ್ವನನ್ನು ಬಂಧಿಸಲಾಗಿದೆ.

sexual harassment against  women : one arrrested
ಮಸಾಜ್ ಸೆಂಟರ್ ಮಾಲೀಕನಿಂದ ಲೈಂಗಿಕ ಕಿರುಕುಳ: ಆರೋಪಿಯ ಬಂಧನ
author img

By

Published : Sep 25, 2021, 1:29 AM IST

ಮಂಗಳೂರು: ಕಡಬ ಸಮೀಪದ ಮಸಾಜ್ ಪಾರ್ಲರ್​​​ ಸೆಂಟರ್​​ನ ಮಾಲೀಕ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಕೇಳಿಬಂದಿದ್ದು, ನೊಂದ ಮಹಿಳೆಯು ಕಡಬ ಠಾಣೆಗೆ ದೂರು ನೀಡಿದ್ದಾರೆ.

ದೂರಿನ ಹಿನ್ನೆಲೆಯಲ್ಲಿ , ಆರೋಪಿಯನ್ನು ಇದೀಗ ಕಡಬ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಳಾರ ಸಮೀಪ ಸ್ನೇಹಾ ಆಯುರ್ವೇದಿಕ್ ಪಂಚಕರ್ಮ ಚಿಕಿತ್ಸಾಲಯ ಎಂಬ ಹೆಸರಿನಲ್ಲಿ ಕೇರಳದ ವಯನಾಡ್ ನಿವಾಸಿ ಅಬ್ರಾಹಾಂ ಎಂಬಾತ ಮಸಾಜ್ ಸೆಂಟರ್ ನಡೆಸುತ್ತಿದ್ದನು.

ಈ ನಡುವೆ ಅಲ್ಲಿಗೆ ಬರುವ ಮಹಿಳೆಯರಿಗೆ ಈತ ಲೈಂಗಿಕ ಕಿರುಕುಳ ನೀಡಿದ್ದಾನೆ ಎನ್ನುವ ಆರೋಪ ಕೇಳಿಬಂದಿದೆ. ಶುಕ್ರವಾರ ಮಹಿಳೆಯೋರ್ವರರಿಗೆ ಪುನಃ ಕಿರುಕುಳ ನೀಡಲು ಈತ ಆರಂಭಿಸಿದ ಎನ್ನಲಾಗಿದೆ. ಮಹಿಳೆ ಸಹಕರಿಸದ ಕಾರಣಕ್ಕೆ ಜೀವ ಬೆದರಿಕೆ ಕೂಡ ಹಾಕಿದ್ದ ಎನ್ನುವ ಆರೋಪ ಕೇಳಿಬಂದಿದೆ. ಕೊನೆಗೆ ನೊಂದ ಮಹಿಳೆ ಕಡಬ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಆರೋಪಿ ಅಬ್ರಹಾಂನನ್ನು ಕಡಬ ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ: ನಾಲ್ಕು ದಿನ‌ ರಾಷ್ಟ್ರಪತಿ ರಾಜ್ಯ ಪ್ರವಾಸ: 5 ಜಿಲ್ಲೆಗಳ ವಿವಿಧ ಕಾರ್ಯಕ್ರಮದಲ್ಲಿ ಭಾಗ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.