ETV Bharat / crime

ಪಿಡಬ್ಲ್ಯೂಡಿ ಜೆಇ, ಎಇ ಪರೀಕ್ಷೆಯಲ್ಲೂ ಅಕ್ರಮ: ಪಿಎಸ್​ಐ ಕಿಂಗ್​ಪಿನ್​ಗೆ ಮತ್ತೊಂದು ಸಂಕಷ್ಟ

ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮದ ಕಿಂಗ್‌ಪಿನ್ ರುದ್ರಗೌಡ ಪಾಟೀಲ್‌ ಪಿಡಬ್ಲ್ಯೂಡಿ ಜೆಇ, ಎಇ ಪರೀಕ್ಷೆ ಅಕ್ರಮದಲ್ಲಿ ಭಾಗಿಯಾಗಿದ್ದಾನೆ ಎಂಬ ಮಾಹಿತಿ ಆಧರಿಸಿ, ಬೆಂಗಳೂರು ಪೊಲೀಸರು ಕಲಬುರಗಿಗೆ ತೆರಳಿದ್ದಾರೆ.

scam-in-pwd-ae-and-je-exam
ಪಿಡಬ್ಲ್ಯೂಡಿ ಜೆಇ, ಎಇ ಪರೀಕ್ಷೆಯಲ್ಲೂ ಅಕ್ರಮ: ಪಿಎಸ್​ಐ ಅಕ್ರಮದ ಕಿಂಗ್​ಪಿನ್​ಗೆ ಮತ್ತೊಂದು ಸಂಕಷ್ಟ
author img

By

Published : May 10, 2022, 9:40 AM IST

ಕಲಬುರಗಿ: ಪಿಎಸ್ಐ ನೇಮಕಾತಿ ಪರೀಕ್ಷಾ ಅಕ್ರಮದ ರೂವಾರಿ ರುದ್ರಗೌಡ ಪಾಟೀಲ್‌ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಪಿಡಬ್ಲ್ಯೂಡಿ ಜೆಇ, ಎಇ ಪರೀಕ್ಷಾ ಅಕ್ರಮದಲ್ಲಿಯೂ ಈತನ ಪಾತ್ರ ಕಂಡುಬಂದಿದ್ದು ಬೆಂಗಳೂರು ಅನ್ನಪೂರ್ಣೇಶ್ವರಿ ನಗರ ಠಾಣೆಯ ಪೊಲೀಸರು ಕಲಬುರಗಿಗೆ ಬಂದಿದ್ದಾರೆ.

ಜೆಇ‌, ಎಇ ಪರೀಕ್ಷಾ ಸಮಯದಲ್ಲಿ ಎಲೆಕ್ಟ್ರಾನಿಕ್ ಬ್ಲೂಟೂತ್ ಡಿವೈಸ್ ಬಳಸಿ ಪರೀಕ್ಷೆ ಬರೆಯಲಾಗಿದೆ. ವೀರಣಗೌಡ ಎಂಬ ಅಭ್ಯರ್ಥಿ ಬ್ಲೂಟೂತ್ ಸಹಾಯದಿಂದ ಪರೀಕ್ಷೆ ಬರೆಯಲು ಮುಂದಾಗಿದ್ದ ಎಂದು ಕಳೆದ ಡಿಸೆಂಬರ್ 14ರಂದು ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ, ಬೆಂಗಳೂರು ಸೆಂಟ್ ಜಾನ್ಸ್ ಶಾಲೆಯ ಸಿಬ್ಬಂದಿ ದೂರು ನೀಡಿದ್ದರು.

ಪ್ರಕರಣದಲ್ಲಿ ರುದ್ರಗೌಡ ಪಾಟೀಲ್ ಏಳನೇ ಆರೋಪಿಯಾಗಿದ್ದ. ಆದರೆ ತನ್ನ ಪ್ರಭಾವ ಹಾಗು ಹಣದ ಅಸ್ತ್ರ ಬಳಸಿಕೊಂಡು ಚಾರ್ಜ್​​ಶೀಟ್​​ನಲ್ಲಿ ಹೆಸರು ಬರದಂತೆ ನೋಡಿಕೊಂಡಿದ್ದನಂತೆ. ಇದೀಗ ಕೇಸ್ ಮತ್ತೆ ರಿಓಪನ್ ಮಾಡಲಾಗಿದೆ. ಹೀಗಾಗಿ, ಅಕ್ರಮದಲ್ಲಿ ಭಾಗಿಯಾಗಿದ್ದ ರುದ್ರಗೌಡ ಪಾಟೀಲ್​ಗೆ ಸಂಕಷ್ಟ ಎದುರಾಗಿದೆ.

ಪಿಡಬ್ಲ್ಯೂಡಿ ಪರೀಕ್ಷೆ ಅಕ್ರಮದಲ್ಲಿಯೂ ಕೂಡಾ ರುದ್ರಗೌಡ ಪಾಟೀಲ್ ಹಸ್ತಕ್ಷೇಪ ಇದೆ ಎನ್ನಲಾಗುತ್ತಿದೆ. ಅನೇಕರು ಅಕ್ರಮವಾಗಿ ಪರೀಕ್ಷೆ ಬರೆಯಲು ಸಹಕರಿರುವ ಈತನನ್ನು ಹುಡುಕಿಕೊಂಡು ರಾಜಧಾನಿ ಪೊಲೀಸರು ಕಲಬುರಗಿಗೆ ಆಗಮಿಸಿದ್ದಾರೆ. ಇಂದು ರುದ್ರಗೌಡ ಪಾಟೀಲ್​​ನನ್ನು ಕಸ್ಟಡಿಗೆ ಪಡೆಯುವ ಸಾಧ್ಯತೆ ಇದೆ. ಆರೋಪಿ ಸದ್ಯ ಕಲಬುರ್ಗಿ ಕೇಂದ್ರ ಕಾರಾಗೃಹದಲ್ಲಿದ್ದಾನೆ.

ಇದನ್ನೂ ಓದಿ: ದೆಹಲಿಗೆ ಹೊರಟ ಸಿಎಂ: ವರಿಷ್ಠರ ಭೇಟಿಗೆ ಸಿಗುತ್ತಾ ಅವಕಾಶ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.