ETV Bharat / crime

ಮಗು ಕೊಲ್ಲುವುದಾಗಿ ಬೆದರಿಸಿ ವಿವಾಹಿತೆ ಮೇಲೆ ಅತ್ಯಾಚಾರ: ನಿವೃತ್ತ ಪೊಲೀಸ್ ಅಧಿಕಾರಿ ದುಷ್ಕೃತ್ಯ

ಅಕ್ಟೋಬರ್ 8ರಂದು ಪತಿ ಕೆಲಸ ಅರಸಿ ಮನೆಯಿಂದ ಹೊರಗೆ ಹೋಗಿದ್ದ ಸಂದರ್ಭದಲ್ಲಿ ಮಗಳು ಹಾಸಿಗೆಯ ಮೇಲೆ ಮಲಗಿದ್ದಾಗ ಆರೋಪಿ ಆಕೆಯ ಕೋಣೆಗೆ ನುಗ್ಗಿದ್ದ. ಆರೋಪಿ ಮಗಳ ಮೇಲೆ ಗನ್ ಗುರಿಯಾಗಿಸಿ ಅತ್ಯಾಚಾರವೆಸಗಿದ್ದಾನೆ ಎನ್ನಲಾಗಿದೆ.

ಮಗುವನ್ನು ಕೊಲ್ಲುವುದಾಗಿ ಬೆದರಿಸಿ ವಿವಾಹಿತೆ ಮೇಲೆ ಅತ್ಯಾಚಾರ: ನಿವೃತ್ತ ಪೊಲೀಸ್ ಆಧಿಕಾರಿ ದುಷ್ಕೃತ್ಯ
Rape of married woman after threatening to kill child
author img

By

Published : Oct 10, 2022, 5:40 PM IST

ಲುಧಿಯಾನಾ: ತನ್ನ ಮನೆಯಲ್ಲಿ ಬಾಡಿಗೆಗಿದ್ದ 20 ವರ್ಷದ ವಿವಾಹಿತೆಯೊಬ್ಬಳ ಮೇಲೆ ಅತ್ಯಾಚಾರ ನಡೆಸಿದ ಆರೋಪದ ಮೇಲೆ ನಿವೃತ್ತ ಪೊಲೀಸ್ ಇನ್ಸ್‌ಪೆಕ್ಟರ್ ವಿರುದ್ಧ ದೂರು ದಾಖಲಿಸಲಾಗಿದೆ. ಸಂತ್ರಸ್ತೆಯ ಎಂಟು ತಿಂಗಳ ಮಗುವಿನ ಮೇಲೆ ಗನ್ ಹಿಡಿದು ಕೊಲ್ಲುವುದಾಗಿ ಬೆದರಿಸಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಮುಂಡಿಯನ್ ಖುರ್ದ್‌ ಪ್ರದೇಶದ ಗುರುದೀಪ್ ಸಿಂಗ್ ಬಜ್ವಾ (62) ಎಂದು ಆರೋಪಿಯನ್ನು ಗುರುತಿಸಲಾಗಿದ್ದು, ಅತ್ಯಾಚಾರಕ್ಕೆ ವಿರೋಧಿಸಿದರೆ ಸಂತ್ರಸ್ತೆಯ ಮಗಳನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ ಎಂದು ಆರೋಪಿಸಲಾಗಿದೆ.

ತನ್ನ ಪತಿ ಮತ್ತು ಮಗಳೊಂದಿಗೆ ಆರೋಪಿಯ ಮಾಲೀಕತ್ವದ ಬಾಡಿಗೆ ಮನೆಯಲ್ಲಿ ವಾಸವಾಗಿರುವುದಾಗಿ ಸಂತ್ರಸ್ತೆ ತಿಳಿಸಿದ್ದಾರೆ. ಅಕ್ಟೋಬರ್ 8ರಂದು ಪತಿ ಕೆಲಸ ಅರಸಿ ಮನೆಯಿಂದ ಹೊರಗೆ ಹೋಗಿದ್ದ ಸಂದರ್ಭದಲ್ಲಿ ಮಗಳು ಹಾಸಿಗೆಯ ಮೇಲೆ ಮಲಗಿದ್ದಾಗ ಆರೋಪಿ ಆಕೆಯ ಕೋಣೆಗೆ ನುಗ್ಗಿದ್ದ. ಆರೋಪಿಯು ಮಗಳ ಮೇಲೆ ಗನ್ ಗುರಿಯಾಗಿಸಿ ಅತ್ಯಾಚಾರವೆಸಗಿದ್ದಾರೆ ಎಂದು ಸಂತ್ರಸ್ತೆ ದೂರಿದ್ದಾರೆ.

ದಂಪತಿ ಸುಮಾರು 20 ದಿನಗಳ ಹಿಂದೆ ಈ ಮನೆಗೆ ಬಾಡಿಗೆಗೆ ಬಂದಿದ್ದರು ಎಂದು ಪ್ರಕರಣದ ತನಿಖೆ ನಡೆಸುತ್ತಿರುವ ಸಹಾಯಕ ಸಬ್ ಇನ್ಸ್‌ಪೆಕ್ಟರ್ ಲಖ್ವಿಂದರ್ ಮಸಿಹ್ ಹೇಳಿದ್ದಾರೆ.

ಪೊಲೀಸರು ಆರೋಪಿಯ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 376 (ಅತ್ಯಾಚಾರ), 354-ಬಿ (ಆಕ್ರಮಣ ಅಥವಾ ಕ್ರಿಮಿನಲ್ ಬಲದ ಬಳಕೆ), 506 (ಕ್ರಿಮಿನಲ್ ಬೆದರಿಕೆ) ಮತ್ತು ಶಸ್ತ್ರಾಸ್ತ್ರ ಕಾಯ್ದೆಯ ಸೆಕ್ಷನ್ 25, 54 ಮತ್ತು 59 ರ ಅಡಿಯಲ್ಲಿ ದೂರು ದಾಖಲಿಸಿದ್ದಾರೆ. ಆರೋಪಿಯ ಬಂಧನಕ್ಕೆ ಶೋಧ ನಡೆಯುತ್ತಿದೆ.

ಇದನ್ನು ಓದಿ:ಕಾರು ನಿಯಂತ್ರಣ ತಪ್ಪಿ ಸ್ಕೂಟರ್‌ಗೆ ಡಿಕ್ಕಿ.. ದೇವಸ್ಥಾನ ಕಾಂಪೌಂಡ್ ಮೇಲೆ ಹತ್ತಿದ ಕಾರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.