ETV Bharat / crime

ಪಾನಿಪುರಿ ವಿಚಾರದ ಗಲಾಟೆ ಪತ್ನಿಯ ಸಾವಿನಲ್ಲಿ ಅಂತ್ಯ! - ಮಧ್ಯಪ್ರದೇಶ

ಪಾನಿಪುರಿ ವಿಚಾರದಲ್ಲಿ ನಡೆದ ಗಂಡ- ಹೆಂಡತಿ ಜಗಳದಲ್ಲಿ ಪತ್ನಿ ಪ್ರಾಣ ಪಕ್ಷಿ ಹಾರಿ ಹೋಗಿದೆ. ಮಹಾರಾಷ್ಟ್ರದ ಪುಣೆಯಲ್ಲಿ ಕೆಲ ದಿನಗಳ ಹಿಂದೆ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮಧ್ಯಪ್ರದೇಶದ ಶಹದೋಲ್‌ ಜಿಲ್ಲೆಯಲ್ಲಿ ಇದಕ್ಕಿಂತ ಭಿನ್ನವಾದ ಘಟನೆ ನಡೆದಿದೆ.

Pune : Dispute between husband and wife over Panipuri, wife commits suicide
ಪುಣೆ: ಪಾನಿಪುರಿ ವಿಚಾರದ ಗಲಾಟೆ ಪತ್ನಿಯ ಸಾವಿನಲ್ಲಿ ಅಂತ್ಯ!
author img

By

Published : Sep 1, 2021, 7:47 PM IST

ಪುಣೆ(ಮಹಾರಾಷ್ಟ್ರ): ಒಂದು ಪಾನಿಪುರಿ ಪತಿ-ಪತ್ನಿಯ ನಡುವಿನ ಗಲಾಟೆಗೆ ಕಾರಣವಾಗಿದೆ. ಅಷ್ಟು ಮಾತ್ರವಲ್ಲದೆ, ಇಬ್ಬರ ನಡುವಿನ ಜಗಳ ಪತ್ನಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ. 23 ವರ್ಷದ ಪ್ರತೀಕ್ಷಾ ಮೃತ ಮಹಿಳೆ.

ಪುಣೆಯ ನಿವಾಸಿ ಗಹಿನಿನಾಥ್ ಸರ್ವಡೆ, ಇತ್ತೀಚೆಗೆ ಪತ್ನಿ ಪ್ರತೀಕ್ಷಾ (23) ಅವರನ್ನು ಸ್ವಗ್ರಾಮದಿಂದ ಪುಣೆಗೆ ಕರೆತಂದಿದ್ದರು. ಕೆಲ ದಿನಗಳ ಹಿಂದೆ ಗಹಿನಿನಾಥ್ ಮನೆಗೆ ಪಾನಿಪುರಿಯನ್ನು ತೆಗೆದುಕೊಂಡು ಹೋಗಿದ್ದಾನೆ. ನನ್ನ ಕೇಳದೆ ಯಾಕೆ ಪಾನಿಪುರಿ ತಂದೆ ಎಂದು ಕಳೆದ ಶನಿವಾರ ಪ್ರತೀಕ್ಷಾ ತನ್ನ ಪತಿಯೊಂದಿಗೆ ವಾಗ್ವಾದಕ್ಕೆ ಇಳಿದಿದ್ದಾಳೆ.

ಆಗ ಇಬ್ಬರ ನಡುವಿನ ಜಗಳ ವಿಕೋಪಕ್ಕೆ ತಿರುಗಿ ಗಹಿನಿನಾಥ್​ ಪತ್ನಿ ಪ್ರತೀಕ್ಷಾ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಕೂಡಲೇ ಆಕೆಯನ್ನು ಆಸ್ಪತ್ರೆಗೆ ಸಾಗಿಸಲಾಯಿತ್ತಾದರೂ ಮಂಗಳವಾರ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ. ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮೃತಳ ಪತಿ ಗಹಿನಿನಾಥ್ ಸರ್ವಡೆಯನ್ನು ಬಂಧಿಸಿದ್ದಾರೆ.

ಚಿಕ್ಕನ್‌ ಮಾಡಿಕೊಡಲಿಲ್ಲ ಅಂತ ಪತ್ನಿ ಹತ್ಯೆ!

ಮಧ್ಯಪ್ರದೇಶದ ಶಹದೋಲ್‌ ಜಿಲ್ಲೆಯಲ್ಲಿ ಪುಣೆ ಘಟನೆಗಿಂತ ಸ್ವಲ್ಪ ವಿಭಿನ್ನವಾಗಿ ನಡೆದಿದೆ. ಚಿಕ್ಕನ್‌ ಮಾಡಿಕೊಡಲು ನಿರಾಕರಿಸಿದ್ದಕ್ಕಾಗಿ ಪಾಪಿ ಪತಿಯೊರ್ವ ಪತ್ನಿಯನ್ನು ದೊಣ್ಣೆಯಿಂದ ಹೊಡೆದು ಹತ್ಯೆ ಮಾಡಿರುವ ಘಟನೆ ಪಾಪೌಂಡ್ ಪೊಲೀಸ್‌ ಠಾಣಾ ವ್ಯಾಪ್ತಿಯ ಸೆಮರಿಯಾಟೋಲಾ ಗ್ರಾಮದಲ್ಲಿ ನಡೆದಿದೆ. ಆಗಸ್ಟ್‌ 23 ರಂದು ನಡೆದಿರುವ ಈ ಕೃತ್ಯ ತಡವಾಗಿ ಬೆಳಕಿಗೆ ಬಂದಿದೆ.

ಚಿಕ್ಕನ್‌ ಮಾಡುವ ವಿಚಾರಕ್ಕೆ ಆರೋಪಿ ಕಮಲೇಶ್‌ ಕೋಲ್‌ ಹಾಗೂ ಆತನ ಪತ್ನಿ ರಮಾಬಾಯಿ ಕೋಲ್‌ ನಡುವೆ ಜಗಳವಾಗಿದೆ. ಇದು ವಿಕೋಪಕ್ಕೆ ತಿರುಗಿ ಕಮಲೇಶ್‌ ಪತ್ನಿಯನ್ನು ದೊಣ್ಣೆಯಿಂದ ಹೊಡೆದು ಪತ್ನಿಯನ್ನು ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.