ತುಮಕೂರು: ತನ್ನ ಕಾರಿನ ಮೇಲೆ ಅಕ್ರಮವಾಗಿ ಆದಾಯ ತೆರಿಗೆ ಇಲಾಖೆಯ ಬೋರ್ಡ್ ಹಾಕಿಕೊಂಡು ತಿರುಗಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ. ಕಾರಿಗೆ ತೆರಿಗೆ ಇಲಾಖೆಯ ಬೋರ್ಡ್ ಹಾಕಿಕೊಂಡು ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ತಡೆದು ವಿಚಾರಣೆ ನಡೆಸಿದಾಗ, ಅದು ನಕಲಿ ಬೋರ್ಡ್ ಎಂಬುದು ಪತ್ತೆಯಾಗಿರುವ ಘಟನೆ ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನಲ್ಲಿ ನಡೆದಿದೆ.
ಸಂಕೀನಪುರ ಗ್ರಾಮದ ಶಿವಣ್ಣ ಎಂಬಾತ ತನ್ನ ಕಾರಿಗೆ ಆದಾಯ ತೆರಿಗೆ ಇಲಾಖೆಯ ಬೋರ್ಡ್ ಹಾಗೂ ಭಾರತ ಸರ್ಕಾರ ಎಂದು ನಾಮಫಲಕಗಳನ್ನು ಹಾಕಿಕೊಂಡು ಕುಣಿಗಲ್ನಲ್ಲಿ ಓಡಾಡುತ್ತಿದ್ದನು. ಕುಣಿಗಲ್ ಪೊಲೀಸರು ತಡೆದು ವಿಚಾರಣೆ ನಡೆಸಿದಾಗ ವಿಷಯ ಬೆಳಕಿಗೆ ಬಂದಿದೆ. ಆರೋಪಿಯನ್ನು ವಶಕ್ಕೆ ಪಡೆದ ಕುಣಿಗಲ್ ಪೊಲೀಸರು ಸ್ವಯಂ ಪ್ರೇರಿತರಾಗಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ: ಕಂಪನಿಯಿಂದ ಬಾಡಿಗೆ ಪಡೆದು 27 ಕಾರು ವಾಪಸ್ ಕೊಡದೆ ವಂಚಿಸಿದ್ದ ಇಬ್ಬರ ಬಂಧನ