ETV Bharat / crime

ಬೆಂಗಳೂರು: ಐಷಾರಾಮಿ ಕಾರಿನಲ್ಲಿ ಬಂದು ಹೂ ಕುಂಡ ಕದ್ದ ಕಳ್ಳಿ - ಪಾಟ್ ಕದ್ದ ಕಳ್ಳಿ

ಹೈ-ಫೈ ಕಾರಿನಲ್ಲಿ ಬಂದ ಮಹಿಳೆಯೊಬ್ಬಳು ಮನೆ ಮುಂದಿನ ಕಾಂಪೌಂಡ್​​ನಲ್ಲಿ ಇಟ್ಟಿದ್ದ ಪಾಟ್ ಅನ್ನು ಕಳ್ಳತನ ಮಾಡಿದ್ದು, ಬೆಂಗಳೂರಿನ ಸಂಜಯನಗರನಲ್ಲಿ ಘಟನೆ ನಡೆದಿದೆ..

pot-theft-in-bengaluru-by-a-lady
ಐಷಾರಾಮಿ ಕಾರಿನಲ್ಲಿ ಬಂದು ಹೂ ಕುಂಡ ಕದ್ದ ಕಳ್ಳಿ
author img

By

Published : Jan 26, 2022, 11:23 AM IST

Updated : Jan 26, 2022, 12:38 PM IST

ಬೆಂಗಳೂರು : ಕಳ್ಳರು ಚಿನ್ನಾಭರಣ ಅಥವಾ ಹಣವನ್ನೇ ದೋಚಬೇಕು ಎಂಬ ನಿಯಮವಿಲ್ಲ. ಸುಲಭವಾಗಿ ಏನೇ ಸಿಕ್ಕರೂ ಕಳ್ಳರು ಕಳ್ಳತನ ಮಾಡ್ತಾರೆ ಅನ್ನೋದಕ್ಕೆ‌ ಈ ಅಪರೂಪದ ಕಳ್ಳತನ ಸಾಕ್ಷಿ ಒದಗಿಸುತ್ತದೆ. ಹೈ-ಫೈ ಕಾರಿನಲ್ಲಿ ಬಂದ ಮಹಿಳೆಯೊಬ್ಬಳು ಮನೆ ಮುಂದಿನ ಕಾಂಪೌಂಡ್‌ನಲ್ಲಿ ಇಟ್ಟಿದ್ದ ಪಾಟ್ ಅನ್ನು ಕಳ್ಳತನ ಮಾಡಿದ್ದಾಳೆ.

ಸಂಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯ ಆರ್​ಎಂವಿ 2ನೇ ಸ್ಟೇಜ್​ನಲ್ಲಿ ಇದೇ ತಿಂಗಳು 24ರಂದು ಚಾಲಾಕಿ ಕಳ್ಳಿ ಪಾಟ್ ಕಳ್ಳತನ ಮಾಡಿದ್ದಾಳೆ ಎಂದು ಆರೋಪಿಸಿ ಮನೆ ಮಾಲೀಕರಾದ ಕಾವ್ಯಾ ಸೆಲ್ವಂ ಎಂಬುವರು ಟ್ವಿಟರ್​ನಲ್ಲಿ ವಿಡಿಯೋ ಪೋಸ್ಟ್​ ಮಾಡಿ, ಬೆಂಗಳೂರು ಪೊಲೀಸರಿಗೆ ಟ್ಯಾಗ್ ಮಾಡಿದ್ದಾರೆ. ಈ ಕಳ್ಳತನದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ‌.

ವೈರಲ್ ಆದ ಕಳ್ಳತನದ ವಿಡಿಯೋ

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

Last Updated : Jan 26, 2022, 12:38 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.