ಮೈಸೂರು: ನಗರದಲ್ಲಿ ಸರಗಳ್ಳತನ ಮಾಡುತ್ತಿದ್ದ ನಾಲ್ವರನ್ನು ವಿದ್ಯಾರಣ್ಯಪುರಂ ಠಾಣಾ ಪೋಲಿಸರು ಬಂಧಿಸಿ, 13.50 ಲಕ್ಷ ರೂ. ಬೆಲೆ ಬಾಳುವ
ಸುಮಾರು 300 ಗ್ರಾಂ ತೂಕದ 7 ಚಿನ್ನದ ಸರಗಳು ಮತ್ತು ದರೋಡೆಗೆ ಬಳಸಿದ್ದ 3 ಬೈಕ್ ಮತ್ತು 5 ಮೊಬೈಲ್ ಫೋನ್‍ಗನ್ನು ಪೊಲೀಸರು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮೇ 5ರಂದು ವಿದ್ಯಾರಣ್ಯಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಸರಗಳ್ಳತನದ ಪ್ರಕರಣದ ಕುರಿತು ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದು, ಜೂ.6ರಂದು, ಆರೋಪಿಗಳ ಪತ್ತೆಗಾಗಿ ಶ್ರೀರಾಂಪುರ ರಿಂಗ್ ರಸ್ತೆಯಲ್ಲಿ ಕಾರ್ಯಾಚರಣೆ ನಡೆಸಿದ್ದರೆ. ಅನುಮಾನಾಸ್ಪದವಾಗಿ ದ್ವಿಚಕ್ರವಾಹನದಲ್ಲಿ ತಿರುಗಾಡುತ್ತಿದ್ದ ಇಬ್ಬರನ್ನು ತಡೆದು ವಿಚಾರಣೆ ನಡೆಸಿದಾಗ ಪ್ರಕರಣದ ಆರೋಪಿಗಳು ಎಂದು ಖಚಿತವಾಗಿದೆ.
ಸೆರೆ ಸಿಕ್ಕ ಇಬ್ಬರು ಈ ಹಿಂದೆ ಸರಗಳ್ಳತನ ಪ್ರಕರಣದಲ್ಲಿ ಭಾಗಿಯಾಗಿರುವುದಾಗಿ ತಿಳಿದು ಬಂದಿದೆ. ಒಟ್ಟು ನಾಲ್ಕು ಜನ ಸೇರಿ ಕಳ್ಳತನ ಮಾಡುತ್ತಿರುವುದಾಗಿ ವಿಚಾರಣೆ ವೇಳೆ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ. ಮೈಸೂರು ನಗರದ ವಿವಿಧೆಡೆ ಸರಗಳ್ಳತನ ಮಾಡಿರುವುದಾಗಿ ಅವರು ಹೇಳಿದ್ದಾರೆ. ಒಟ್ಟು 7 ಸರಗಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಿಂದ 300 ಗ್ರಾಂ ತೂಕದ 7 ಚಿನ್ನದ ಸರ, 3ಬೈಕ್ ಹಾಗೂ 5 ಮೊಬೈಲ್ ಫೋನ್ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಇದನ್ನು ಓದಿ:ಹೈದರಾಬಾದ್ ಏರ್ಪೋರ್ಟ್: ಮಹಿಳಾ ಪ್ರಯಾಣಿಕಳ ಗುದನಾಳದಲ್ಲಿ ಚಿನ್ನ ಪತ್ತೆ