ನವದೆಹಲಿ: ದೇಶದಾದ್ಯಂತ ಅನೇಕ ರೋಗಿಗಳು ಆಮ್ಲಜನಕದ ಕೊರತೆಯಿಂದ ಪ್ರಾಣ ಕಳೆದುಕೊಳ್ಳುತ್ತಿದ್ದರೆ, ಕಾಳಸಂತೆಯಲ್ಲಿ ಮಾರಾಟ ಮಾಡಲು ಅಕ್ರಮವಾಗಿ ಆಕ್ಸಿಜನ್ ಸಾಂದ್ರಕಗಳನ್ನು ಸಂಗ್ರಹಿಸಿಟ್ಟುಕೊಂಡಿದ್ದ ಉದ್ಯಮಿ ನವನೀತ್ ಕಲ್ರಾರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.
ಕೆಲ ದಿನಗಳ ಹಿಂದೆ ದೆಹಲಿಯಲ್ಲಿ ಆಕ್ಸಿಜನ್ ಸಮಸ್ಯೆ ಉಂಟಾಗಿತ್ತು. ಇದೇ ಸಂದರ್ಭದಲ್ಲಿ ಖಾನ್ ಮಾರುಕಟ್ಟೆಯಲ್ಲಿರುವ ನವನೀತ್ ಒಡೆತನದ ಪ್ರಸಿದ್ಧ ಖಾನ್ ಚಾಚಾ ರೆಸ್ಟೋರೆಂಟ್ ಸೇರಿದಂತೆ ಆಕ್ಸಿಜನ್ ಸಾಂದ್ರಕ ಸಂಗ್ರಹಿಸಿಟ್ಟಿದ್ದ ಸ್ಥಳಗಳ ಮೇಲೆ ಪೊಲೀಸರು ದಾಳಿ ನಡೆಸಿದ್ದರು. ಈವರೆಗೆ ನವನೀತ್ ಒಡೆತನದ ಮೂರು ರೆಸ್ಟೋರೆಂಟ್ಗಳಿಂದ ಸುಮಾರು 500 ಆಕ್ಸಿಜನ್ ಸಾಂದ್ರಕಗಳನ್ನು ವಶಪಡಿಸಿಕೊಳ್ಳಲಾಗಿದೆ.
ಇದನ್ನೂ ಓದಿ: ಆಕ್ಸಿಜನ್ ಕಾನ್ಸಂಟ್ರೇಟರ್ ಅಕ್ರಮ ಸಂಗ್ರಹ; ಉದ್ಯಮಿ ಕಲ್ರಾಗೆ ಜಾಮೀನು ನಿರಾಕರಣೆ
ಇದರ ಬೆನ್ನಲ್ಲೇ ನವನೀತ್ ಕಲ್ರಾ ಪರಾರಿಯಾಗಿದ್ದು, ಪ್ರಕರಣ ಸಂಬಂಧ ಕಲ್ರಾಗೆ ಮಧ್ಯಂತರ ಜಾಮೀನು ನೀಡಲು ದೆಹಲಿ ಹೈಕೋರ್ಟ್ ನಿರಾಕರಿಸಿತ್ತು. ಇದೀಗ ಕಲ್ರಾರನ್ನು ಬಂಧಿಸುವಲ್ಲಿ ದೆಹಲಿ ಪೊಲೀಸರು ಯಶಸ್ವಿಯಾಗಿದ್ದಾರೆ.