ETV Bharat / crime

ಬ್ಯಾಂಕ್​​​​ ಸರ್ವರ್​ ಹ್ಯಾಕ್​ ಮಾಡಿ 70 ಲಕ್ಷ ದೋಚಿದ ಚಾಲಾಕಿಗಳು.. ಕೊನೆಗೂ ಬಲೆಗೆ ಬೀಳಿಸಿದ ಪೊಲೀಸರು

ಮೊಬೈಲ್​ ಬ್ಯಾಂಕಿಂಗ್​ ಇಲ್ಲದ ಗ್ರಾಹಕರ ವಹಿವಾಟು ಹೆಚ್ಚುತ್ತಿರುವುದನ್ನು ಗಮನಿಸಿದ ಬ್ಯಾಂಕ್ ಮ್ಯಾನೇಜರ್ ಜಿಲ್ಲಾ ಪೊಲೀಸ್ ವರಿಷ್ಠರಿಗೆ ದೂರು ನೀಡಿದ್ದರು. ಬ್ಯಾಂಕ್​ ಮ್ಯಾನೇಜರ್​ ನೀಡಿದ ದೂರಿನ ಆಧಾರದ ಮೇಲೆ ಮಲಪ್ಪುರಂ ಸೈಬರ್ ಕ್ರೈಂ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು.

Nigerians hacked Manjeri Co operative Banks server and stole Rs 70 lakhs
ಬ್ಯಾಂಕ್​​​​ ಸರ್ವರ್​ ಹ್ಯಾಕ್​ ಮಾಡಿ 70 ಲಕ್ಷ ದೋಚಿದ ಚಾಲಾಕಿಗಳು
author img

By

Published : Sep 6, 2022, 5:04 PM IST

ಮಲಪ್ಪುರಂ(ಕೇರಳ): ಮಂಜೇರಿ ಸಹಕಾರಿ ಬ್ಯಾಂಕ್‌ನ ಸರ್ವರ್‌ ಹ್ಯಾಕ್‌ ಮಾಡಿ 70 ಲಕ್ಷ ಸುಲಿಗೆ ಮಾಡಿದ್ದ ಇಬ್ಬರು ನೈಜೀರಿಯನ್‌ ಪ್ರಜೆಗಳನ್ನು ನವದೆಹಲಿಯಲ್ಲಿ ಬಂಧಿಸಲಾಗಿದೆ. ಬಂಧಿತ ಇಬ್ಬರನ್ನು ಇಮ್ಯಾಕ್ಯುಲೇಟ್ ಚಿನ್ನುಸ್ ಎಂಬ ಮಹಿಳೆ ಮತ್ತು ಇನ್ನಾ ಕಾಸ್ಮೋಸ್ ಎಂಬ ವ್ಯಕ್ತಿ ಎಂದು ಗುರುತಿಸಲಾಗಿದೆ. ಸೈಬರ್ ಕ್ರೈಂ ಪೊಲೀಸ್​ ಎಸ್‌ಎಚ್‌ಒ ಎಂ.ಜೆ.ಅರುಣ್ ನೇತೃತ್ವದ ತಂಡ 15 ದಿನಗಳ ಕಾಲ ದೆಹಲಿಯಲ್ಲಿಯೇ ಬೀಡುಬಿಟ್ಟು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ತೀವ್ರ ತನಿಖೆ ನಡೆಸುತ್ತಿದೆ.

ಮೊಬೈಲ್ ಬ್ಯಾಂಕಿಂಗ್ ಸರ್ವರ್ ಹ್ಯಾಕ್ ಮಾಡಿ ಈ ಇಬ್ಬರು ವಂಚನೆ ಮಾಡುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ. ಈ ಚಾಲಾಕಿಗಳು ಸರ್ವರ್​ ಹ್ಯಾಕ್​ ಮಾಡಿದ ಬಳಿಕ ಗ್ರಾಹಕರ ಸಂಖ್ಯೆಯನ್ನು ಮತ್ತೊಂದು ಸಂಖ್ಯೆಗೆ ಬದಲಾಯಿಸುತ್ತಿದ್ದರು. ಮೊಬೈಲ್ ಬ್ಯಾಂಕಿಂಗ್ ಇಲ್ಲದ ನಾಲ್ವರು ಗ್ರಾಹಕರ ದೈನಂದಿನ ವಹಿವಾಟಿನ ಮಿತಿಯನ್ನು ಹೆಚ್ಚಿಸಿ ಅವರ ಖಾತೆಯಲ್ಲಿದ್ದ ಹಣವನ್ನು ಈ ಶಂಕಿತರು ದೋಚಿದ್ದರು ಎಂದು ಬ್ಯಾಂಕ್ ಮ್ಯಾನೇಜರ್ ಅಬ್ದುಲ್ ನಾಸರ್ ತಿಳಿಸಿದ್ದಾರೆ.

ಮೊಬೈಲ್​ ಬ್ಯಾಂಕಿಂಗ್​ ಇಲ್ಲದ ಗ್ರಾಹಕರ ವಹಿವಾಟು ಹೆಚ್ಚುತ್ತಿರುವುದನ್ನು ಗಮನಿಸಿದ ಬ್ಯಾಂಕ್ ಮ್ಯಾನೇಜರ್ ಜಿಲ್ಲಾ ಪೊಲೀಸ್ ವರಿಷ್ಠರಿಗೆ ದೂರು ನೀಡಿದ್ದರು. ಬ್ಯಾಂಕ್​ ಮ್ಯಾನೇಜರ್​ ನೀಡಿದ ದೂರಿನ ಆಧಾರದ ಮೇಲೆ ಮಲಪ್ಪುರಂ ಸೈಬರ್ ಕ್ರೈಂ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು. ಮಲಪ್ಪುರಂ ಡಿವೈಎಸ್ಪಿ ಅಬ್ದುಲ್ ಬಶೀರ್​​, ಸೈಬರ್ ಕ್ರೈಂ ಪೊಲೀಸ್ ಠಾಣೆ ಎಸ್‌ಎಚ್‌ಒ ಮತ್ತು ಡಾನ್ಸಾಫ್ ಸ್ಕ್ವಾಡ್‌ನೊಂದಿಗೆ ವಿಶೇಷ ತನಿಖಾ ತಂಡವನ್ನು ರಚನೆ ಮಾಡಿ ಸೈಬರ್​ ವಂಚಕರ ಬಂಧನಕ್ಕೆ ಜಾಲ ಬೀಸಿದ್ದರು.

ಬ್ಯಾಂಕ್​​ನವರು ಒದಗಿಸಿದ ಮಾಹಿತಿ ಆಧಾರದ ಮೇಲೆ ಪೊಲೀಸರು ತೀವ್ರ ತನಿಖೆ ನಡೆಸಿದ್ದರು. ಈ ತನಿಖೆ ಪ್ರಗತಿ ಕಾಣುತ್ತಿದ್ದಂತೆ ಆರೋಪಿಗಳ ಸುಳಿವು ಪೊಲೀಸರಿಗೂ ಸಿಕ್ಕಿತ್ತು. ಹೀಗೆ ನಕಲಿ ಖಾತೆಗಳನ್ನು ಸೃಷ್ಟಿಸಿದ್ದ ಆರೋಪಿಗಳು ತಾವು ಹ್ಯಾಕ್​ನಿಂದ ಕದ್ದ ಹಣವನ್ನು 19 ಬ್ಯಾಂಕ್ ಗಳಿಗೆ ವರ್ಗಾವಣೆ ಮಾಡಿದ್ದರು. ವಂಚಕರು ಬಿಹಾರ, ಮಿಜೋರಾಂ ಮತ್ತು ಉತ್ತರ ಪ್ರದೇಶದಲ್ಲಿ ನಕಲಿ ವಿಳಾಸದೊಂದಿಗೆ ಹಲವು ಖಾತೆಗಳನ್ನು ಆರಂಭಿಸಿದ್ದರು. ದೆಹಲಿ, ಮುಂಬೈ, ಬೆಂಗಳೂರು ಮತ್ತು ಕೋಲ್ಕತ್ತಾದಿಂದ ಎಟಿಎಂ ಮೂಲಕ ಹಣ ಡ್ರಾ ಮಾಡಿಕೊಳ್ಳುತ್ತಿದ್ದರು.

ಈ ಬಗ್ಗೆ ಸಂಪೂರ್ಣ ಜಾಡು ಹಿಡಿದ ಪೊಲೀಸರು ಈ ಇಬ್ಬರನ್ನು ಬಂಧಿಸಿ ತನಿಖೆಗೆ ಒಳಪಡಿಸಿದ್ದಾರೆ. ತನಿಖೆ ವೇಳೆ ಆರೋಪಿಗಳು, ಸುಲಿಗೆ ಮಾಡಿದ ಹೆಚ್ಚಿನ ಹಣವನ್ನು ನೈಜೀರಿಯಾಕ್ಕೆ ವರ್ಗಾಯಿಸಿದ್ದರು ಎಂಬುದನ್ನು ಅವರೇ ಸ್ವತಃ ಒಪ್ಪಿಕೊಂಡಿದ್ದಾರಂತೆ. ಮತ್ತು ಬ್ಯಾಂಕಿಂಗ್ ಚಟುವಟಿಕೆಗಳಿಗೆ ಮಧ್ಯವರ್ತಿಗಳಾಗಿ ಕಾರ್ಯನಿರ್ವಹಿಸುವ ಜನರಿಗೆ ಕಮಿಷನ್ ನೀಡಿದ್ದೇವೆ ಎಂದು ಆರೋಪಿಗಳು ಬಾಯ್ಬಿಟ್ಟಿದ್ದಾರೆ.

ಬ್ಯಾಂಕ್ ಸರ್ವರ್ ಹ್ಯಾಕ್ ಮಾಡಿ ಗ್ರಾಹಕರ ಮಾಹಿತಿ ಪಡೆದ ಘಟನೆಗೂ ಬ್ಯಾಂಕ್ ಸರ್ವರ್ ಮತ್ತು ಮೊಬೈಲ್ ಬ್ಯಾಂಕಿಂಗ್ ಸರ್ವರ್ ನಿರ್ವಹಿಸುವ ಖಾಸಗಿ ಸಂಸ್ಥೆಗಳಿಗೂ ಸಂಬಂಧವಿದೆಯೇ ಎಂಬ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇದನ್ನು ಓದಿ: ಕ್ರೋಮ್ ಬ್ರೌಸರ್ ಬಳಸುತ್ತಿದ್ದರೆ ತಕ್ಷಣ ಅಪ್ಡೇಟ್ ಮಾಡಿ.. ಇಲ್ಲದಿದ್ದರೆ ಅಪಾಯ ಖಚಿತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.