ETV Bharat / crime

'ದ್ವೇಷ ಭಾಷಣ' ಆರೋಪದಡಿ ಸಂಸದ ಅಕ್ಬರ್ ಲೋನೆ ಪುತ್ರ ಅರೆಸ್ಟ್​ - Akbar Lone

ಜಮ್ಮು- ಕಾಶ್ಮೀರದ ಬಂಡಿಪೋರಾದಲ್ಲಿ ನಡೆದ ಸಾರ್ವಜನಿಕ ರ‍್ಯಾಲಿಯಲ್ಲಿ ದ್ವೇಷದ ಮನೋಭಾವ ಬಿತ್ತುವ, ಗಲಭೆಗೆ ಕುಮ್ಮಕ್ಕು ನೀಡುವ ಭಾಷಣ ಮಾಡಿದ ಆರೋಪದಡಿ ಸಂಸದ ಅಕ್ಬರ್ ಲೋನೆ ಅವರ ಪುತ್ರ ಹಿಲಾಲ್ ಅಕ್ಬರ್ ವಿರುದ್ಧ ಪ್ರಕರಣ ದಾಖಲಾಗಿದೆ.

MP Akbar Lone's son booked under ULA for delivering 'hate speech'
'ದ್ವೇಷ ಭಾಷಣ' ಆರೋಪದಡಿ ಸಂಸದ ಅಕ್ಬರ್ ಲೋನೆ ಪುತ್ರ ಅರೆಸ್ಟ್​
author img

By

Published : Feb 16, 2021, 3:36 PM IST

ಜಮ್ಮು ಮತ್ತು ಕಾಶ್ಮೀರ: ಸಾರ್ವಜನಿಕ ರ‍್ಯಾಲಿಯಲ್ಲಿ ದ್ವೇಷ ಭಾಷಣ ಮಾಡಿದ ಆರೋಪದಡಿ ನ್ಯಾಷನಲ್​ ಕಾನ್ಫರೆನ್ಸ್​ ಪಕ್ಷದ ಸಂಸದ ಅಕ್ಬರ್ ಲೋನೆ ಅವರ ಪುತ್ರ ಹಿಲಾಲ್ ಅಕ್ಬರ್​ನನ್ನು ಪೊಲೀಸರು ಬಂಧಿಸಿದ್ದಾರೆ.

ಡಿಡಿಸಿ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಜಮ್ಮು - ಕಾಶ್ಮೀರದ ಬಂಡಿಪೋರಾದಲ್ಲಿ ನಡೆದ ಸಾರ್ವಜನಿಕ ರ‍್ಯಾಲಿಯಲ್ಲಿ ದ್ವೇಷದ ಮನೋಭಾವ ಬಿತ್ತುವ, ಗಲಭೆಗೆ ಕುಮ್ಮಕ್ಕು ನೀಡುವ ಭಾಷಣ ಮಾಡಿದ್ದರು ಎಂದು ಆರೋಪಿಸಲಾಗಿತ್ತು. ಈ ಸಂಬಂಧ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಲ್ಎ) ಅಡಿ ಇಂದು ಕೇಸ್​ ದಾಖಲಿಸಲಾಗಿದೆ.

ಇದನ್ನೂ ಓದಿ: ಪ್ಯಾಂಗಾಂಗ್​ ಸರೋವರದಿಂದ ಭಾರತ ಚೀನಾ ಪಡೆಗಳು ವಾಪಸ್​.. ಮತ್ತಷ್ಟು ವಿಡಿಯೋ

ಎಂಎಲ್‌ಎ ಹಾಸ್ಟೆಲ್‌ನಿಂದ ಹಿಲಾಲ್ ಅಕ್ಬರ್​ನನ್ನು ಪೊಲೀಸ್ ಠಾಣೆಗೆ ಕರೆತರಲಾಗಿದ್ದು, ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು ಎಂದು ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.