ETV Bharat / crime

RTO ಹೆಸರಲ್ಲಿ ಹಣ ವಸೂಲಿ ಮಾಡುತ್ತಿದ್ದ ಮೂವರ ಬಂಧನ - ಯಾದಗಿರಿ ಜಿಲ್ಲೆ

ಪ್ರಾದೇಶಿಕ ಸಾರಿಗೆ ಅಧಿಕಾರಿಗಳು (ಆರ್‌ಟಿಒ) ಎಂದು ಹೇಳಿ ವಾಹನಗಳನ್ನು ತಡೆದು ಹಣ ವಸೂಲಿ ಮಾಡುತ್ತಿದ್ದ ಮೂವರನ್ನು ಗುರುಮಠಕಲ್‌ ಪೊಲೀಸ್‌ ಬಂಧಿಸಿದ್ದಾರೆ.

Money collection in the name of RTO; 3 arrested in Gurumitkal, Yadgiri
RTO ಹೆಸರಿನಲ್ಲಿ ಹಣ ವಸೂಲಿ ಮಾಡುತ್ತಿದ್ದ ಮೂವರ ಬಂಧನ
author img

By

Published : Jun 27, 2021, 2:57 AM IST

Updated : Jun 27, 2021, 5:41 AM IST

ಗುರುಮಠಕಲ್(ಯಾದಗಿರಿ): ಆರ್‌ಟಿಒ ಅಧಿಕಾರಿಗಳೆಂದು ಹೇಳಿಕೊಂಡು ವಾಹನ ಚಾಲಕರಿಗೆ ಬೆದರಿಸುತ್ತಿದ್ದ ಮೂವರನ್ನು ಪಟ್ಟಣದ ಪೊಲೀಸರು ಬಂಧಿಸಿದ್ದಾರೆ. ಗುರುಮಠಕಲ್ ಪೊಲೀಸ್ ಠಾಣಾ ವ್ಯಾಪ್ತಿಗೆ ಹೊಂದಿಕೊಂಡ ಹಂದರಕಿ ಕ್ರಾಸ್ ಬಳಿ ಘಟನೆ ನಡೆದಿದೆ. ಶಿವಕುಮಾರ(22), ಪ್ರವೀಣ(20), ಶಶಿಕುಮಾರ (26) ಬಂಧಿತ ಆರೋಪಿಗಳು

ರಾಜ್ಯ ಹೆದ್ದಾರಿಗೆ ಅಡ್ಡಲಾಗಿ ಬ್ಯಾರಿಕೇಡ್‌ಗಳನ್ನು ಹಾಕಿ, ಹಾದು ಹೋಗುವ ವಾಹನಗಳನ್ನು ನಿಲ್ಲಿಸಿ ಸಾರಿಗೆ ಇಲಾಖೆಯ ಅಧಿಕಾರಿಗಳ ಹೆಸರು ಹೇಳಿ ತಪಾಸಣೆ ನೆಪದಲ್ಲಿ ಹಣ ವಸೂಲಿ ಮಾಡುತ್ತಿದ್ದರು. ಇವರ ಮೇಲೆ ಸಂಶಯಗೊಂಡ ಪ್ರೇಮಸಿಂಗ್ ಎಂಬ ಲಾರಿ ಚಾಲಕ ಪೊಲೀಸರಿಗೆ ದೂರು ನೀಡಿದ್ದಾನೆ. ಖಚಿತ ಮಾಹಿತಿ ಆಧರಿಸಿ ಪಿಐ ಖಾಜಾ ಹುಸೇನ ಮತ್ತು ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಖದೀಮರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಗುರುಮಠಕಲ್ ಪೊಲೀಸ್ ಠಾಣೆಯಲ್ಲಿ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ.

Last Updated : Jun 27, 2021, 5:41 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.