ETV Bharat / crime

ಇನ್​​ಸ್ಟಾಗ್ರಾಂನಲ್ಲಿ ಯುವತಿಗೆ ಮೆಸೇಜ್: ಸಂದೇಶ ಕಳುಹಿಸಿದವನ ಹತ್ಯೆಗೆ ಯತ್ನಿಸಿದ ಪ್ರಿಯಕರ ಮತ್ತವನ ತಂಡದ ಬಂಧನ

ಯುವತಿಗೆ ಆಟೋ ಚಾಲಕನೊಬ್ಬ ಇನ್​​ಸ್ಟಾಗ್ರಾಂನಲ್ಲಿ ಸಂದೇಶ ಕಳುಹಿಸಿ ಬಳಿಕ ಅದನ್ನು ಟ್ರೋಲ್‌ ಮಾಡಿದ್ದಾನೆ. ಇದರಿಂದ ರೋಚಿಗೆದ್ದ ಯುವತಿಯ ಪ್ರಿಯಕರ ಮತ್ತವನ ತಂಡ ಆಟೋ ಚಾಲಕನ ಮೇಲೆ ಮಾರಕಾಸ್ತ್ರಗಳಿಂದ ದಾಳಿ ಮಾಡಿ ಹತ್ಯೆಗೆ ಯತ್ನಿಸಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ಮಾಚೋಹಳ್ಳಿ ಬಳಿ ಈ ಘಟನೆ ನಡೆದಿದೆ.

Message to a young girl on Instagram; girl boy attacked to man for attempt murder in bangalore
ಇನ್ಸ್ಟಾಗ್ರಾಮ್‌ನಲ್ಲಿ ಯುವತಿಗೆ ಮೆಸೇಜ್;ಮಸೇಜ್ ಮಾಡಿದವನ ಹತ್ಯೆಗೆ ಯತ್ನಿಸಿದ ಯುವತಿಯ ಪ್ರಿಯಕರ ಮತ್ತವನ ತಂಡ ಬಂಧನ
author img

By

Published : Oct 5, 2021, 6:34 PM IST

Updated : Oct 5, 2021, 7:04 PM IST

ನೆಲಮಂಗಲ(ಬೆಂ.ಗ್ರಾಮಾಂತರ ಜಿಲ್ಲೆ): ಇನ್​​​ಸ್ಟಾಗ್ರಾಂನಲ್ಲಿ ಯುವತಿಗೆ ಆಟೋ ಚಾಲಕ ಮೆಸೇಜ್ ಮಾಡಿದ್ದು, ಅದು ಟ್ರೋಲ್ ಕೂಡ ಆಗಿತ್ತು. ಇದರಿಂದ ರೊಚ್ಚಿಗೆದ್ದ ಯುವತಿಯ ಪ್ರಿಯಕರ ಆಟೋ ಚಾಲಕ ಮತ್ತು ಆತನ ಸ್ನೇಹಿತನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿನ ಮಾಚೋಹಳ್ಳಿಯ ಕಾಮತ್ ಲೇಔಟ್‌ನಲ್ಲಿ ನಡೆದಿದೆ.

ಆಟೋ ಚಾಲಕ ನವೀನ್ ಇನ್​​​ಸ್ಟಾಗ್ರಾಂನಲ್ಲಿ ಯುವತಿಗೆ ಮೆಸೇಜ್ ಮಾಡಿದ್ದ. ಇದರಿಂದ ಕೆರಳಿದ ಯುವತಿಯ ಪ್ರಿಯಕರ ಪ್ರಜ್ವಲ್ ಫೋನ್ ಮಾಡಿ ನವೀನ್‌ಗೆ ವಾರ್ನ್ ಮಾಡಿದ್ದ. ನಂತರ ನವೀನ್ ಟ್ರೋಲ್ ಪೇಜ್‌ಗಳಲ್ಲಿ ಯುವತಿಯನ್ನು ಟ್ರೋಲ್ ಮಾಡಿದ್ದ.

ಟ್ರೋಲ್‌ನಿಂದ ಮತ್ತಷ್ಟು ಕೆರಳಿದ ಪ್ರಜ್ವಲ್ & ಟೀಮ್ ನವೀನ್ ಕೊಲೆಗೆ ಮುಹೂರ್ತ ಇಟ್ಟಿದ್ದು, ರಾಜಿಗೆಂದು ಕರೆದು ಕೊಲೆ ಮಾಡುವ ಸಂಚು ರೂಪಿಸಿದ್ದರು. ನವೀನ್ ಮತ್ತು ಹರೀಶ್ ಮಾತುಕತೆಗೆಂದು ಮಾಚೋಹಳ್ಳಿಯ ಕಾಮತ್ ಲೇಔಟ್‌ಗೆ ಬಂದಿದ್ದಾಗ ಲಾಂಗ್, ಮಚ್ಚುಗಳಿಂದ ಪ್ರಜ್ವಲ್, ಆತನ ಸಹಚರರು ನವೀನ್ ಹಾಗೂ ಆತನ ಸ್ನೇಹಿತ ಹರೀಶ್​​ನ ಹೊಟ್ಟೆ ಮತ್ತು ತಲೆ ಭಾಗಕ್ಕೆ ಮಚ್ಚಿನಿಂದ ಕೊಚ್ಚಿ ಪರಾರಿಯಾಗಿದ್ದಾರೆ.

ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ಸ್‌ಪೆಕ್ಟರ್‌ ಮಂಜುನಾಥ್ ನೇತೃತ್ವದ ಪೊಲೀಸ್ ತಂಡ ಆರೋಪಿಗಳಾದ ಪ್ರಜ್ವಲ್‌@ ಕಪ್ಪೆ, ಕಿರಣ@ವಾಲೆ, ಮನೋಜ್, ಮೂರ್ತಿ, ಸಂದೀಪನನ್ನು ಬಂಧಿಸಿದ್ದಾರೆ. ತಲೆಮರೆಸಿಕೊಂಡಿರುವ ಯುವರಾಜ@ನಾಯಿ, ದರ್ಶನ್, ಕುಮಾರ್ ಪತ್ತೆಗಾಗಿ ಹುಡುಕಾಟ ನಡೆಸಿದ್ದಾರೆ.

Last Updated : Oct 5, 2021, 7:04 PM IST

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.