ETV Bharat / crime

ಗಂಡನ ಮನೆಯವರ ಕಿರುಕುಳ... ಆತ್ಮಹತ್ಯೆಗೆ ಶರಣಾದ ವಿವಾಹಿತೆ - ಆತ್ಮಹತ್ಯೆ ಮಾಡಿಕೊಂಡ ಮಹಿಳೆ

ಗಂಡನ ಮನೆಯವರ ಕಿರುಕುಳದಿಂದಾಗಿ ವಿವಾಹಿತೆಯೋರ್ವಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರ್​ನಲ್ಲಿ ನಡೆದಿದೆ.

MARRIED WOMAN
MARRIED WOMAN
author img

By

Published : Jul 3, 2021, 5:46 PM IST

ಕಾನ್ಪುರ್​(ಉತ್ತರ ಪ್ರದೇಶ): ವಿವಾಹಿತೆಯೋರ್ವಳು ಉತ್ತರ ಪ್ರದೇಶ ಕಾನ್ಪುರ್​​ದ ಗೋವಿಂದನಗರ ಪೊಲೀಸ್​ ಠಾಣಾ ಪ್ರದೇಶದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ. ಗಂಡನ ಮನೆಯವರ ಕಿರುಕುಳದಿಂದ ಈ ನಿರ್ಧಾರ ಕೈಗೊಂಡಿದ್ದಾಗಿ ತಿಳಿದು ಬಂದಿದೆ.

ಕಾನ್ಪುರ್​ದ ಗೋವಿಂದನಗರ ಪೊಲೀಸ್ ಠಾಣಾ ವ್ಯಾಪ್ತಿಯ ದಾದಾ ನಗರ ಫ್ಯಾಕ್ಟರಿ ಪ್ರದೇಶದಲ್ಲಿ ವಾಸವಾಗಿದ್ದ ವಿವಾಹಿತ ಮಹಿಳೆ, ಗಂಡನ ಸಹೋದರರೊಂದಿಗೆ ಬೇಸರಗೊಂಡು ಆತ್ಮಹತ್ಯೆ ನಿರ್ಧಾರ ಕೈಗೊಂಡಿದ್ದಾಳೆ. 2019ರಲ್ಲಿ ಪ್ರದೀಪ್​ ಆನಂದ್ ಶರ್ಮಾ ಜೊತೆ ವಿವಾಹ ಮಾಡಿಕೊಂಡಿದ್ದ ಮಹಿಳೆ ಪೂಜಾ ಜೊತೆ ಗಂಡನ ಮನೆಯವರು ಮೇಲಿಂದ ಮೇಲೆ ಜಗಳವಾಡುತ್ತಿದ್ದರು.

ಪೋಷಕರಿಗೆ ಮಾಹಿತಿ ನೀಡಿದ್ದ ಪೂಜಾ

ತಾನು ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೂ ಮುಂಚಿತವಾಗಿ ಪೂಜಾ ತನ್ನ ಸಹೋದರನಿಗೆ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ವ್ಯಾಟ್ಸ್​ಆ್ಯಪ್ ಮಾಡಿದ್ದಾಳೆ. ಇದನ್ನ ನೋಡಿರುವ ಆಕೆಯ ಸಹೋದರ ತಕ್ಷಣವೇ ತಂದೆಗೆ ಮಾಹಿತಿ ನೀಡಿದ್ದಾನೆ. ಮಹಿಳೆಯ ತಂದೆ ಅಳಿಯನಿಗೆ ಫೋನ್ ಮಾಡಿ ಮಾಹಿತಿ ನೀಡಬೇಕು ಎನ್ನುವಷ್ಟರಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ತಕ್ಷಣವೇ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಆದರೆ ಸಾವನ್ನಪ್ಪಿದ್ದಾಳೆಂದು ವೈದ್ಯರು ಘೋಷಣೆ ಮಾಡಿದ್ದಾರೆ.

ಇದನ್ನೂ ಓದಿರಿ: 'ಕಿರಣ್​ ರಾವ್​​​ ಇಲ್ಲದೇ ಜೀವನ ಊಹಿಸಿಕೊಳ್ಳಲು ಸಾಧ್ಯವಿಲ್ಲ' ಎಂದಿದ್ದ ಅಮೀರ್​!

ಪ್ರಕರಣದ ಬಗ್ಗೆ ಪೊಲೀಸರಿಗೆ ಗೊತ್ತಾಗುತ್ತಿದ್ದಂತೆ ಸ್ಥಳಕ್ಕಾಗಮಿಸಿ, ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಗಂಡನ ಮನೆಯವರ ವಿರುದ್ಧ ದೂರು ದಾಖಲು ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.