ಲಖನೌ( ಉತ್ತರಪ್ರದೇಶ): ತಮ್ಮದೇ ನಿವಾಸದ ಮೇಲಿನ ಮಹಡಿಯಿಂದ ಜಿಗಿದ ವ್ಯಕ್ತಿಯೊಬ್ಬ ಗಂಭೀರವಾಗಿ ಗಾಯಗೊಂಡಿದ್ದಾನೆ. ಇನ್ನು ಮಹಡಿಯಿಂದ ಜಿಗಿಯುತ್ತಿದ್ದ ಗಂಡನನ್ನು ಉಳಿಸಲು ಹೋದ ಪತ್ನಿ ಸಾವನ್ನಪ್ಪಿರುವ ಘಟನೆ ಉತ್ತರಪ್ರದೇಶ ರಾಜಧಾನಿ ಲಖನೌದ ಗಣೇಶ್ ಗಂಜ್ನಲ್ಲಿ ನಡೆದಿದೆ.
ಗಣೇಶ್‌ಗಂಜ್‌ನ ಸಂದೀಪ್ (30) ರಾತ್ರಿ 9 ಗಂಟೆ ಸುಮಾರಿಗೆ ಕುಡಿದ ಅಮಲಿನಲ್ಲಿ ಮನೆಗೆ ಮರಳಿದ್ದ, ಈ ವೇಳೆ ಮಹಡಿ ಮೇಲಿಂದ ಜಿಗಿದಿದ್ದಾನೆ ಎಂದು ಕೇಂದ್ರ ವಲಯದ ಹೆಚ್ಚುವರಿ ಪೊಲೀಸ್ ಉಪ ಆಯುಕ್ತ ರಾಜೇಶ್ ಶ್ರೀವಾಸ್ತವ ತಿಳಿಸಿದ್ದಾರೆ. ಸಂದೀಪ್ ತನ್ನ ಪತ್ನಿ ರೋಲಿ ಜೊತೆ ಜಗಳವಾಡಿದ್ದ ಎಂದೂ ಅವರು ಮಾಹಿತಿ ನೀಡಿದ್ದಾರೆ.
ಏನಿದು ಪ್ರಕರಣ: ಪತ್ನಿ ಜತೆ ಜಗಳವಾಡಿಕೊಂಡಿದ್ದ ಸಂದೀಪ್, ಕೋಪದಲ್ಲಿ ಟೆರೇಸ್ನಿಂದ ಜಿಗಿದಿದ್ದಾನೆ. ಇದೇ ವೇಳೆ ಗಂಡನನ್ನು ಟೆರೇಸ್ನಿಂದ ಜಿಗಿಯದಂತೆ ಹಿಡಿಯಲು ಬಂದ ಪತ್ನಿ ರೋಲಿ ಜೋಲಿ ಸಾಲದೇ ಆತನೊಂದಿಗೆ ಕೆಳಕ್ಕೆ ಬಿದ್ದು ಮೃತಪಟ್ಟಿದ್ದಾಳೆ. ಘಟನೆಯಲ್ಲಿ ಸಂದೀಪ್ ಗಂಭೀರವಾಗಿ ಗಾಯಗೊಂಡಿದ್ದು,ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸ್ ಉಪ ಆಯುಕ್ತರು ಮಾಹಿತಿ ನೀಡಿದ್ದಾರೆ.
ಇಬ್ಬರು ಜಗಳ ಮಾಡಿ ಟೆರೇಸ್ನಿಂದ ಜಿಗಿಯುತ್ತಿದ್ದಂತೆ ಮಕ್ಕಳ ಆಕ್ರಂದನ ಕೇಳಿ ಸ್ಥಳೀಯರು ಸ್ಥಳಕ್ಕೆ ಆಗಮಿಸಿ, ದಂಪತಿಯನ್ನ ಆಸ್ಪತ್ರೆಗೆ ಸೇರಿಸಿದ್ದಾರೆ. ಆಸ್ಪತ್ರೆಯಲ್ಲಿ ರೋಲಿ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ. ಸಂದೀಪ್ ನನ್ನು ಕೆಜಿಎಂಯುನ ಟ್ರಾಮಾ ಸೆಂಟರ್‌ಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಇದನ್ನು ಓದಿ:ನಿಶ್ಚಿತಾರ್ಥವಾಗಿದ್ದ ಅಪ್ರಾಪ್ತೆಯ ಅತ್ಯಾಚಾರ, ಕೊಲೆ; ಬಳಿಕ ಯುವಕನೂ ಆತ್ಮಹತ್ಯೆ