ಬಂಗಾವ್ (ಪಶ್ಚಿಮ ಬಂಗಾಳ): ಮಾನಸಿಕ ಖಿನ್ನತೆಗೆ ಒಳಗಾದ ವ್ಯಕ್ತಿಯೊಬ್ಬ ತನ್ನ ಮರ್ಮಾಂಗವನ್ನೇ ಕತ್ತರಿಸಿಕೊಂಡ ಘಟನೆ ಪಶ್ಚಿಮ ಬಂಗಾಳದ ಬಂಗಾವ್ನಲ್ಲಿ ನಡೆದಿದೆ. ಗಂಭೀರ ಗಾಯಗೊಂಡ ಆತನನ್ನು ಸ್ಥಳೀಯ ಉಪ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ನಂತರ ವೈದ್ಯರ ಸಲಹೆ ಮೇರೆಗೆ ಕೋಲ್ಕತ್ತಾದ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಗಾಯಗೊಂಡ ವ್ಯಕ್ತಿಯನ್ನು ಶ್ಯಾಮಲ್ ಮುಂಡಾ ಎಂದು ಗುರುತಿಸಲಾಗಿದೆ. ಬುಧವಾರ ಬೆಳಗ್ಗೆ ಮನೆಯ ಶೌಚಾಲಯದಲ್ಲಿ ರಕ್ತ ಕಂಡ ಬಳಿಕ ಕುಟುಂಬಸ್ಥರಿಗೆ ವಿಷಯ ತಿಳಿದಿದೆ.
ಗಾಯಾಳು ಕಳೆದ 6 ತಿಂಗಳಿಂದ ಖಿನ್ನತೆಯಿಂದ ಬಳಲುತ್ತಿದ್ದ. ಖಿನ್ನತೆಯಿಂದಲೇ ಈ ಘಟನೆ ನಡೆದಿದೆ ಎಂದು ಕುಟುಂಬದವರು ಹೇಳಿದ್ದಾರೆ. ಖಿನ್ನತೆಗೆ ಒಳಗಾದ ವ್ಯಕ್ತಿಯ ಸಹೋದರ ನಿರ್ಮಲ್ ಮುಂಡಾ ಅವರು ಇಂದು ಬೆಳಗ್ಗೆ ಶೌಚಾಲಯಕ್ಕೆ ಹೋಗಿ ರಕ್ತ ನೋಡಿದ್ದು, ತಕ್ಷಣ ತನ್ನ ತಾಯಿಗೆ ಕರೆ ಮಾಡಿ ನೆಲದ ಮೇಲೆ ರಕ್ತ ಬಿದ್ದಿರುವುದನ್ನು ತಿಳಿಸಿದ್ದಾರೆ.
ಶ್ಯಾಮಲ್ ಮುಂಡಾನ ಕೊಠಡಿಯಲ್ಲಿ ನೋಡಿದಾಗ ಕೊಠಡಿಯಲ್ಲೆಲ್ಲ ರಕ್ತ ಬಿದ್ದಿತ್ತು. ತನ್ನ ಮರ್ಮಾಂಗ ಕತ್ತರಿಸಿ ಹತ್ತಿರದ ಕಾಡಿನಲ್ಲಿ ಎಸೆದಿದ್ದೇನೆ ಎಂದು ಶ್ಯಾಮಲ್ ಈ ಸಂದರ್ಭದಲ್ಲಿ ಸಹೋದರ ನಿರ್ಮಲ್ಗೆ ಹೇಳಿದ್ದಾನೆ. ವಿಷಯ ತಿಳಿದ ಕುಟುಂಬಸ್ಥರು ಶ್ಯಾಮಲನನ್ನು ಬಂಗಾವ್ ಉಪಜಿಲ್ಲಾ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆತನ ಆರೋಗ್ಯ ಸ್ಥಿತಿ ಹದಗೆಟ್ಟಿದ್ದರಿಂದ, ಪ್ರಾಥಮಿಕ ಚಿಕಿತ್ಸೆಯ ನಂತರ ವೈದ್ಯರು ಶೀಘ್ರವಾಗಿ ಆತನನ್ನು ಕೋಲ್ಕತ್ತಾಗೆ ವರ್ಗಾಯಿಸಿದ್ದಾರೆ.
ಇದನ್ನೂ ಓದಿ: ಸಂಗಾತಿ ಜತೆಗಿನ ಸಂಭೋಗದ ವೇಳೆ ಮುರಿದು ಹೋಯ್ತು ವ್ಯಕ್ತಿಯ ಮರ್ಮಾಂಗ!