ETV Bharat / crime

ಭೂವಿವಾದ: ಮೈದುನನಿಂದಲೇ ಮಾಜಿ ವಾರ್ಡ್​ ಸದಸ್ಯೆಯ ಬರ್ಬರ ಹತ್ಯೆ - ವಿಡಿಯೋ - ಸಂಗರೆಡ್ಡಿ

ತೆಲಂಗಾಣದ ಸಂಗರೆಡ್ಡಿ ಜಿಲ್ಲೆಯಲ್ಲಿ ಮಹಿಳೆಯನ್ನು ಅವರ ಮೈದುನನೇ ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದಾನೆ.

A Woman was brutally murdered by her brother in law
ಮೈದುನನಿಂದಲೇ ಮಾಜಿ ವಾರ್ಡ್​ ಸದಸ್ಯೆಯ ಬರ್ಬರ ಹತ್ಯೆ
author img

By

Published : Mar 22, 2021, 4:24 PM IST

ಸಂಗರೆಡ್ಡಿ (ತೆಲಂಗಾಣ): ಭೂವಿವಾದ ತಾರಕ್ಕೇರಿ ಮಾಜಿ ವಾರ್ಡ್​ ಸದಸ್ಯೆಯನ್ನು ಅವರ ಮೈದುನನೇ ದಾರುಣವಾಗಿ ಕೊಲೆ ಮಾಡಿರುವ ಘಟನೆ ತೆಲಂಗಾಣದ ಸಂಗರೆಡ್ಡಿ ಜಿಲ್ಲೆಯಲ್ಲಿ ನಡೆದಿದೆ.

ಮೈದುನನಿಂದಲೇ ಮಾಜಿ ವಾರ್ಡ್​ ಸದಸ್ಯೆಯ ಬರ್ಬರ ಹತ್ಯೆ

ಜಹೀರಾಬಾದ್ ಮಂಡಲದ ಪಾಸ್ಟಾಪುರ ನಿವಾಸಿ ಶಬಾನಾ ಬೇಗಂ, ಕೊಲೆಯಾದ ಮಹಿಳೆ. ಶಬಾನಾರ ಪತಿ ಜಹಾಂಗೀರ್ ಹಾಗೂ ಪತಿಯ ಸಹೋದರರಾದ ಯಾಕೂಬ್​ ಮತ್ತು ಖಾಜಾ ನಡುವೆ ನಿನ್ನೆ ರಾತ್ರಿ ಜಮೀನಿನ ವಿಚಾರಕ್ಕೆ ಗಲಾಟೆಯಾಗಿದೆ. ಈ ವೇಳೆ ಕತ್ತಿ ಎತ್ತಿಕೊಂಡ ಖಾಜಾ, ಶಬಾನಾರ ಕುತ್ತಿಗೆ ಕತ್ತರಿಸಿದ್ದಾನೆ.

ಇದನ್ನೂ ಓದಿ: ಹಳೇ ದ್ವೇಷ: ಚಾಕುವಿನಿಂದ ಇರಿದು ಗ್ರಾ.ಪಂ. ಸದಸ್ಯನ ಕೊಲೆಗೆ ಯತ್ನ

ಗಂಭೀರವಾಗಿ ಗಾಯಗೊಂಡಿದ್ದ ಶಬಾನರನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ವೈದ್ಯರು ಈಗಾಗಲೇ ಅವರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಜಹೀರಾಬಾದ್ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಆರೋಪಿ ಖಾಜಾ ಪರಾರಿಯಾಗಿದ್ದಾನೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.