ETV Bharat / crime

ಮಂಡ್ಯ: ಆಟೋಗೆ ಟಿಪ್ಪರ್‌ ಲಾರಿ ಡಿಕ್ಕಿಯಾಗಿ ಗ್ರಾ.ಪಂ.ಅಧ್ಯಕ್ಷೆ ಸೇರಿ ಒಂದೇ ಕುಟುಂಬದ ಐವರ ದುರ್ಮರಣ - ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ನೀಲಮಾಕನಹಳ್ಳಿ ಬಳಿ ಭೀಕರ ಅಪಘಾತ

ಟಿಪ್ಪರ್ ಲಾರಿ-ಆಟೋ ನಡುವೆ ಡಿಕ್ಕಿಯಾಗಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ, ಇಬ್ಬರು ಮಕ್ಕಳು ಸೇರಿ ಐವರು ಮೃತಪಟ್ಟಿರುವ ದಾರುಣ ಘಟನೆ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ನೀಲಮಾಕನಹಳ್ಳಿ ಸಮೀಪ ನಡೆದಿದೆ.

Karnataka: Five people including two minor children killed in a road accident in Mandya
ಮಂಡ್ಯ: ಆಟೋ-ಟಿಪ್ಪರ್‌ ಲಾರಿ ನಡುವೆ ಭೀಕರ ಅಪಘಾತ; ಐವರು ದುರ್ಮರಣ
author img

By

Published : Nov 19, 2021, 11:34 PM IST

Updated : Nov 20, 2021, 4:35 AM IST

ಮಂಡ್ಯ: ಮಳವಳ್ಳಿ ತಾಲೂಕಿನಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಟಿಪ್ಪರ್‌ ಲಾರಿ-ಆಟೋ ನಡುವೆ ಡಿಕ್ಕಿಯಾಗಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ, ಇಬ್ಬರು ಮಕ್ಕಳು ಸೇರಿ ಒಂದೇ ಕುಟುಂಬದ ಐವರು ಮೃತಪಟ್ಟಿರುವ ದಾರುಣ ಘಟನೆ ನೀಲಮಾಕನಹಳ್ಳಿ ಸಮೀಪ ಸಂಭವಿಸಿದೆ.

ಬಂಡೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ, ದಡದಪುರ ಗ್ರಾಮದ ಮುತ್ತಮ್ಮ(45), ಬಸಮ್ಮಣಿ (30), ವೆಂಕಟೇಶ್‌ (25) ಹಾಗೂ ಬಸಮ್ಮಣಿ ಪುತ್ರಿ ಚಾಮುಂಡೇಶ್ವರಿ (8), 2 ವರ್ಷದ ಗಂಡು ಮೃತ ದುರ್ದೈವಿಗಳು.

ಮುತ್ತಮ್ಮ ಅವರ ಕುಟುಂಬ ದೇವಸ್ಥಾನಕ್ಕೆ ಹೋಗಿ ವಾಪಸ್‌ ಬರುತ್ತಿದ್ದಾಗ ನೆಲಮಾಕನಹಳ್ಳಿ ಬಳಿ ವೇಗವಾಗಿ ಬಂದ ಟಿಪ್ಪರ್‌ ಲಾರಿ ಆಟೋಗೆ ಡಿಕ್ಕಿ ಹೊಡೆದು ದುರಂತ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ಪ್ಯಾಸೆಂಜರ್‌ ಆಟೋ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ.

Last Updated : Nov 20, 2021, 4:35 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.