ಕಡಬ : ಯಾವುದೇ ವಿಚಾರಣೆ ನಡೆಸದೆ ಠಾಣೆಗೆ ಕರೆದೊಯ್ದು ಪೊಲೀಸರು ಹೊಡೆದಿರುವುದಾಗಿ ವ್ಯಕ್ತಿಯೊಬ್ಬರು ಆರೋಪಿಸಿರುವ ಘಟನೆ ನಗರದಲ್ಲಿ ನಡೆದಿದೆ.
ಘಟನೆ ಡಿ.26 ರಂದು ನಡೆದಿದ್ದು ಎನ್ನಲಾಗಿದೆ. ನೀರಾಜೆಯ ಸುರೇಶ್ ಎಂಬವರ ಮೇಲೆ ಸಂಬಂಧಿ ಮಹಿಳೆಯೊಬ್ಬರು ಕಡಬ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಈ ಹಿನ್ನೆಲೆ ಕಡಬ ಠಾಣಾ ಪೊಲೀಸ್ ಕಾನ್ಸ್ಟೇಬಲ್ಗಳು ಸುರೇಶ್ ಅವರನ್ನು ಠಾಣೆಯಲ್ಲಿ ಕೂಡಿಹಾಕಿ ನೆಲದಲ್ಲಿ ಮಲಗಿಸಿ ಕಾಲಿಗೆ, ತೊಡೆಮೇಲೆ ಬೂಟ್ ಕಾಲಿನಿಂದ ಒದ್ದಿರುವುದಾಗಿ ಸುರೇಶ್ ಆರೋಪಿದ್ದಾರೆ.
ಓದಿ-ದಾಳಿಯ ನಂತರ ಎಚ್ಚೆತ್ತ ವಿಸ್ಟ್ರಾನ್: ಷರತ್ತುಗಳ ಮೇಲೆ ನೇಮಕಾತಿ ಪ್ರಕ್ರಿಯೆ ಆರಂಭ
ಸುರೇಶ್ನನ್ನು ವಿಚಾರಿಸಲು ಠಾಣೆಗೆ ಪುರುಷೋತ್ತಮ್ ಎಂಬ ವ್ಯಕ್ತಿ ಆಗಮಿಸಿದ ನಂತರ ಪೊಲೀಸರು ಮತ್ತಷ್ಟು ಹೊಡೆದಿದ್ದಾರೆ ಎನ್ನಲಾಗಿದೆ. ಪೊಲೀಸರ ಹಲ್ಲೆಯಿಂದ ಮಾನಸಿಕವಾಗಿ ನೊಂದ ಸುರೇಶ್ ಈ ವಿಚಾರನ್ನು ಯಾರೊಂದಿಗೂ ಹಂಚಿಕೊಂಡಿರಲಿಲ್ಲವಂತೆ. ಇದೀಗ ಕಾಲು ನೋವು ಕಾಣಿಸಿಕೊಂಡ ಹಿನ್ನೆಲೆ ಜ.18ರಂದು ಕಡಬ ಸಮುದಾಯ ಆಸ್ಪತೆಗೆ ದಾಖಲಾಗಿದ್ದಾರೆ.
ಈ ಬಗ್ಗೆ ಮಾಹಿತಿ ತಿಳಿದ ಕೂಡಲೇ ಕಡಬ ಠಾಣಾ ಎಸ್ಐ ರುಕ್ಮ ನಾಯ್ಕ್ ಆಸ್ಪತ್ರೆಗೆ ಭೇಟಿ ನೀಡಿ ಸುರೇಶ್ ಅವರನ್ನು ಘಟನೆ ಬಗ್ಗೆ ವಿಚಾರಿಸಿದ್ದಾರೆ. ಬಳಿಕ ಸಿಬ್ಬಂದಿ ಸುರೇಶರನ್ನು ಹೊಡೆದಿರುವುದಾಗಿ ಒಪ್ಪಿಕೊಂಡು ಕ್ಷಮೆಯಾಚಿಸಿರುವುದಾಗಿ ತಿಳಿದುಬಂದಿದೆ.