ETV Bharat / crime

ಮಹಿಳೆ ಮೇಲೆ 60 ಕಾಮುಕರಿಂದ ಅತ್ಯಾಚಾರ ಆರೋಪ : ತನಿಖೆ ಕೈಗೊಂಡ ಪೊಲೀಸರು

ಮಹಿಳೆಯ ಮೇಲೆ 60 ಮಂದಿಯಿಂದ ಅತ್ಯಾಚಾರ ಆರೋಪ ಕೇಳಿಬಂದಿದ್ದು, ಜಾರ್ಖಂಡ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Ill woman saved by police; Claims she was 'raped by 60 people'
ಮಹಿಳೆ ಮೇಲೆ 60 ಕಾಮುಕರಿಂದ ಅತ್ಯಾಚಾರ ಆರೋಪ : ತನಿಖೆ ಕೈಗೊಂಡ ಪೊಲೀಸರು
author img

By

Published : Mar 5, 2021, 3:33 AM IST

ಸೆರೈಕೆಲಾ(ಜಾರ್ಖಂಡ್): ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆಯನ್ನು ಸೆರೈಕೆಲಾ ನಗರದ ಬಳಿ ಜಾರ್ಖಂಡ್ ಪೊಲೀಸರು ರಕ್ಷಿಸಿದ್ದು, ತನ್ನ ಮೇಲೆ ಅತ್ಯಾಚಾರವಾಗಿದೆ ಎಂದು ಮಹಿಳೆ ಆರೋಪಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಚಂಡಿಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗಂಭೀರವಾಗಿ ಗಾಯಗೊಂಡ ಮಹಿಳೆಯನ್ನು ಪೊಲೀಸರು ರಕ್ಷಣೆ ಮಾಡಿದ್ದರು. ಮಾನಸಿಕ ಅಸ್ವಸ್ಥೆ ಎಂದು ಮೇಲ್ನೋಟಕ್ಕೆ ತಿಳಿದುಬಂದಿದ್ದು, ಆಕೆಯನ್ನು ಹತ್ತಿರ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿತ್ತು.

ಇದನ್ನೂ ಓದಿ: 'ಮಹಿಳಾ ಕಾರ್ಪೊರೇಟರ್​ಗೆ ಲೈಂಗಿಕ ಕಿರುಕುಳ ಆರೋಪ: ಬಿಜೆಪಿ ಕಾರ್ಪೋರೇಟರ್ ಬಂಧನ'

ಮಹಿಳೆಯನ್ನು ವಿಚಾರಣೆ ನಡೆಸಿದಾಗ ''ನನ್ನನ್ನು ಅಪಹರಣ ಮಾಡಲಾಗಿದ್ದು, ಸುಮಾರು ಒಂದು ತಿಂಗಳ ಕಾಲ ಬಂಧನದಲ್ಲಿರಿಸಿ, ಸುಮಾರು 60 ಮಂದಿ ಅತ್ಯಾಚಾರ ನಡೆಸಿದ್ದಾರೆ'' ಎಂದು ಆರೋಪಿಸಿದ್ದಾಳೆ ಎಂದು ಡಿಸಿಪಿ ಸಂಜಯ್ ಸಿಂಗ್ ತಿಳಿಸಿದ್ದಾರೆ.

ಆಕೆ ಆರೋಪ ಗಂಭೀರವಾಗಿ ಪರಿಗಣಿಸಿದ ಪೊಲೀಸರು ತನಿಖೆ ಕೈಗೊಂಡಿದ್ದು, ಆಕೆ ಇದ್ದ ಸ್ಥಳದಲ್ಲಿನ ಇಬ್ಬರು ಯುವಕರನ್ನು ವಿಚಾರಣೆ ನಡೆಸಿದ್ದಾರೆ. ಈ ಕುರಿತು ತನಿಖೆ ಪ್ರಗತಿಯಲ್ಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.