ನವದೆಹಲಿ: ಗುಜರಾತ್ ಮೂಲದ ಸ್ಟೇನ್‌ಲೆಸ್ ಸ್ಟೀಲ್ ಮತ್ತು ಲೋಹದ ಪೈಪ್‌ಗಳ ತಯಾರಿಕೆ ಕಂಪನಿ ಮೇಲೆ ದಾಳಿ ಮಾಡಿದ್ದ ಆದಾಯ ತೆರಿಗೆ ಅಧಿಕಾರಿಗಳು 500 ಕೋಟಿ ರೂಪಾಯಿಗಳಿಗೂ ಅಧಿಕ ಅಕ್ರಮ ಅವ್ಯವಹಾರವನ್ನು ಪತ್ತೆ ಹಚ್ಚಿದ್ದಾರೆ.
ಕಳೆದ ತಿಂಗಳು ಈ ಕಂಪನಿ ಹಾಗೂ ಸಂಬಂಧಿಸಿದ ಕಚೇರಿಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದರು. ದಾಖಲೆಗಳ ಪರಿಶೀಲನೆ ಬಳಿಕ ಇಂದು ಮಾಹಿತಿ ನೀಡಿರುವ ಸಿಬಿಡಿಟಿ ಅಧಿಕಾರಿಗಳು, ಸರ್ಕಾರಕ್ಕೆ ಲೆಕ್ಕ ನೀಡದ 500 ಕೋಟಿ ರೂಪಾಯಿಗೂ ಅಧಿಕ ವಹಿವಾಟು ನಡೆಸಿರುವುದು ಪತ್ತೆಯಾಗಿದೆ ಎಂದು ಹೇಳಿದ್ದಾರೆ.
ನ.23 ರಂದು ಅಹಮದಾಬಾದ್ ಹಾಗೂ ಮುಂಬೈನ 30 ಕಡೆ ಏಕಕಾಲದಲ್ಲಿ ದಾಳಿ ಮಾಡಿ ತನಿಖೆ ಪ್ರಾರಂಭಿಸಲಾಗಿತ್ತು. ಈ ವೇಳೆ ಅಪಾರ ಪ್ರಮಾಣದ ದಾಖಲೆಗಳು, ಡಿಜಿಟಲ್ ಪುರಾವೆಗಳು ಸೇರಿದಂತೆ ಮಹತ್ತರವಾದ ಆಸ್ತಿಗಳ ದಾಖಲೆಗಳು ಪತ್ತೆಯಾಗಿದ್ದವು. ಇವುಗಳ ಪರಿಶೀಲನ ವೇಳೆ ಲೆಕ್ಕವಿಲ್ಲದ ಸರಕುಗಳ ಮಾರಾಟ ಹಾಗೂ ಸಾಮಾನ್ಯ ಖಾತೆಯ ಪುಸ್ತಕಗಳಲ್ಲಿ ದಾಖಲಾಗದ ನಗದು ವಿವರಗಳಲ್ಲಿ ಅವ್ಯವಹಾರ ಕಂಡುಬಂದಿರುವುದಾಗಿ ಮಾಹಿತಿ ನೀಡಿದ್ದಾರೆ.
ಜೊತೆಗೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ಲೆಕ್ಕ ತೋರಿಸಲಾಗಿದೆ. ಆದಾಯ ತೆರಿಗೆ ಕಡಿತದ ಬಗ್ಗೆ ಕೆಲವು ವಾಟ್ಸಾಪ್ ಚಾಟ್ ಮಾಡಲಾಗಿದ್ದು, ಅವುಗಳನ್ನು ಅಳಿಸಲಾಗಿದೆ. ಬೃಹತ್ ವಸತಿಗಳನ್ನು ಪಡೆದಿರುವುದು ಬೆಳಕಿಗೆ ಬಂದಿದ್ದು, 18 ಬ್ಯಾಂಕ್ ಲಾಕರ್‌ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಆದಾಯ ತೆರಿಗೆ ಅಧಿಕಾರಿಗಳು ವಿವರಿಸಿದ್ದಾರೆ.
ಇದನ್ನೂ ಓದಿ: ವರ್ಕ್ ಫ್ರಮ್ ಹೋಂಗಾಗಿ ಹೊಸ ಕಾನೂನು ಚೌಕಟ್ಟು ನಿರ್ಮಿಸಲು ಮುಂದಾದ ಸರ್ಕಾರ!