ETV Bharat / crime

ದೆಹಲಿ ಇಸ್ರೇಲ್ ರಾಯಭಾರ ಕಚೇರಿ ಬಳಿ ಸ್ಫೋಟ ಪ್ರಕರಣ: ಸಿಸಿಟಿವಿ ದೃಶ್ಯದಲ್ಲಿ ಇಬ್ಬರು ಸೆರೆ - ammonium nitrate

ಕ್ಯಾಬ್​ನಲ್ಲಿ ಇಬ್ಬರು ವ್ಯಕ್ತಿಗಳು ಇಸ್ರೇಲ್ ರಾಯಭಾರ ಕಚೇರಿ ಮುಂದೆ ಬಂದಿಳಿದು, ಸ್ಫೋಟ ನಡೆದಿರುವ ಸ್ಥಳದೆಡೆಗೆ ನಡೆದು ಹೋಗಿರುವ ಸಿಸಿಟಿವಿ ದೃಶ್ಯ ಪೊಲೀಸರಿಗೆ ಸಿಕ್ಕಿದೆ. ಇವರೇ ಅಲ್ಲಿ ಸ್ಫೋಟಕ ಇಟ್ಟಿರುವ ಶಂಕೆ ವ್ಯಕ್ತವಾಗಿದೆ.

Israel Embassy blast
ದೆಹಲಿಯ ಇಸ್ರೇಲ್ ರಾಯಭಾರ ಕಚೇರಿ ಬಳಿ ಬ್ಲಾಸ್ಟ್​
author img

By

Published : Jan 30, 2021, 9:39 AM IST

Updated : Jan 30, 2021, 10:14 AM IST

ನವದೆಹಲಿ: ದೆಹಲಿಯಲ್ಲಿನ ಇಸ್ರೇಲ್ ರಾಯಭಾರ ಕಚೇರಿ ಬಳಿ ಸ್ಫೋಟ ಪ್ರಕರಣ ಸಂಬಂಧ ಇದೀಗ ಸಿಸಿಟಿವಿ ದೃಶ್ಯಾವಳಿ ದೆಹಲಿ ಪೊಲೀಸರಿಗೆ ಸಿಕ್ಕಿದೆ. ಕ್ಯಾಬ್​ನಲ್ಲಿ ಇಬ್ಬರು ವ್ಯಕ್ತಿಗಳು ಕಚೇರಿ ಮುಂದೆ ಬಂದಿಳಿದು, ಸ್ಫೋಟ ನಡೆದಿರುವ ಸ್ಥಳದೆಡೆಗೆ ನಡೆದು ಹೋಗಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಸ್ಫೋಟಕ್ಕೂ ಈ ವ್ಯಕ್ತಿಗಳಿಗೂ ಸಂಬಂಧವಿದೆಯಾ ಎನ್ನುವುದನ್ನು ದೆಹಲಿ ವಿಶೇಷ ಪೊಲೀಸ್ ಘಟಕ ಪತ್ತೆ ಹಚ್ಚುತ್ತಿದೆ. ಕ್ಯಾಬ್ ಚಾಲಕನನ್ನು ಸಂಪರ್ಕಿಸಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಕ್ಯಾಬ್ ಚಾಲಕ ನೀಡಿದ ಮಾಹಿತಿ ಮೇರೆಗೆ ಆ ಇಬ್ಬರು ವ್ಯಕ್ತಿಗಳ ರೇಖಾಚಿತ್ರ ಬಿಡಿಸಲಾಗುತ್ತಿದೆ. ರೇಖಾಚಿತ್ರದ ಆಧಾರದ ಮೇಲೆ ಪೊಲೀಸರು ಹೆಚ್ಚಿನ ತನಿಖೆ ನಡೆಸಲಿದ್ದಾರೆ.

ಘಟನಾ ಸ್ಥಳದಲ್ಲಿ ದೆಹಲಿ ಪೊಲೀಸರ ವಿಶೇಷ ತಂಡದಿಂದ ತನಿಖೆ ಚುರುಕು

ಇದನ್ನೂ ಓದಿ: ದೆಹಲಿ ಇಸ್ರೇಲ್ ರಾಯಭಾರ ಕಚೇರಿ ಎದುರು ಐಇಡಿ ಸ್ಫೋಟ: 2012ರಲ್ಲೂ ನಡೆದಿತ್ತು ಕೃತ್ಯ

ಸ್ಫೋಟಕ್ಕೆ ಅಮೋನಿಯಂ ನೈಟ್ರೇಟ್​ ಬಳಸಲಾಗಿದೆ ಎಂದು ವಿಧಿವಿಜ್ಞಾನ ತಂಡ ಸ್ಪಷ್ಟಪಡಿಸಿದೆ. ಅಲ್ಲದೇ ಘಟನಾ ಸ್ಥಳದಲ್ಲಿರುವ ಮರದ ಹಿಂದೆ ಒಂದು ಕ್ಯಾಮರಾ ಕೂಡ ಸಿಕ್ಕಿದೆ.

ನಿನ್ನೆ ಸಂಜೆ ದೆಹಲಿಯ ಔರಂಗಾಜೇಬ್​ ರಸ್ತೆಯಲ್ಲಿರುವ ಇಸ್ರೇಲ್ ರಾಯಭಾರ ಕಚೇರಿ ಬಳಿ ಸುಧಾರಿತ ಸ್ಫೋಟಕ ಸಾಧನ (ಐಇಡಿ) ಸ್ಫೋಟ ಸಂಭವಿಸಿದೆ. 4 ರಿಂದ 5 ಕಾರುಗಳಿಗೆ ಹಾನಿಯಾಗಿದ್ದು, ಘಟನೆಯಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲ.

Last Updated : Jan 30, 2021, 10:14 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.