ನವದೆಹಲಿ: ಮುತ್ತೂಟ್ ಗ್ರೂಪ್ ಅಧ್ಯಕ್ಷ ಎಂ.ಜಿ. ಜಾರ್ಜ್ ಮುತ್ತೂಟ್ ಅವರ ಸಾವಿನ ಸುತ್ತ ಅನುಮಾನಗಳಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ಜಾರ್ಜ್ ಮುತ್ತೂಟ್ (72) ಅವರು ಶುಕ್ರವಾರ ಸಂಜೆ ದೆಹಲಿಯಲ್ಲಿನ ತಮ್ಮ ಮನೆಯ ಮೆಟ್ಟಿಲುಗಳ ಮೇಲಿಂದ ಆಕಸ್ಮಿಕವಾಗಿ ಜಾರಿ ಬಿದ್ದು, ಗಾಯಗೊಂಡು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ ಎಂದು ಕುಟುಂಬಸ್ಥರು ಹೇಳಿದ್ದಾರೆ.
ಮೇಲ್ನೋಟಕ್ಕೆ ಆಕಸ್ಮಿಕ ಸಾವೆಂದು ಕಂಡುಬಂದರೂ ಸೂಕ್ತ ತನಿಖೆ ಕೈಗೊಂಡಿದ್ದೇವೆ. ಕೆಲವರ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗುತ್ತಿದ್ದು, ಸಿಸಿಟಿವಿ ಕ್ಯಾಮರಾಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ದೆಹಲಿ ಉಪ ಪೊಲೀಸ್ ಆಯುಕ್ತ (ಆಗ್ನೇಯ) ಆರ್.ಪಿ. ಮೀನಾ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: 10 ಲಕ್ಷ ಮೌಲ್ಯದ 18 ಬೈಕ್ ಕಳ್ಳತನ: ಖತರ್ನಾಕ್ ಕಳ್ಳನ ಬಂಧನ
ಚಿನ್ನದ ಮೇಲೆ ಸಾಲ ನೀಡುವ ದೇಶದ ಅತಿ ದೊಡ್ಡ ಕಂಪನಿಯಾದ ಮುತ್ತೂಟ್ ಫೈನಾನ್ಸ್ (ಮುತ್ತೂಟ್ ಗ್ರೂಪ್ನ ಅಂಗಸಂಸ್ಥೆ) ಜಾರ್ಜ್ ಮುತ್ತೂಟ್ ಅವರ ನಾಯಕತ್ವದಲ್ಲಿ ನಡೆಯುತ್ತಿತ್ತು. ವಿಶ್ವದಾದ್ಯಂತ ಸುಮಾರು 5,500 ಶಾಖೆಗಳನ್ನು ಮುತ್ತೂಟ್ ಗ್ರೂಪ್ ಹೊಂದಿದೆ.