ETV Bharat / crime

ರಾತ್ರೋರಾತ್ರಿ ಟಿಎಂಸಿ ಶಾಸಕನ ಮನೆ-ಕಚೇರಿ ಧ್ವಂಸಗೊಳಿಸಿದ ದುಷ್ಕರ್ಮಿಗಳು

ಪಶ್ಚಿಮ ಬಂಗಾಳದ ಮಾಲ್ಡಾದಲ್ಲಿರುವ ಟಿಎಂಸಿ ಶಾಸಕ ನಿಹಾರ್ ರಂಜನ್ ಘೋಷ್ ಅವರ ಮನೆ ಹಾಗೂ ಪಕ್ಷದ ಕಚೇರಿಯನ್ನು ಸುಮಾರು 150 ಅಪರಿಚಿತರ ಗುಂಪು ಧ್ವಂಸ ಮಾಡಿದೆ.

House of TMC MLA and party's office vandalised
ರಾತ್ರೋ ರಾತ್ರಿ ಟಿಎಂಸಿ ಶಾಸಕನ ಮನೆ-ಕಚೇರಿ ಧ್ವಂಸಗೊಳಿಸಿದ ದುಷ್ಕರ್ಮಿಗಳು
author img

By

Published : Feb 16, 2021, 12:14 PM IST

ಮಾಲ್ಡಾ (ಪಶ್ಚಿಮ ಬಂಗಾಳ): ತೃಣಮೂಲ ಕಾಂಗ್ರೆಸ್ (ಟಿಎಂಸಿ)​ ಶಾಸಕ ನಿಹಾರ್ ರಂಜನ್ ಘೋಷ್ ಅವರ ಮನೆ ಹಾಗೂ ಪಕ್ಷದ ಕಚೇರಿಯನ್ನು ದುಷ್ಕರ್ಮಿಗಳ ದೊಡ್ಡ ಗುಂಪೊಂದು ಧ್ವಂಸ ಮಾಡಿದೆ.

ರಾತ್ರೋ ರಾತ್ರಿ ಟಿಎಂಸಿ ಶಾಸಕನ ಮನೆ-ಕಚೇರಿ ಧ್ವಂಸಗೊಳಿಸಿದ ದುಷ್ಕರ್ಮಿಗಳು

ನಿನ್ನೆ ರಾತ್ರಿ ಪಶ್ಚಿಮ ಬಂಗಾಳದ ಮಾಲ್ಡಾದಲ್ಲಿರುವ ರಂಜನ್ ಘೋಷ್​ರ ಮನೆಗೆ ನುಗ್ಗಿದ ಅಪರಿಚಿತ ವ್ಯಕ್ತಿಗಳು ಮನೆ, ಕಚೇರಿಯ ಒಳಗೆ-ಹೊರಗೆ ಇದ್ದ ಸಾಮಗ್ರಿಗಳು, ವಾಹನಗಳನ್ನು ಧ್ವಂಸ ಮಾಡುತ್ತಿರುವ ದೃಶ್ಯ ವಿಡಿಯೋದಲ್ಲಿ ಕಂಡುಬಂದಿದೆ.

ಇದನ್ನೂ ಓದಿ: ಮರ್ಯಾದಾ ಹತ್ಯೆ: ಕೈ, ಕಾಲುಗಳನ್ನು ಕಟ್ಟಿ ತಂದೆ ಎದುರೇ ಜೀವಂತ ಸುಟ್ಟು ಹಾಕಿದ ಸುಪಾರಿ ಕಿಲ್ಲರ್​!

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶಾಸಕ ನಿಹಾರ್ ರಂಜನ್ ಘೋಷ್, ಸುಮಾರು 150 ಅಪರಿಚಿತರು ಇದ್ದಕ್ಕಿದ್ದಂತೆ ಬಂದು ಎಲ್ಲವನ್ನೂ ಧ್ವಂಸ ಮಾಡಲು ಪ್ರಾರಂಭಿಸಿದಾಗ ನಾನು ಕಾರ್ಯಕರ್ತರೊಂದಿಗೆ ಪಕ್ಷದ ಕಚೇರಿಯಲ್ಲಿದ್ದೆ. ಈ ಸಂಬಂಧ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದೇನೆ ಎಂದು ಹೇಳಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದು, ಪೈಪೋಟಿಯಲ್ಲಿರುವ ಬಿಜೆಪಿ ಹಾಗೂ ಟಿಎಂಸಿ ನಡುವೆ ಗಲಾಟೆಗಳು ನಡೆಯುತ್ತಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.