ಗಿರಿದಿಹ್ (ಜಾರ್ಖಂಡ್): 2007ರ ಚಿಲ್ಕಾರಿ ಹತ್ಯಾಕಾಂಡದಲ್ಲಿ ಭಾಗಿಯಾಗಿದ್ದ ನಕ್ಸಲ್ ಕೊಲ್ಹಾ ಯಾದವ್ನನ್ನು ಬಂಧಿಸುವಲ್ಲಿ ಜಾರ್ಖಂಡ್ ಪೊಲೀಸರು ಯಶಸ್ವಿಯಾಗಿದ್ದಾರೆ.
ಗಿರಿದಿಹ್ ಜಿಲ್ಲೆಯ ಭೆಲ್ವಘಟಿ ಠಾಣಾ ಪೊಲೀಸರು ಬಿಹಾರದ ಜಮುಯಿ ಪ್ರದೇಶದಲ್ಲಿ ಯಾದವ್ನನ್ನು ಬಂಧಿಸಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಅಮಿತ್ ರೇಣು ತಿಳಿಸಿದ್ದಾರೆ.
ಏನಿದು ಚಿಲ್ಕಾರಿ ಹತ್ಯಾಕಾಂಡ?
2007ರಲ್ಲಿ ಗಿರಿದಿಹ್ ಜಿಲ್ಲೆಯ ಚಿಲ್ಕಾರಿ ಎಂಬ ಗ್ರಾಮದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವೊಂದನ್ನು ವೀಕ್ಷಿಸುತ್ತಿದ್ದಾಗ ನಕ್ಸಲರ ಗುಂಪೊಂದು ಗುಂಡಿನ ದಾಳಿ ನಡೆಸಿತ್ತು. ಘಟನೆಯಲ್ಲಿ ಜಾರ್ಖಂಡ್‌ನ ಮೊದಲ ಮುಖ್ಯಮಂತ್ರಿ ಬಾಬುಲಾಲ್ ಮರಂಡಿ ಅವರ ಪುತ್ರ ಅನೂಪ್ ಸೇರಿದಂತೆ 20 ಜನರು ಬಲಿಯಾಗಿದ್ದರು.
ಬಿಹಾರ ಮತ್ತು ಜಾರ್ಖಂಡ್‌ನಲ್ಲಿ ಯಾದವ್ ವಿರುದ್ಧ 18 ನಕ್ಸಲ್ ಸಂಬಂಧಿತ ಪ್ರಕರಣಗಳು ದಾಖಲಾಗಿದ್ದು, ಈತನಿಗಾಗಿ ಅನೇಕ ವರ್ಷಗಳಿಂದ ಪೊಲೀಸರು ಬಲೆ ಬೀಸಿದ್ದರು.