ಗಾಜಿಯಾಬಾದ್/ ನವದೆಹಲಿ: ಗಾಜಿಯಾಬಾದ್‌ನ ನಂದ್ ಗ್ರಾಮ್ ಪೊಲೀಸ್ ಠಾಣೆ ವ್ಯಾಪ್ತಿಯ ನೂರ್ ನಗರದಲ್ಲಿರುವ ಪಂಜಾಬ್ ನ್ಯಾಷನಲ್ ಬ್ಯಾಂಕ್‌ನ ಗ್ರಾಮೀಣ ಶಾಖೆಯಲ್ಲಿ ದುಷ್ಕರ್ಮಿಗಳು ಹಾಡಹಗಲೇ ಲೂಟಿ ಮಾಡಿದ್ದಾರೆ. ನಾಲ್ವರು ದುಷ್ಕರ್ಮಿಗಳು ಇಂದು ಬ್ಯಾಂಕ್‌ಗೆ ನುಗ್ಗಿ ಕ್ಯಾಷಿಯರ್‌ನನ್ನು ಬಂದೂಕು ತೋರಿಸಿ 12 ಲಕ್ಷ ರೂಪಾಯಿ ದೋಚಿ ಪರಾರಿಯಾಗಿದ್ದಾರೆ. ಹಗಲಿನಲ್ಲಿ ಇಲ್ಲಿ ಕಾವಲುಗಾರ ಇರಲಿಲ್ಲ ಎಂದು ಹೇಳಲಾಗುತ್ತಿದೆ.
![ghaziabad-four-miscreants-robbed-rs-12-lakh-from-bank-in-broad-daylight](https://etvbharatimages.akamaized.net/etvbharat/prod-images/del-gzb-01-bank-dlc10020mp4_02042022150858_0204f_1648892338_94.jpg)
ಇದರ ಲಾಭ ಪಡೆದ ನಾಲ್ವರು ದುಷ್ಕರ್ಮಿಗಳು ಬ್ಯಾಂಕ್‌ಗೆ ನುಗ್ಗಿ ಕ್ಯಾಷಿಯರ್ ಬಳಿಯಿದ್ದ 12 ಲಕ್ಷ ನಗದು ದೋಚಿ ಪರಾರಿಯಾಗಿದ್ದಾರೆ. ಹೋಗುವಾಗ ದುಷ್ಕರ್ಮಿಗಳು ಬೆದರಿಕೆ ಕೂಡಾ ಹಾಕಿದ್ದಾರೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ ನ ಸಿಸಿಟಿವಿಯನ್ನು ವಶಕ್ಕೆ ಪಡೆದು ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಗಾಜಿಯಾಬಾದ್ ಜಿಲ್ಲೆಯಲ್ಲಿ ಅಪರಾಧ ಪ್ರಕರಣಗಳು ಹೆಚ್ಚುತ್ತಿವೆ. ಪೊಲೀಸರು ನಿರಂತರವಾಗಿ ಕಣ್ಗಾವಲು ಇಟ್ಟಿದ್ದರೂ ಹೆಚ್ಚುತ್ತಿರುವ ಅಪರಾಧ ಪ್ರಕರಣಗಳನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. ಇತ್ತೀಚೆಗಷ್ಟೇ ಗಾಜಿಯಾಬಾದ್‌ನಲ್ಲಿ 25 ಲಕ್ಷ ರೂಪಾಯಿ ದರೋಡೆ ನಡೆದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯಲೋಪ ಎಸೆಗಿದ್ದಾರೆ ಎಂಬ ಆರೋಪದ ಮೇಲೆ ಗಾಜಿಯಾಬಾದ್‌ನ ಎಸ್‌ಎಸ್‌ಪಿ ಪವನ್‌ಕುಮಾರ್ ಅವರನ್ನು ಅಮಾನತುಗೊಳಿಸಲಾಗಿತ್ತು.
ಇಷ್ಟಾದರೂ ಗಾಜಿಯಾಬಾದ್‌ನಲ್ಲಿ ಇಂತಹುದ್ದೇ ಮತ್ತೊಂದು ಘಟನೆ ನಡೆದಿದೆ. ಇದರಿಂದ ಇಲ್ಲಿನ ಜನರು ಭಯಭೀತಗೊಂಡಿದ್ದಾರೆ.
ಇದನ್ನು ಓದಿ:ಶಿವಮೊಗ್ಗದಲ್ಲಿ ರಾತ್ರಿ ಅಟ್ಟಾಡಿಸಿಕೊಂಡು ಬಂದು ಕಲ್ಲು ಎತ್ತಿಹಾಕಿ ವ್ಯಕ್ತಿ ಕೊಲೆ