ಹುಬ್ಬಳ್ಳಿ: ನಗರದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನ ಉಪನಗರ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಖಚಿತ ಮಾಹಿತಿ ಮೇರೆಗೆ ಪೊಲೀಸರು ಹುಬ್ಬಳ್ಳಿಯ ಚಾಟ್ನಿಮಠ ಕ್ರಾಸ್ ಹತ್ತಿರ ಆರೋಪಿಗಳು ಗಾಂಜಾ ಮಾರಾಟ ಮಾಡುತ್ತಿರುವ ವೇಳೆ ದಾಳಿ ನಡೆಸಿ ಗಾಂಜಾ ವಶ ಪಡಿಸಿಕೊಂಡಿದ್ದಾರೆ.
ಬಂಧಿತ ಆರೋಪಿಗಳು ಮಹಾರಾಷ್ಟ್ರ ಮೂಲದ ಅನಂತ ಥಾವರೆ ಹಾಗೂ ನಾಗನಾಥ ಗಾಯಕವಾಡ್ ಎಂದು ತಿಳಿದು ಬಂದಿದೆ. ಆರೋಪಿಗಳಿಂದ 80,340 ರೂ. ಮೌಲ್ಯದ 16 ಕೆ.ಜಿ 86 ಗ್ರಾಂ ಗಾಂಜಾ ಹಾಗೂ ಒಂದು ಸ್ಯಾಂಟ್ರೋ ಕಾರು ವಶಪಡಿಸಿಕೊಂಡಿಕೊಂಡಿದ್ದಾರೆ.
ಇದನ್ನೂ ಓದಿ: ಹಾವು ಮುಂಗುಸಿ ರೋಚಕ ಕಾದಾಟ.. ಗೆದ್ದಿದ್ದು ಯಾವುದು? ವಿಡಿಯೋ