ಮಂಗಳೂರು: ಹ್ಯಾಕ್ ಮಾಡಿರುವ ವಾಟ್ಸಪ್ ಮೂಲಕ ಸ್ನೇಹಿತನೆಂದು ನಂಬಿಸಿ 1 ಲಕ್ಷ ರೂ. ಹಣ ವಂಚನೆ ಮಾಡಿರುವುದಾಗಿ ಮಂಗಳೂರು ಸೈಬರ್ ಕ್ರೈಂನಲ್ಲಿ ವ್ಯಕ್ತಿಯೋರ್ವರು ದೂರು ದಾಖಲಿಸಿದ್ದಾರೆ.
ದೂರು ನೀಡಿರುವ ವ್ಯಕ್ತಿಯ ಸ್ನೇಹಿತ ಶರವಣನ್ ಎಂಬುವರು ಅಮೆರಿಕದಲ್ಲಿ ವಾಸವಿದ್ದರು. ಅವರ ಮೊಬೈಲ್ ಸಂಖ್ಯೆಯ ವಾಟ್ಸಪ್ನಿಂದ ಜೂನ್ 29ರಂದು ಬೆಳಗ್ಗೆ ಸಂದೇಶವೊಂದು ಬಂದಿತ್ತು. ಸಂಬಂಧಿಕರೋರ್ವರ ಕೋವಿಡ್ ಚಿಕಿತ್ಸೆಗೆ ಹಣ ಕಳುಹಿಸಿಕೊಡುವಂತೆ ಸಂದೇಶ ಮನವಿ ಮಾಡಲಾಗಿತ್ತು.
ಇದನ್ನು ನಂಬಿದ ದೂರುದಾರ ವ್ಯಕ್ತಿ ತನ್ನ ಗೂಗಲ್ ಪೇ ಮೂಲಕ ಸ್ನೇಹಿತನು ನೀಡಿರುವ ಗೂಗಲ್ ಪೇ ಸಂಖ್ಯೆ +918729881191ಗೆ ಹಂತ ಹಂತವಾಗಿ ಒಟ್ಟು 1 ಲಕ್ಷ ರೂ. ವರ್ಗಾವಣೆ ಮಾಡಿದ್ದಾರೆ.
ಇದನ್ನೂ ಓದಿ: ಕೋಟ್ಯಂತರ ರೂಪಾಯಿ ವಸೂಲಿ ಆರೋಪ: ಸಚಿವ ಶ್ರೀರಾಮುಲು ಆಪ್ತ ಸಹಾಯಕ ಅರೆಸ್ಟ್
ಆ ಬಳಿಕ ಅವರು ಸ್ನೇಹಿತ ಶರವಣನ್ರವರ ಮೊಬೈಲ್ಗೆ ಕರೆ ಮಾಡಿ ವಿಚಾರಿಸಿದಾಗ ಅವರು ತಮ್ಮ ವಾಟ್ಸಪ್ ಖಾತೆ ಹ್ಯಾಕ್ ಆಗಿರುವ ಬಗ್ಗೆ ತಿಳಿಸಿದ್ದಾರೆ. ನಂತರ ಯಾರೋ ಅಪರಿಚಿತರು ಈ ಕೃತ್ಯ ಎಸಗಿರುವ ಬಗ್ಗೆ ಸೈಬರ್ ಕ್ರೈಂ ಠಾಣೆಯಲ್ಲಿ ದೂರು ನೀಡಿದ್ದಾರೆ.