ETV Bharat / crime

ತಮಿಳುನಾಡಿನಲ್ಲಿ ಸಬ್‌ ಇನ್ಸ್‌ಪೆಕ್ಟರ್‌ ಹತ್ಯೆ ಪ್ರಕರಣ: ನಾಲ್ವರು ಆರೋಪಿಗಳ ಬಂಧನ - ತಿರುಚಿ ಪೊಲೀಸ್‌

ಗಸ್ತು ತಿರುಗುತ್ತಿದ್ದ ವಿಶೇಷ ಸಬ್‌ ಇನ್ಸ್‌ಪೆಕ್ಟರ್‌ ಭೂಮಿನಾಥನ್ ಹತ್ಯೆ ಪ್ರಕರಣದಲ್ಲಿ ನಾಲ್ವರು ಆರೋಪಿಗಳನ್ನು ಬಂಧಿಸಿರುವ ತಿರುಚಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಸಬ್‌ ಇನ್ಸ್‌ಪೆಕ್ಟರ್‌ ಸಾವಿಗೆ ಕಂಬನಿ ಮಿಡಿದಿರುವ ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್‌ ಮೃತರ ಕುಟುಂಬಕ್ಕೆ 1 ಕೋಟಿ ರೂಪಾಯಿ ಪರಿಹಾರ ಘೋಷಿಸಿದ್ದಾರೆ.

four arrested in si boominathan murder case in tamil nadu
ತಮಿಳುನಾಡಿನಲ್ಲಿ ಸಬ್‌ ಇನ್ಸ್‌ಪೆಕ್ಟರ್‌ ಹತ್ಯೆ ಪ್ರಕರಣ; ನಾಲ್ವರು ಆರೋಪಿಗಳು ಬಂಧನ
author img

By

Published : Nov 22, 2021, 1:28 PM IST

Updated : Nov 22, 2021, 1:40 PM IST

ತಿರುಚಿ(ತಮಿಳುನಾಡು): ಕರ್ತವ್ಯದಲ್ಲಿದ್ದ ವಿಶೇಷ ಸಬ್‌ ಇನ್ಸ್‌ಪೆಕ್ಟರ್‌ ಹತ್ಯೆ ಪ್ರಕರಣ (SSI Boominathan murder case) ಸಂಬಂಧ ತಿರುಚಿ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ನಾವಲ್​ಪಟ್ಟು ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ 56 ವರ್ಷದ ಭೂಮಿನಾಥನ್ ಕೊಲೆಗೀಡಾದ ಎಸ್‌ಎಸ್‌ಐ ಆಗಿದ್ದಾರೆ. ಘಟನೆ ಕಂಬನಿ ಮಿಡಿದಿರುವ ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್‌ ಮೃತ ಸಬ್‌ ಇನ್ಸ್‌ಪೆಕ್ಟರ್‌ ಕುಟುಂಬಕ್ಕೆ 1 ಕೋಟಿ ರೂಪಾಯಿ ಪರಿಹಾರ ಘೋಷಿಸಿದ್ದಾರೆ.

ssi bhuminathan
ಹತ್ಯೆಯಾದ ವಿಶೇಷ ಸಬ್‌ ಇನ್ಸ್‌ಪೆಕ್ಟರ್‌ ಭೂಮಿನಾಥನ್‌

ನಾವಲ್​ಪಟ್ಟು ಮುಖ್ಯರಸ್ತೆಯಲ್ಲಿ ಕಳೆದ ಶನಿವಾರ ಭೂಮಿನಾಥನ್ ಗಸ್ತು ತಿರುಗುತ್ತಿದ್ದರು. ಭಾನುವಾರ ಮುಂಜಾನೆ ದುಷ್ಕರ್ಮಿಗಳ ಗುಂಪೊಂದು ಮೂರು ಬೈಕ್​ಗಳಲ್ಲಿ ಮೇಕೆಗಳನ್ನು ಸಾಗಿಸುತ್ತಿದ್ದರು. ಇದನ್ನು ಕಂಡ ಭೂಮಿನಾಥನ್ ವಿಚಾರಿಸುವಷ್ಟರಲ್ಲಿ ಅವರು ಸ್ಥಳದಿಂದ ಪರಾರಿಯಾಗಿದ್ದಾರೆ. ಅವರನ್ನು ತಮ್ಮ ಬೈಕ್​ನಲ್ಲಿ ಭೂಮಿನಾಥನ್ ಹಿಂಬಾಲಿಸಿದ್ದಾರೆ.

ಬಂಧಿತ ಆರೋಪಿಗಳ ವಿಚಾರಣೆ

ತಿರುಚಿ-ಪುದುಕೊಟ್ಟೈ ಮಾರ್ಗದಲ್ಲಿರುವ ಪಲ್ಲತ್ತುಪಟ್ಟಿ ಎಂಬ ಗ್ರಾಮ ಬಳಿಯಿರುವ ರೈಲ್ವೆ ಗೇಟ್​ನ ಬಳಿ ಒಂದು ಬೈಕ್ ಅಡ್ಡಗಟ್ಟಿದ ಅವರು ಇಬ್ಬರು ವ್ಯಕ್ತಿಗಳನ್ನು ಹಿಡಿದಿದ್ದಾರೆ. ಸ್ವಲ್ಪ ಹೊತ್ತಿನ ನಂತರ ಪರಾರಿಯಾಗಿದ್ದ ಎರಡು ಬೈಕ್​ನಲ್ಲಿದ್ದ ದುಷ್ಕರ್ಮಿಗಳು ವಾಪಸ್ ಆಗಿ ಗಲಾಟೆ ಆರಂಭಿಸಿದ್ದಾರೆ. ಇದೇ ವೇಳೆ, ತಮ್ಮ ಬಳಿ ಇದ್ದ ಕುಡುಗೋಲಿನಿಂದ ದುಷ್ಕರ್ಮಿಗಳು ಹಲ್ಲೆ ನಡೆಸಿ, ಪರಾರಿಯಾಗಿದ್ದರು. ಸ್ಥಳದಲ್ಲೇ ಕುಸಿದುಬಿದ್ದ ಸಬ್ ಇನ್ಸ್​ಪೆಕ್ಟರ್ ಅತಿಯಾದ ರಕ್ತಸ್ರಾವದಿಂದಾಗಿ ಸಾವನ್ನಪ್ಪಿದ್ದರು. ಸದ್ಯ ನಾಲ್ವರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಕರ್ತವ್ಯದಲ್ಲಿದ್ದ ಪಿಎಸ್​ಐ ಅನ್ನು ಕುಡುಗೋಲಿನಿಂದ ಕೊಚ್ಚಿ ಕೊಂದ ಮೇಕೆ ಕಳ್ಳರು

Last Updated : Nov 22, 2021, 1:40 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.