ETV Bharat / crime

ನೇಣು ಬಿಗಿದುಕೊಂಡು ಒಂದೇ ಕುಟುಂಬದ ಐವರು ಆತ್ಮಹತ್ಯೆ - ಒಂದೇ ಕುಟುಂಬದ ಐವರು ಆತ್ಮಹತ್ಯೆ

five-member-of-same-family-commits-suicide-in-supaul
ಒಂದೇ ಕುಟುಂಬದ ಐವರು ನೇಣಿಗೆ ಶರಣು
author img

By

Published : Mar 13, 2021, 9:18 AM IST

Updated : Mar 13, 2021, 10:17 AM IST

09:08 March 13

ಮೂವರು ಮಕ್ಕಳೊಂದಿಗೆ ಪೋಷಕರು ಆತ್ಮಹತ್ಯೆ

ಸುಪೌಲ್: ಒಂದೇ ಕುಟುಂಬಕ್ಕೆ ಸೇರಿದ ಐವರು ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ಬಿಹಾರದ ಸುಪೌಲ್​ನ ರಾಘೋಪುರದಲ್ಲಿ ನಡೆದಿದೆ.  

ಕುಟುಂಬ ಆರ್ಥಿಕವಾಗಿ ಕೆಲವೊಂದು ಸಮಸ್ಯೆ ಎದುರಿಸುತ್ತಿತ್ತು. ಇದರಿಂದ ಮನನೊಂದು ತಂದೆ-ತಾಯಿ ತಮ್ಮ ಮೂವರು ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.  

ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ರಾಘೋಪುರ ಪೊಲೀಸರು, ಎಸ್ಪಿ ಮನೋಜ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣದ ತನಿಖೆಯನ್ನು ಎಫ್‌ಎಸ್‌ಎಲ್ ತಂಡಕ್ಕೆ ವಹಿಸಿದ್ದಾರೆ. 

ಕಳೆದೆರಡು ವರ್ಷಗಳಿಂದ ಈ ಕುಟುಂಬ ತಮ್ಮ ಪೂರ್ವಜರ ಭೂಮಿಯನ್ನು ಮಾರಾಟ ಮಾಡಿ ಕಲ್ಲಿದ್ದಲಿನ ವ್ಯಾಪಾರ ಮಾಡುತ್ತಿತ್ತು. ಇದರ ಜೊತೆಗೆ ಆರ್ಥಿಕವಾಗಿ ಸಮಸ್ಯೆ ಎದುರಿಸುತ್ತಿತ್ತು. ಅಷ್ಟೇ ಅಲ್ಲದೆ ಕೆಲ ದಿನಗಳಿಂದ ಈ ಕುಟುಂಬ ಗ್ರಾಮಸ್ಥರಿಂದ ಪ್ರತ್ಯೇಕವಾಗಿ ವಾಸವಾಗಿತ್ತು ಎಂಬ ಮಾಹಿತಿ ತಿಳಿದು ಬಂದಿದೆ.

Last Updated : Mar 13, 2021, 10:17 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.