ETV Bharat / crime

ಎಂಪಿ, ಯುಪಿ ಬಳಿಕ ಆಂಧ್ರದಲ್ಲಿ ರಸ್ತೆ ದುರಂತ: ಐವರು ಬಲಿ

ಮಧ್ಯಪ್ರದೇಶ, ಉತ್ತರ ಪ್ರದೇಶದ ಬಳಿಕ ಆಂಧ್ರಪ್ರದೇಶದಲ್ಲಿ ಇಂದು ರಸ್ತೆ ಅಪಘಾತ ನಡೆದಿದ್ದು, ಐವರು ಮೃತಪಟ್ಟಿದ್ದಾರೆ.

Five died in road accident at Andhra's Nellore
ಎಂಪಿ, ಯುಪಿ ಬಳಿಕ ಆಂಧ್ರದಲ್ಲಿ ರಸ್ತೆ ಅಪಘಾತ
author img

By

Published : Mar 23, 2021, 10:28 AM IST

ನೆಲ್ಲೂರು (ಆಂಧ್ರಪ್ರದೇಶ): ಕೂಲಿ ಕಾರ್ಮಿಕರನ್ನು ಹತ್ತಿಸಿಕೊಳ್ಳುತ್ತಿದ್ದ ಕಾರಿಗೆ ಹಾಲಿನ ವ್ಯಾನ್ ಡಿಕ್ಕಿ ಹೊಡೆದ ಪರಿಣಾಮ ಐವರು ಕೂಲಿ ಕಾರ್ಮಿಕರು ಸಾವನ್ನಪ್ಪಿರುವ ಘಟನೆ ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯಲ್ಲಿ ನಡೆದಿದೆ.

ನೆಲ್ಲೂರು ಜಿಲ್ಲೆಯ ಸಂಗಮ ಮಂಡಲದ ನೆಲ್ಲೂರು - ಮುಂಬೈ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದ್ದು, ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಒಬ್ಬರು ಆಸ್ಪತ್ರೆಯಲ್ಲಿ ಪ್ರಾಣ ಬಿಟ್ಟಿದ್ದಾರೆ. ಹಾಲಿನ ವ್ಯಾನ್ ಚಾಲಕ ಸೇರಿ ನಾಲ್ವರ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ಇದನ್ನೂ ಓದಿ: ಬೆಳ್ಳಂಬೆಳಗ್ಗೆ ಮಧ್ಯಪ್ರದೇಶದಲ್ಲಿ ಭೀಕರ ರಸ್ತೆ ಅಪಘಾತ: 13 ಮಂದಿ ದುರ್ಮರಣ

ಮೃತರೆಲ್ಲರೂ ಕೂಲಿಗಾಗಿ ಮೀನುಗಾರಿಕೆಗೆ ಮಾಡಲು ತೆರಳುತ್ತಿದ್ದರು. ಘಟನಾ ಸ್ಥಳಕ್ಕೆ ಬಂದ ಪೊಲೀಸ್​ ಇನ್ಸ್​ಪೆಕ್ಟರ್​ ಶ್ರೀಕಾಂತ್, ಸರ್ಕಲ್​ ಇನ್ಸ್​ಪೆಕ್ಟರ್​ ಸುರೇಶ್ ಬಾಬು ಬಂದಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

ಇದನ್ನೂ ಓದಿ: ಅಯೋಧ್ಯಾ ಫ್ಲೈಓವರ್‌ನಲ್ಲಿ ನಿಂತಿದ್ದ ಬಸ್​ಗೆ ಟ್ರಕ್​ ಡಿಕ್ಕಿ: ಆರು ಮಂದಿ ಸಾವು

ಇಂದು ಬೆಳಗ್ಗೆಯಿಂದ ವರದಿಯಾಗಿರುವ ಮೂರನೇ ಭೀಕರ ರಸ್ತೆ ಅಪಘಾತ ಸುದ್ದಿ ಇದಾಗಿದೆ. ಮಧ್ಯಪ್ರದೇಶದ ಗ್ವಾಲಿಯರ್​ನಲ್ಲಿಬಸ್ - ಆಟೋ ಡಿಕ್ಕಿಯಾಗಿ 13 ಜನರು ಸಾವನ್ನಪ್ಪಿದ್ದರು. ಬಳಿಕ ಉತ್ತರ ಪ್ರದೇಶದ ಅಯೋಧ್ಯಾದಲ್ಲಿ ಫ್ಲೈಓವರ್‌ನಲ್ಲಿ ನಿಂತಿದ್ದ ಬಸ್​ಗೆ ಟ್ರಕ್​ ಹೊಡೆದು ಆರು ಮಂದಿ ಮೃತಪಟ್ಟಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.