ETV Bharat / crime

ಕದ್ದ ಕಾರಲ್ಲಿ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಓರ್ವ ಆರೋಪಿ ಕಾಲಿಗೆ ಗುಂಡೇಟು - Firing in Banlaguru

ಫೆ. 11ರಂದು ಯಲಹಂಕದಲ್ಲಿರುವ ಮಹಿಳೆಯೊಬ್ಬರ ಮನೆಗೆ ನುಗ್ಗಿದ್ದ ಇಮ್ರಾನ್​ ಪಾಷಾ, ಕದ್ದ ಕಾರಲ್ಲಿ ಸಾಮೂಹಿಕ ಅತ್ಯಾಚಾರ ಎಸಗಿ ಪರಾರಿಯಾಗಿದ್ದ. ನಿನ್ನೆ ಯಲಹಂಕ ನ್ಯೂ ಟೌನ್ ಪೊಲೀಸರು ಆತನ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ,

Rape Case Accused
Rape Case Accused
author img

By

Published : Feb 13, 2021, 4:44 AM IST

ಬೆಂಗಳೂರು: ಕದ್ದ ಕಾರಿನಲ್ಲಿ ಮಹಿಳೆಯನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರ ಎಸಗಿ ಪರಾರಿಯಾಗಿದ್ದ ಇಮ್ರಾನ್ ಪಾಷಾ ಅಲಿಯಾಸ್ ಬೋಡಿಕೆಯನ್ನು ಕಾಲಿಗೆ ಗುಂಡು ಹಾರಿಸಿ ಯಲಹಂಕ ನ್ಯೂ ಟೌನ್ ಪೊಲೀಸರು ಬಂಧಿಸಿದ್ದಾರೆ.

ಗುರುವಾರ ಈತನ ಸಹಚರ ಶಬರೀಶ್ ಕಾಲಿಗೆ ಗುಂಡು ಹೊಡೆದು ಬಂಧಿಸಲಾಗಿತ್ತು. ಫೆ. 11ರಂದು ಯಲಹಂಕದಲ್ಲಿರುವ ಮಹಿಳೆಯೊಬ್ಬರ ಮನೆಗೆ ನುಗ್ಗಿದ್ದ ಆರೋಪಿ ಕದ್ದ ಕಾರಲ್ಲಿ ಅತ್ಯಾಚಾರ ಎಸಗಿ ಪರಾರಿಯಾಗಿದ್ದ. ಈ ಸಂಬಂಧ ಪ್ರಕರಣ ದಾಖಲಾಗಿತ್ತು.

ನಗರದ ಹೊರವಲಯದಲ್ಲಿ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದ ಅತ್ಯಾಚಾರ ಪ್ರಕರಣವನ್ನು ಪೊಲೀಸರು ಗೌಪ್ಯವಾಗಿಟ್ಟು ತನಿಖೆ ನಡೆಸುತ್ತಿದ್ದರು. ಫೆಬ್ರವರಿ 10ರಂದು ಆರೋಪಿಗಳು ನಾಗರಾಜ್ ಎಂಬುವರ ಕಾರನ್ನು ಅಡ್ಡಗಟ್ಟಿ ಬೆದರಿಸಿ ಹಣ, ಚಿನ್ನಾಭರಣ, ಎಟಿಎಂ ಕಾರ್ಡ್ ಸುಲಿಗೆ ಮಾಡಿ ಕಾರನ್ನು ದರೋಡೆ ಮಾಡಿದ್ದರು.

ಕದ್ದ ಕಾರಿನಲ್ಲಿ ರಾತ್ರಿಯಿಂದ ಬೆಳಗಿನ ಜಾವದವರೆಗೆ ಮದ್ಯ ಸೇವನೆ ಮಾಡಿ ಶಬರೀಷ್ ಗ್ಯಾಂಗ್ ಕೆಂಚನಹಳ್ಳಿ ರಸ್ತೆ ಬಳಿ ಬೆಳಗ್ಗೆ 4;30ರ ಸಮಯದಲ್ಲಿ ಮನೆ ಕೆಲಸದಾಕೆ ಹೋಗುತ್ತಿದ್ದ ಮಹಿಳೆಯನ್ನು ಎಳೆದೊಯ್ದು ಸಾಮೂಹಿಕ ಅತ್ಯಾಚಾರ ಎಸಗಿ ಎಸ್ಕೇಪ್ ಆಗಿದ್ದರು.

ಇದನ್ನೂ ಓದಿ: ಮಧುರೈ: ದಲಿತ ವ್ಯಕ್ತಿ ಮೇಲೆ ಪೊಲೀಸರಿಂದ ಹಲ್ಲೆ, ದೂರು ದಾಖಲು

ಸಂತ್ರಸ್ತೆಯು ಅನ್ಯ ಮಾರ್ಗ ತಿಳಿಯದೆ ಕಂಗಲಾಗಿದ್ದಳು. ಕಾರಿನ ಮಾಲೀಕ ನಾಗರಾಜ್ ಕೊಟ್ಟ ದೂರಿನ ಮೇರೆಗೆ ಶಬರೀಶ್, ಇಮ್ರಾನ್​ನನ್ನು ಪತ್ತೆ ಮಾಡಿ ಹಿಡಿಯಲು ಹೋದ ಪೊಲೀಸರ ಮೇಲೆ ಹಲ್ಲೆ ಮಾಡಿದ ಕಾರಣ ಗುಂಡಿನ ದಾಳಿ ನಡೆಸಿದ್ದರು.

ಬಳಿಕ ಆರೋಪಿಯನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಅತ್ಯಾಚಾರ ಬೆಳಕಿಗೆ ಬಂದಿದೆ. ಈ ಸಂಬಂಧ ಪ್ರತ್ಯೇಕ ಪ್ರಕರಣವನ್ನು ಯಲಹಂಕ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಶಬರೀಶ್, ಇಮ್ರಾನ್ ಬಂಧನವಾಗಿದ್ದು ಮತ್ತೊಬ್ಬ ಆರೋಪಿ ತಲೆಮರೆಸಿಕೊಂಡಿದ್ದಾನೆ. ಆತನಿಗಾಗಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.