ETV Bharat / crime

ವಾಯ್ಸ್‌ ಮೆಸೇಜ್‌ ಮಾಡಿ ಭದ್ರಾ ನಾಲೆಗೆ ಹಾರಿ ಇಡೀ ಕುಟುಂಬ ಆತ್ಯಹತ್ಯೆಗೆ ಯತ್ನ; ಇಬ್ಬರು ಕಣ್ಮರೆ

ಕುಟುಂಬವೊಂದು ಕಾರು ಸಹಿತ ಭದ್ರಾ ನಾಲೆಗೆ ಬಿದ್ದು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ. ತರೀಕೆರೆ ತಾಲೂಕಿನ ಎಂ.ಸಿ.ಹಳ್ಳಿ ಬಳಿಯ ನಡೆದ ಈ ದುರಂತದಲ್ಲಿ ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದು, ಮತ್ತಿಬ್ಬರು ನೀರಲ್ಲಿ ಮುಳುಗಿರುವ ಶಂಕೆ ವ್ಯಕ್ತವಾಗುತ್ತಿದೆ.

Family suicide attempt in chikkamagaluru district ; two missing
ವಾಯ್ಸ್‌ ಮೆಸೇಜ್‌ ಮಾಡಿ ಭದ್ರಾ ನಾಲೆಗೆ ಹಾರಿ ಇಡೀ ಕುಟುಂಬ ಆತ್ಯಹತ್ಯೆಗೆ ಯತ್ನ; ಇಬ್ಬರು ಕಣ್ಮರೆ
author img

By

Published : Aug 26, 2021, 1:18 PM IST

Updated : Aug 26, 2021, 5:04 PM IST

ಚಿಕ್ಕಮಗಳೂರು: ವಾಯ್ಸ್ ಮೆಸೇಜ್‌ ಮಾಡಿ ಕುಟುಂಬವೊಂದು ಕಾರು ಸಹಿತ ಭದ್ರಾ ನಾಲೆಗೆ ಬಿದ್ದು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಜಿಲ್ಲೆಯ ತರೀಕೆರೆ ತಾಲೂಕಿನ ಎಂ.ಸಿ. ಹಳ್ಳಿ ಬಳಿ ನಡೆದಿದೆ.

ವಾಯ್ಸ್‌ ಮೆಸೇಜ್‌ ಮಾಡಿ ಭದ್ರಾ ನಾಲೆಗೆ ಹಾರಿ ಇಡೀ ಕುಟುಂಬ ಆತ್ಯಹತ್ಯೆಗೆ ಯತ್ನ; ಇಬ್ಬರು ಕಣ್ಮರೆ

ನಾಲ್ವರಲ್ಲಿ ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದು, ಮತ್ತಿಬ್ಬರು ನೀರಲ್ಲಿ ಮುಳುಗಿರುವ ಶಂಕೆ ವ್ಯಕ್ತವಾಗುತ್ತಿದೆ. 13 ವರ್ಷ ಧ್ಯಾನ್, 35 ವರ್ಷದ ನೀತು ಸಾವಿನಿಂದ ಪಾರು ಆಗಿದ್ದಾರೆ. ನೀತು ಪತಿ ಮಂಜು, ಅತ್ತೆ ಸುನಂದಮ್ಮ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗುತ್ತಿದೆ.

ಸುದ್ದಿ ತಿಳಿದು ಸ್ಥಳಕ್ಕೆ ದೌಡಾಯಿಸಿರುವ ಅಗ್ನಿಶಾಮಕ ದಳ ಹಾಗೂ ತರೀಕೆರೆ ಪೊಲೀಸರು ನೀರಲ್ಲಿ ಮುಳುಗಿರುವ ಇಬ್ಬರ ಪತ್ತೆಗಾಗಿ ಶೋಧ ಮುಂದುವರೆಸಿದ್ದಾರೆ.

ಆತ್ಮಹತ್ಯೆಗೆ ಯತ್ನಿಸಿದವರು ಭದ್ರಾವತಿ ತಾಲೂಕಿನ ಹಳೇ ಜೇಡಿಕಟ್ಟೆಯ ನಿವಾಸಿಗಳಾಗಿದ್ದಾರೆ. ಸ್ಥಳಕ್ಕೆ ಎಸ್ಪಿ ಅಕ್ಷಯ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತರೀಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Last Updated : Aug 26, 2021, 5:04 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.