ETV Bharat / crime

ಹಿಟ್​ ಸಿನಿಮಾ​ ಶೈಲಿಯಲ್ಲಿ ಸ್ನೇಹಿತನ ಮರ್ಡರ್​​​​.. ಮೊಬೈಲ್ ಟವರ್ ಲೊಕೇಶನ್ ನೀಡಿತು ಸುಳಿವು!

ಬಿಂದುಕುಮಾರ್ ನಾಪತ್ತೆ ಪ್ರಕರಣದ ತನಿಖೆ ನಡೆಸುತ್ತಿದ್ದ ಆಲಪ್ಪುಳ ಪೊಲೀಸರು, ಮೊಬೈಲ್ ಟವರ್ ಲೊಕೇಶನ್ ಪತ್ತೆ ಹಚ್ಚಿದ್ದರು. ಅದೇ ಆಧಾರದಲ್ಲಿ ಚಂಗನಾಶ್ಶೇರಿಯಲ್ಲಿ ಆರೋಪಿ ಕೊಲೆ ಮಾಡಿರುವ ಸುಳಿವು ಸಿಕ್ಕಿತ್ತು. ಕೊಲೆಯಾದ ವ್ಯಕ್ತಿಗೆ ಕೊನೆಯ ಕರೆ ಆತನ ಸ್ನೇಹಿತ ಮುತ್ತುಕುಮಾರ್‌ ಅವರದ್ದೇ ಆಗಿತ್ತು ಎಂಬುದು ತನಿಖೆ ವೇಳೆ ಬಹಿರಂಗವಾಗಿತ್ತು

Drishyam' model murder in Kerala
ಹಿಟ್​ ಸಿನಿಮಾವೊಂದರ್​ ಶೈಲಿಯಲ್ಲಿ ಸ್ನೇಹಿತನ ಮರ್ಡರ್
author img

By

Published : Oct 1, 2022, 8:06 PM IST

ಕೊಟ್ಟಾಯಂ: ಕೊಟ್ಟಾಯಂನ ಚಂಗನಾಶ್ಸೆರಿಯಲ್ಲಿ ಸಿನಿಮಾ ಮಾದರಿ ಕೊಲೆ ನಡೆದಿದ್ದು, ವ್ಯಕ್ತಿಯೊಬ್ಬನ ಶವವನ್ನು ಸ್ನೇಹಿತನ ಮನೆಯ ನೆಲಹಾಸಿನೊಳಗೆ ಹೂತಿಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮೃತದೇಹವನ್ನು ಒಳಗೆ ಹೂತು ಹಾಕಿದ ನಂತರ ನೆಲಹಾಸು ಕಾಂಕ್ರೀಟ್ ಮಾಡಲಾಗಿತ್ತು ಎಂಬ ವಿಚಾರ ಬಯಲಿಗೆ ಬಂದಿದೆ.

ಏನಿದು ಪ್ರಕರಣ?: ಒಂದು ವಾರದ ಹಿಂದೆ ಆಲಪ್ಪುಳದಿಂದ ಬಿಂದುಕುಮಾರ್​(40) ಎಂಬುವವರು ಕಾಣೆಯಾಗಿದ್ದರು. ಈ ಪ್ರಕರಣದ ಬೆನ್ನಟ್ಟಿದ ಪೊಲೀಸರು, ಬಹು ಭಾಷೆಗಳಲ್ಲಿ ನಿರ್ಮಾಣವಾದ ಪ್ರಸಿದ್ದ ಸಿನಿಮಾವೊಂದರ ಶೈಲಿಯಲ್ಲಿ ಕೊಲೆ ಮಾಡಿ ಸ್ನೇಹಿತನ ಮನೆಯಲ್ಲಿ ಶವ ಹೂತಿರುವುದನ್ನು ಪತ್ತೆ ಹಚ್ಚಿ, ಶವ ವಶಕ್ಕೆ ಪಡೆದಿದ್ದಾರೆ. ಇದು ಕಾಣೆಯಾಗಿದ್ದ ಬಿಂದುಕುಮಾರ್ (40) ಅವರದೇ ಎಂದು ಶಂಕಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರ ಕಾರ್ಯಾಚರಣೆ ಹೇಗಿತ್ತು?: ಚಂಗನಾಶ್ಶೇರಿಯ ಎಸಿ ಕೆನಾಲ್ ರಸ್ತೆ ಬಳಿಯ ಕಾಲೋನಿಯಲ್ಲಿರುವ ಮುತ್ತುಕುಮಾರ್ ಅವರ ಮನೆಯಲ್ಲಿ ಮೃತದೇಹ ಪತ್ತೆಯಾಗಿದೆ. ಬಿಂದುಕುಮಾರ್ ನಾಪತ್ತೆ ಪ್ರಕರಣದ ತನಿಖೆ ನಡೆಸುತ್ತಿದ್ದ ಆಲಪ್ಪುಳ ಉತ್ತರ ಪೊಲೀಸರು, ಮೊಬೈಲ್ ಟವರ್ ಲೊಕೇಶನ್ ಪತ್ತೆ ಹಚ್ಚಿದ್ದರು. ಅದೇ ಆಧಾರದಲ್ಲಿ ಚಂಗನಾಶ್ಶೇರಿಯಲ್ಲಿ ಆರೋಪಿ ಕೊಲೆ ಮಾಡಿರುವ ಸುಳಿವು ಸಿಕ್ಕಿತ್ತು. ಕೊಲೆಯಾದ ವ್ಯಕ್ತಿಗೆ ಕೊನೆಯ ಕರೆ ಆತನ ಸ್ನೇಹಿತ ಮುತ್ತುಕುಮಾರ್‌ ಅವರದ್ದೇ ಆಗಿತ್ತು ಎಂಬುದು ತನಿಖೆ ವೇಳೆ ಬಹಿರಂಗವಾಗಿತ್ತು.

ತನಿಖೆ ಆಧಾರದ ಮೇಲೆ ಪೊಲೀಸರು ಆರೋಪಿ ಮುತ್ತುಕುಮಾರ್​​ ಅವರನ್ನು ಹುಡುಕಿಕೊಂಡು ಆತನ ಮನೆಗೆ ಬಂದಿದ್ದರು. ಆದರೆ ಆತ ತಪ್ಪಿಸಿಕೊಂಡಿದ್ದ. ಪೊಲೀಸರು ನೆರೆಹೊರೆಯವರನ್ನು ವಿಚಾರಿಸಿದಾಗ ಮುತ್ತುಕುಮಾರ್​ ಮನೆಯಲ್ಲಿ ದುರಸ್ತಿ ಕೆಲಸ ನಡೆಯುತ್ತಿರುವ ಬಗ್ಗೆ ಮಾಹಿತಿ ನೀಡಿದ್ದರು. ಮನೆಯಲ್ಲಿ ನೆಲ ಅಗೆದು ಕಾಂಕ್ರೀಟ್​ ಹಾಕಿರುವ ಬಗ್ಗೆಯೂ ತಿಳಿಸಿದ್ದರು. ಇನ್ನು ಪೊಲೀಸರು ನಾಪತ್ತೆಯಾಗಿದ್ದ ಮುತ್ತುಕುಮಾರನಿಗಾಗಿ ಹುಡುಕಾಟ ನಡೆಸಿದ್ದರು. ಮತ್ತೊಂದು ಕಡೆ ವಾಕಥಾನಂನಲ್ಲಿ ಬಿಂದುಕುಮಾರ್ ಅವರ ಬೈಕ್ ಟ್ರೇಸ್ ಕೂಡಾ ಮಾಡಿದ್ದರು ಪೊಲೀಸರು.

ನಂತರ ಪೊಲೀಸರು ಚಂಗನಾಶ್ಶೇರಿಯಲ್ಲಿ ನಾಪತ್ತೆಯಾಗಿದ್ದ ಬಿಂದುಕುಮಾರ್‌ಗಾಗಿ ಹುಡುಕಾಟ ನಡೆಸಿದ್ದರು. ನಂತರ, ಚಂಗನಾಶ್ಶೇರಿ ಠಾಣಾಧಿಕಾರಿ ರಿಚರ್ಡ್ ವರ್ಗೀಸ್ ಮತ್ತು ಅವರ ತಂಡವು ಮುತ್ತುಕುಮಾರ್​ ಮನೆಯ ನೆಲಹಾಸು ಅಗೆಯಲು ನಿರ್ಧರಿಸಿತ್ತು.

ಹಿರಿಯ ಅಧಿಕಾರಿಗಳ ನಿರ್ದೇಶನದ ಮೇಲೆ ತನಿಖಾ ತಂಡ ನೆಲಹಾಸು ಅಗೆದಾಗ ಮೃತದೇಹವು ಫ್ಲೋರಿಂಗ್‌ನೊಳಗೆ ರಕ್ಸ್‌ಕ್‌ನಲ್ಲಿ ಮುಚ್ಚಿಟ್ಟಿರುವುದು ಗೊತ್ತಾಗಿದೆ. ಇದೀಗ ಶವವನ್ನು ವಶಕ್ಕೆ ಪಡೆದಿರುವ ಪೊಲೀಸರು, ಇದು ಮೃತ ಬಿಂದುಕುಮಾರ್​ ಅವರದ್ದೇನಾ ಎಂಬುದನ್ನು ಖಚಿತಪಡಿಸಿಕೊಳ್ಳಲು ಡಿಎನ್​ಎ ಪರೀಕ್ಷೆ ನಡೆಸಲು ನಿರ್ಧರಿಸಿದೆ.

ಇದನ್ನು ಓದಿ:ರಿಸೆಪ್ಷನಿಸ್ಟ್ ಅಂಕಿತಾ ಭಂಡಾರಿ ಕೊಲೆ ಕೇಸ್​ಗೆ ಟ್ವಿಸ್ಟ್: ಬಾಯಿ ಮುಚ್ಚಿ ಕೋಣೆಯೊಳಗೆ ಎಳೆದೊಯ್ದಿದ್ದರು ಎಂದ ಪ್ರತ್ಯಕ್ಷದರ್ಶಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.