ETV Bharat / crime

VIDEO : ಡ್ರ್ಯಾಗರ್ ತೋರಿಸಿ ಸರಗಳ್ಳತನಕ್ಕೆ ಯತ್ನ, ಇಬ್ಬರ ಬಂಧನ - ನಗರ ಠಾಣಾ ಪೊಲೀಸರು ವಿಚಾರಣೆ

ಸಾರ್ವಜನಿಕರ ಸಹಕಾರದಿಂದ ಇಬ್ಬರು ಸರಗಳ್ಳರನ್ನ ಪೊಲೀಸರು ಬಂಧಿಸಿದ್ದಾರೆ. ನಶೆಯಲ್ಲಿದ್ದ ಇಬ್ಬರು ಯುವಕರು ಇಂದು ಬೆಳಗ್ಗೆಯಿಂದ ಕೆಲವೆಡೆ ಕಳ್ಳತನಕ್ಕೆ ಯತ್ನಿಸಿದ್ದರು ಎನ್ನಲಾಗಿದೆ. ಅಲ್ಲದೆ ಕುವೆಂಪುನಗರದಲ್ಲಿ ಸರಗಳ್ಳತನಕ್ಕೆ ಯತ್ನಿಸಿ ವಿಫಲರಾದ ಹಿನ್ನೆಲೆ ಸಾರ್ವಜನಿಕರ ಕೈಗೆ ಸಿಕ್ಕಿ ಬಿದ್ದಿದ್ದಾರೆ..

Dragger Show Trying to theft in kolar news
ಡ್ರ್ಯಾಗರ್ ತೋರಿಸಿ ಸರಗಳ್ಳತನಕ್ಕೆ ಯತ್ನ
author img

By

Published : Jun 6, 2021, 4:20 PM IST

Updated : Jun 6, 2021, 4:52 PM IST

ಕೋಲಾರ : ಡ್ರ್ಯಾಗರ್ ತೋರಿಸಿ ಬೆದರಿಕೆ ಹಾಕಿ ಸರಗಳ್ಳತನ ಮಾಡುತ್ತಿದ್ದ ಇಬ್ಬರು ಯುವಕರನ್ನ ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿರುವ ಘಟನೆ ಕೋಲಾರದಲ್ಲಿ ನಡೆದಿದೆ.

ಡ್ರ್ಯಾಗರ್ ತೋರಿಸಿ ಸರಗಳ್ಳತನಕ್ಕೆ ಯತ್ನ

ಓದಿ: ₹30 ಕೋಟಿ ನೀಡಿ ಐಷಾರಾಮಿ ಮನೆ ಖರೀದಿಸಿದ ರೋಹಿತ್ ಶರ್ಮಾ:​ ಅಚ್ಚರಿ ಹುಟ್ಟಿಸುವ ಫೋಟೋಸ್ ನೋಡಿ..

ಕೋಲಾರದ ಕುವೆಂಪುನಗರದಲ್ಲಿ ಈ ಘಟನೆ ಜರುಗಿದೆ. ಸಾರ್ವಜನಿಕರ ಸಹಕಾರದಿಂದ ಇಬ್ಬರು ಸರಗಳ್ಳರನ್ನ ಪೊಲೀಸರು ಬಂಧಿಸಿದ್ದಾರೆ. ನಶೆಯಲ್ಲಿದ್ದ ಇಬ್ಬರು ಯುವಕರು ಇಂದು ಬೆಳಗ್ಗೆಯಿಂದ ಕೆಲವೆಡೆ ಕಳ್ಳತನಕ್ಕೆ ಯತ್ನಿಸಿದ್ದರು ಎನ್ನಲಾಗಿದೆ. ಅಲ್ಲದೆ ಕುವೆಂಪುನಗರದಲ್ಲಿ ಸರಗಳ್ಳತನಕ್ಕೆ ಯತ್ನಿಸಿ ವಿಫಲರಾದ ಹಿನ್ನೆಲೆ ಸಾರ್ವಜನಿಕರ ಕೈಗೆ ಸಿಕ್ಕಿ ಬಿದ್ದಿದ್ದಾರೆ.

ಈ ವೇಳೆ ಇಬ್ಬರು ಯುವಕರು ತಮ್ಮ ಕೈನಲ್ಲಿದ್ದ ಡ್ರ್ಯಾಗರ್‌ ತೋರಿಸಿ ತಪ್ಪಿಸಿಕೊಳ್ಳಲು ಯತ್ನಿಸಿದಾಗ, ಜನರು ಕಲ್ಲು, ದೊಣ್ಣೆಗಳಿಂದ ಅಟ್ಟಾಡಿಸಿದ್ದಾರೆ. ಇದಾದರೂ ಸ್ಥಳೀಯರ ಕೈಗೆ ಸಿಗದೆ ಪರಾರಿಯಾಗುತ್ತಿದ್ದ ಇಬ್ಬರನ್ನ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಇನ್ನು, ಇಬ್ಬರನ್ನ ಬಂಧಿಸಿದ ನಗರ ಠಾಣಾ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಅಲ್ಲದೆ ನಶೆಯಲ್ಲಿರುವುದರಿಂದ ತಮ್ಮ ಹೆಸರು ವಿಳಾಸವನ್ನ ತಿಳಿಸುತ್ತಿಲ್ಲ ಎನ್ನಲಾಗಿದೆ.

Last Updated : Jun 6, 2021, 4:52 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.