ಲಖನೌ (ಉತ್ತರ ಪ್ರದೇಶ): ಮಾಜಿ ಬಿಎಸ್ಪಿ ಸಂಸದ ಮತ್ತು ಮಾಫಿಯಾ ಡಾನ್ ಧನಂಜಯ್ ಸಿಂಗ್ರನ್ನು ಪ್ರಯಾಗರಾಜ್‌ನ ನೈನಿ ಕೇಂದ್ರ ಕಾರಾಗೃಹದಿಂದ ಫಾರೂಖಾಬಾದ್‌ನ ಫತೇಗಡ್ಸೆಂಟ್ರಲ್ ಜೈಲಿಗೆ ಸ್ಥಳಾಂತರಿಸಲಾಗಿದೆ.
2017ರ ಗ್ಯಾಂಗ್ಸ್ಟರ್ ಅಜಿತ್ ಸಿಂಗ್ ಹತ್ಯೆಗೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ಲಖನೌ ನ್ಯಾಯಾಲಯ ಜಾಮೀನು ರಹಿತ ವಾರಂಟ್ ಹೊರಡಿಸಿದ ಬಳಿಕ ಧನಂಜಯ್ ಸಿಂಗ್ ಕೋರ್ಟ್ ಮುಂದೆ ಶರಣಾಗಿದ್ದರು. ಇವರನ್ನು ಪ್ರಯಾಗರಾಜ್‌ನ ನೈನಿ ಕೇಂದ್ರ ಕಾರಾಗೃಹದಲ್ಲಿರಿಸಲಾಗಿತ್ತು.
ಇದನ್ನೂ ಓದಿ: ಕಾರಿಗೆ ಲಾರಿ ಡಿಕ್ಕಿ: ಶಿವರಾತ್ರಿಯಂದೇ ಸಾವಿನ ಮನೆ ಸೇರಿದ ಮೂವರು
ಆದರೆ, ನೈನಿ ಜೈಲಿನಲ್ಲಿ ಧನಂಜಯ್ ಸಿಂಗ್ ಅವರ ಶತ್ರುಗಳಾದ ಮುಖ್ತಾರ್ ಅನ್ಸಾರಿ ಮತ್ತು ಅಭಯ್ ಸಿಂಗ್ಸ ಸೇರಿ 68 ಹಾರ್ಡ್‌ಕೋರ್ ಅಪರಾಧಿಗಳಿದ್ದಾರೆ. ತನ್ನ ದ್ವೇಷಿಗಳಿಂದ ನನಗೆ ಜೀವ ಬೆದರಿಕೆ ಎಂದು ಆರೋಪಿಸಿ ಜೈಲಧಿಕಾರಿಗಳಿಗೆ ಧನಂಜಯ್ ಸಿಂಗ್ ಪತ್ರ ಬರೆದಿದ್ದರು. ಹೀಗಾಗಿ ಅವರನ್ನು ಫತೇಗಢ ಕೇಂದ್ರ ಕಾರಾಗೃಹಕ್ಕೆ ಶಿಫ್ಟ್ ಮಾಡಲಾಗಿದೆ.
ಇನ್ನು ಫತೇಘಡ್ ಜೈಲಿನಲ್ಲಿ ಮೂವರು ಮಾಫಿಯಾ ಡಾನ್ಗಳ ಕೊಲೆ ಮಾಡಿರುವ ಸುನಿಲ್ ರತಿ ಜೊತೆ ಧನಂಜಯ್ ಸಿಂಗ್ ಇರಬೇಕಿದೆ.