ನವದೆಹಲಿ: ಗಣರಾಜ್ಯೋತ್ಸವ ದಿನದಂದು ಟ್ರ್ಯಾಕ್ಟರ್ ರ‍್ಯಾಲಿ ವೇಳೆ ನಡೆದ ಹಿಂಸಾಚಾರಕ್ಕೆ ನಿಮ್ಮ ಮೇಲೆ ನಾವೇಕೆ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಬಾರದು ಎಂದು ದೆಹಲಿ ಪೊಲೀಸರು ರೈತ ಮುಖಂಡ ದರ್ಶನ್ಪಾಲ್ ಸಿಂಗ್ಗೆ ಪ್ರಶ್ನಿಸಿದ್ದಾರೆ.
ಪೊಲೀಸರೊಂದಿಗೆ ಒಪ್ಪಂದ ಮುರಿದದ್ದಕ್ಕೆ, ಆಸ್ತಿ - ಪಾಸ್ತಿಗಳ ಧ್ವಂಸ ಮಾಡಿದ್ದಕ್ಕೆ, ಕೆಂಪುಕೋಟೆಯಂತಹ ರಾಷ್ಟ್ರೀಯ ಸ್ಮಾರಕವನ್ನು ಅಪವಿತ್ರಗೊಳಿಸಿದ್ದಕ್ಕೆ, ಗಣರಾಜ್ಯೋತ್ಸವ ಆಚರಿಸುತ್ತಿದ್ದ ನಗರದ ವಿವಿಧ ಜನರಿಗೆ ಅನಾನುಕೂಲತೆ ಉಂಟುಮಾಡಿ ವಿಧ್ವಂಸಕ ಕೃತ್ಯ ಎಸಗಿದ್ದಕ್ಕೆ ನೀವು ಹಾಗೂ ನಿಮ್ಮ ಸಂಘಟನೆಯ ಇತರ ಸದಸ್ಯರು, ಬೆಂಬಲಿಗರ ವಿರುದ್ಧ ಏಕೆ ಕ್ರಮ ಕೈಗೊಳ್ಳಬಾರದು? ಇದಕ್ಕೆ ಮೂರು ದಿನದೊಳಗಾಗಿ ಪ್ರತಿಕ್ರಿಯೆ ನೀಡುವಂತೆ ಸೂಚಿಸಿ ದರ್ಶನ್ಪಾಲ್ ಸಿಂಗ್ಗೆ ದೆಹಲಿ ಪೊಲೀಸರು ನೋಟಿಸ್ ನೀಡಿದ್ದಾರೆ.
ಇದನ್ನೂ ಓದಿ: ಹಿಂಸಾತ್ಮಕ ಪ್ರತಿಭಟನೆ ನಡುವೆಯೂ 300 ಮಂದಿ ಗಣರಾಜ್ಯೋತ್ಸವ ಕಲಾವಿದರ ರಕ್ಷಿಸಿದ ಪೊಲೀಸರು
ಅಲ್ಲದೇ ವಿಧ್ವಂಸಕ ಕೃತ್ಯ ಎಸಗಿದವರ ಹೆಸರುಗಳನ್ನು ನೀಡುವಂತೆ ಸಿಂಗ್ಗೆ ನಿರ್ದೇಶಿಸಲಾಗಿದೆ. ಈಗಾಗಲೇ ದರ್ಶನ್ಪಾಲ್ ಸೇರಿದಂತೆ 37 ಮಂದಿಯ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.