ETV Bharat / crime

ದಾವಣಗೆರೆ: ಶಾಲೆಗೆ ಹೋಗಿದ್ದ ಶಿಕ್ಷಕ ರಸ್ತೆ ಬದಿ ಅನುಮಾನಾಸ್ಪದ ಸಾವು..!

ಶಾಲೆಗೆ ಹೋಗಿದ್ದ ಶಿಕ್ಷಕ ರಸ್ತೆ ಬದಿ ಶವವಾಗಿ ಪತ್ತೆಯಾಗಿರುವ ಘಟನೆ ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನ ಚಿಕ್ಕಬನ್ನಹಟ್ಟಿ ಗ್ರಾಮದ ಬಳಿ ನಡೆದಿದೆ. ಘಟನೆ ಬಗ್ಗೆ ಯುವ ಶಿಕ್ಷಕನ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆಗೆ ಮುಂದಾಗಿದ್ದಾರೆ.

Death of a teacher who went to school; Police say the hit-and-run case in davanagere district
ದಾವಣಗೆರೆ: ಶಾಲೆಗೆ ಹೋಗಿದ್ದ ಶಿಕ್ಷಕ ಅನುಮಾನಾಸ್ಪದ ರಸ್ತೆ ಬದಿ ಸಾವು..!
author img

By

Published : Feb 3, 2022, 1:32 PM IST

ದಾವಣಗೆರೆ: ಶಾಲೆಗೆ ಹೋಗಿದ್ದ ಶಿಕ್ಷಕನೊಬ್ಬ ಅನುಮಾನಾಸ್ಪದವಾಗಿ ಸಾವನಪ್ಪಿರುವ ಘಟನೆ ಜಿಲ್ಲೆಯ ಜಗಳೂರು ತಾಲೂಕಿನ ಚಿಕ್ಕಬನ್ನಹಟ್ಟಿ ಗ್ರಾಮದ ಬಳಿ ನಡೆದಿದೆ.

ಕುಟುಂಬದವರು ಹುಡುಕಾಡಿದಾಗ 27 ವರ್ಷದ ಮಾರುತಿ ನಾಯ್ಕ ಅವರ ಶವ ಚಿಕ್ಕಬನ್ನಹಟ್ಟಿ ರಸ್ತೆ ಬಳಿ ಪತ್ತೆಯಾಗಿದೆ. ಮೃತ ಶಿಕ್ಷಕ ಮಾರುತಿ ನಾಯ್ಕ ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಗಾಂಧಿ ನಗರ ಸರ್ಕಾರಿ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದ.

ನಿನ್ನೆ ಬೆಳಗ್ಗೆ ಶಾಲೆಗೆ ತೆರಳಿದ ಈತ ರಾತ್ರಿಯಾದರೂ ಮನೆಗೆ ಬಾರದ ಬೆನ್ನಲ್ಲೇ ಕುಟುಂಬದವರು ಹುಡುಕಾಟ ನಡೆಸಿದ್ದರು. ಇದರ ಬೆನ್ನಲ್ಲೇ ಇಂದು ಬೆಳಗ್ಗೆ ಬೈಕ್ ಒಂದು ಕಡೆ ಇನ್ನೊಂದು ಕಡೆ ಶವವಾಗಿ ಪತ್ತೆಯಾಗಿದ್ದು, ಅಪರಿಚಿತ ವಾಹನ ಗುದ್ದಿಕೊಂಡು ಹೋಗಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.

ಸ್ಥಳಕ್ಕೆ ಜಗಳೂರು ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕುಟುಂಬ ಸದಸ್ಯರು ಘಟನೆ ಬಗ್ಗೆ ಸಂಶಯ ವ್ಯಕ್ತಪಡಿಸಿದ ಬೆನ್ನಲ್ಲೇ ಪ್ರಕರಣ ದಾಖಲಿಸಿಕೊಂಡ ಜಗಳೂರು ಠಾಣೆಯ ಪೊಲೀಸರು ತನಿಖೆ ಆರಂಭಿಸಿದ್ದಾರೆ‌. ಇನ್ನು ಮನೆಗೆ ಆಧಾರ ಸ್ತಂಭವಾಗಿದ್ದ ಮೃತ ಶಿಕ್ಷಕ ಮಾರುತಿ ನಾಯ್ಕನನ್ನು ಕಳೆದು ಕೊಂಡಿರುವ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಇದನ್ನೂ ಓದಿ:ಸೋಂಕು ತಗುಲದ ವ್ಯಕ್ತಿಗಳಿಗೆ ಕೋವಿಡ್ ಲಸಿಕೆ ನೀಡಲು ಆದ್ಯತೆ ನೀಡಬೇಕು: ಏಮ್ಸ್​ ತಜ್ಞ

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.