ETV Bharat / crime

ಪೊಲೀಸರಿಂದಲೇ ರ‍್ಯಾಶ್ ಡ್ರೈವಿಂಗ್: ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ ಏಳಕ್ಕೆ ಏರಿಕೆ! - ಪೊಲೀಸರಿಂದಲೇ ರ್ಯಾಶ್ ಡ್ರೈವಿಂಗ್

ಕಾನ್‌ಸ್ಟೆಬಲ್ ಹಾಗೂ ಹೋಮ್ ಗಾರ್ಡ್​ಗಳು ಮದ್ಯ ಸೇವಿಸಿ ರ‍್ಯಾಶ್ ಡ್ರೈವ್ ಮಾಡಿದ ಪರಿಣಾಮ ಅಪಘಾತವುಂಟಾಗಿ 7 ಮಂದಿ ಸಾವನ್ನಪ್ಪಿದ್ದಾರೆ.

accident
accident
author img

By

Published : Apr 19, 2021, 7:55 PM IST

ಹೈದರಾಬಾದ್: ಶಂ‌ಶಾಬಾದ್‌ನಲ್ಲಿ ಕಾರು ಹಾಗೂ ಲಾರಿ ಢಿಕ್ಕಿಯಾದ ಪರಿಣಾಮ ನಿನ್ನೆ ಆರು ಮಂದಿ ಸಾವನ್ನಪ್ಪಿದ್ದರು. ಉಸ್ಮಾನಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳು ಯುವಕ ಇಂದು ಮೃತಪಟ್ಟಿದ್ದು, ಒಟ್ಟು ಸಾವಿನ ಸಂಖ್ಯೆ ಏಳಕ್ಕೆ ಏರಿದೆ. ಈ ಅಪಘಾತಕ್ಕೆ ಕಾರಣವಾದ ವ್ಯಕ್ತಿಯನ್ನು ಮಾಧಾಪುರ ಕಾನ್‌ಸ್ಟೆಬಲ್ ಗಿರಿಪ್ರಸಾದ್ ಎಂದು ಗುರುತಿಸಲಾಗಿದೆ.

ಮಾಧಾಪುರ ಕಾನ್‌ಸ್ಟೆಬಲ್ ಗಿರಿಪ್ರಸಾದ್, ಅವನ ಗೆಳೆಯರಾದ ಸಂಗಮೇಶ್ವರ ಮತ್ತು ಮಲ್ಲೇಶ್ ಒಂದೇ ಸ್ಟೇಶನ್​ನಲ್ಲಿ ಹೋಮ್ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದರು. ಅವರು ಭಾನುವಾರ ಬೆಳಿಗ್ಗೆ ಕಾರಿನಲ್ಲಿ ಯಾದಗಿರಿ ಗುಟ್ಟ ದೇವಸ್ಥಾನಕ್ಕೆ ಹೋಗಿದ್ದರು. ಹಿಂದಿರುಗುವಾಗ ಮದ್ಯ ಸೇವಿಸಿ ರ‍್ಯಾಶ್ ಡ್ರೈವ್ ಮಾಡುತ್ತಿದ್ದರು.

ಈ ವೇಳೆ ನಿಯಂತ್ರಣ ಕಳೆದುಕೊಂಡ ಕಾರ್, ಲಾರಿಗೆ ಡಿಕ್ಕಿ ಹೊಡೆದಿದೆ. ಲಾರಿಯಲ್ಲಿದ್ದ ಮೂವರು ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಆಸ್ಪತ್ರೆಯಲ್ಲಿ ದಾಖಲಾಗಿದ್ದ ಇನ್ನೂ ಮೂವರು ಸದಸ್ಯರು ನಿನ್ನೆಯೇ ಮೃತಪಟ್ಟಿದ್ದರು. ಇದೀಗ ಉಸ್ಮಾನಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇನ್ನೊಬ್ಬ ವ್ಯಕ್ತಿ ಇಂದು ಮೃತಪಟ್ಟಿದ್ದಾನೆ.

ಕಾನ್‌ಸ್ಟೆಬಲ್ ಗಿರಿಪ್ರಸಾದ್‌ನನ್ನು ಬಂಧಿಸಲಾಗಿದ್ದು, ರ‍್ಯಾಶ್ ಡ್ರೈವಿಂಗ್ ಘಟನೆಗೆ ಕಾರಣ ಎಂದು ತಿಳಿದು ಬಂದಿದೆ. ಗಿರಿ ಪ್ರಸಾದ್ ಗೆಳಯರಾದ ಹೋಮ್ ಗಾರ್ಡ್​ಗಳಿಬ್ಬರು ಆಲ್ಕೋಹಾಲ್ ಸೇವಿಸಿದ್ದರು. ಆದರೆ, ಗಿರಿಪ್ರಸಾದ್​ನ ಪರೀಕ್ಷೆ ನಡೆಸಿದಾಗ ಅತ ಆಲ್ಕೋಹಾಲ್ ಸೇವಿಸಿಲ್ಲ ಎಂದು ತಿಳಿದು ಬಂದಿದೆ ಎಂದು ಪೊಲಿಸರು ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.