ETV Bharat / crime

ಐಬಿ ನಿರ್ದೇಶಕರ ಮನೆಯಲ್ಲಿ ಸಿಆರ್​ಪಿಎಫ್​ ಸಿಬ್ಬಂದಿ ಆತ್ಮಹತ್ಯೆ - ಸರ್ವಿಸ್​ ರಿವಾಲ್ವರ್​ನಿಂದ ಗುಂಡು ಹಾರಿಸಿಕೊಂಡು

53 ವರ್ಷದ ಎಎಸ್​ಐ ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಆತ್ಮಹತ್ಯೆಗೆ ಏನು ಎಂಬುದು ತಿಳಿದು ಬಂದಿಲ್ಲ.

ಐಬಿ ನಿರ್ದೇಶಕರ ಮನೆಯಲ್ಲಿ ಗುಂಡು ಹಾರಿಸಿಕೊಂಡು ಸಾವನ್ನಪ್ಪಿದ ಸಿಆರ್​ಪಿಎಫ್​ ಸಿಬ್ಬಂದಿ
crpf-personnel-shot-dead-in-ib-directors-house
author img

By

Published : Feb 4, 2023, 1:09 PM IST

ನವದೆಹಲಿ: ಗುಪ್ತಚರ ಇಲಾಖೆ ನಿರ್ದೇಶಕರ ಮನೆಯಲ್ಲಿ ನಿಯೋಜನೆಗೊಂಡಿದ್ದ ಕೇಂದ್ರ ಮೀಸಲು ಪೊಲೀಸ್​ ಪಡೆ (ಸಿಆರ್​ಪಿಎಫ್​) ಯೋಧ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಶುಕ್ರವಾರ ಸಂಜೆ 4.15ಕ್ಕೆ ಈ ಘಟನೆ ನಡೆದಿದ್ದು, 53 ವರ್ಷದ ಅಸಿಸ್ಟೆಂಟ್​ ಸಬ್​ ಇನ್ಸ್​ಪೆಕ್ಟರ್​ ರಾಜ್ಬಿರ್​ ಕುಮಾರ್​ ಸಾವನ್ನಪ್ಪಿದವರು ಎಂದು ಗುರುತಿಸಲಾಗಿದೆ. ಇನ್ನು, ಸ್ಥಳದಲ್ಲಿ ಆತ್ಮಹತ್ಯೆಗೆ ಸಂಬಂಧಿಸಿದ ಯಾವುದೇ ಡೆತ್​ನೋಟ್​ ಪತ್ತೆ ಆಗಿಲ್ಲ. ಮೃತ ದೇಹದ ಮರಣೋತ್ತರ ಪರೀಕ್ಷೆಯನ್ನು ಶನಿವಾರ ನಡೆಸಲಾಗಿದ್ದು, ಅವರ ಕುಟುಂಬಕ್ಕೆ ದೇಹವನ್ನು ಒಪ್ಪಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಯಾವುದೇ ಸೂಸೈಡ್​ ನೋಟ್​ ಪತ್ತೆಯಾಗಿಲ್ಲ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಜುಲೈನಲ್ಲಿ ನಡೆದಿತ್ತು ಇದೇ ರೀತಿ ಪ್ರಕರಣ: ಕಳೆದ ಜುಲೈನಲ್ಲಿ ಸಿಆರ್​ಪಿಎಫ್​ ಕಾನ್ಸ್​​ಟೇಬಲ್​ ನರೇಶ್​ ಜಾಟ್​ ಕೂಡ ತಮ್ಮ ಇದೇ ರೀತಿ ಆತ್ಮಹತ್ಯೆಗೆ ಶರಣಾಗಿದ್ದರು. ಜಾಟ್​ ಸಾಯುವ ಮುನ್ನ ಅವರು ಹೆಂಡತಿ ಮತ್ತು ಮಗಳೊಂದಿಗೆ 18ಗಂಟೆಗಳ ಕಾಲ ತಮ್ಮನ್ನು ಕೊಠಡಿಯಲ್ಲಿ ಕೂಡಿ ಹಾಕಿಕೊಂಡಿದ್ದರು. ಇನ್ನು ಜಾಟ್​ ಸಾವಿನ ಬೆನ್ನಲ್ಲೇ ಅವರ ಮಗಳ ಶಿಕ್ಷಣದ ವೆಚ್ಚವನ್ನು 12ನೇ ತರಗತಿವರೆಗೆ ಸಿಆರ್​ಪಿಎಫ್​ ಭರಿಸುವುದಾಗಿ ತಿಳಿಸಿತ್ತು. ಅಲ್ಲದೇ ಸಂತ್ರಸ್ತ ಹೆಂಡತಿ ಮತ್ತೊಂದು ಮದುವೆಯಾಗುವವರೆಗೂ ಪಿಂಚಣಿ ನೀಡಲು ಮತ್ತು ಸಂತ್ರಸ್ತರ ಕುಟುಂಬ ಸರ್ಕಾರಿ ಮನೆಯಲ್ಲಿ ಇರಲು ಯಾವುದೇ ಅಡ್ಡಿ ಇರುವುದಿಲ್ಲ ಎಂಬುದಕ್ಕೆ ಸಿಆರ್​ಪಿಎಫ್​ ಒಪ್ಪಿಗೆ ನೀಡಿತ್ತು.

ಟಾಸ್ಕ್​ ಫೋರ್ಸ್​ ರಚನೆ: ಸಿಆರ್​ಪಿಎಫ್​ ಯೋಧರು ಸಾವಿಗೆ ಶರಣಾಗುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಗೃಹ ಸಚಿವಾಲಯದಿಂದ ಟಾಸ್ಕ್​ ಫೋರ್ಸ್​ ಅನ್ನು ಕೂಡ ನೇಮಕ ಮಾಡಲಾಗಿತ್ತು. ಟಾಸ್ಕ್​ ಫೋರ್ಸ್​ ಹಿರಿಯ ಅಧಿಕಾರಿಗಳು ಸೇರಿದಂತೆ ಇಲಾಖೆ ಸಿಬ್ಬಂದಿಗಳು ಯೋಧರ ವಿರುದ್ಧ ಅವಾಚ್ಯ ಶಬ್ಧ, ಬೆದರಿಕೆ ಮತ್ತು ಕೆಲಸದ ಸ್ಥಳದಲ್ಲಿ ಅವಮಾನ ಮಾಡದಂತೆ ಕಟ್ಟುನಿಟ್ಟಿನ ಕ್ರಮಕ್ಕೆ ಶಿಫಾರಸು ಮಾಡಲಾಗಿತ್ತು. ಜೊತೆಗೆ ಪಾರದರ್ಶಕ ವರ್ಗಾವಣೆ ನಿಯಮವನ್ನು ಪಾಲಿಸಲು ಕೂಡ ಆದೇಶ ಹೊರಡಿಸಲಾಗಿತ್ತು.

ಸೈನಿಕರಿಗೆ ಬ್ಯಾರಕ್‌ಗಳು, ಸ್ನಾನಗೃಹಗಳು, ಶೌಚಾಲಯಗಳು, ಮನರಂಜನೆ, ಸಾಮಾನ್ಯ ಸಭಾಂಗಣಗಳು, ಕ್ರೀಡಾ ಸೌಲಭ್ಯಗಳಂತಹ ಮೂಲ ಸೌಕರ್ಯಗಳ ಲಭ್ಯತೆ ಸಿಗುವಂತೆ ನೋಡಿಕೊಳ್ಳಬೇಕು. ಕರ್ತವ್ಯದಲ್ಲಿ ವೈಫಲ್ಯಗಳ ಭಯವನ್ನು ಎದುರಿಸುವಾಗ, ನಾಯಕರ ಪಾತ್ರವು ಅತ್ಯಂತ ಮಹತ್ವದ್ದಾಗಿದೆ. ನಾಯಕರುಗಳು ಅಂತಹ ಸಮಸ್ಯೆಗಳನ್ನು ಪತ್ತೆ ಮಾಡುವಂತೆ ಅವರಿಗೆ ತರಬೇತಿ ನೀಡಬೇಕು. ಇದಕ್ಕೆ ಶಿಕ್ಷೆ ಬದಲು ಅದರ ನಿವಾರಣೆಗೆ ಕ್ರಮಕ್ಕೆ ಮುಂದಾಗಬೇಕು. ಹೆಚ್ಚಿನ ಅಪಾಯಕಾರಿ ಸ್ಥಳದಲ್ಲಿ ದೀರ್ಘ ಕಾಲದ ನಿಯೋಜನೆ ಸಿಬ್ಬಂದಿಗಳಲ್ಲಿ ಮಾನಸಿಕ ಸಮಸ್ಯೆ ಸೇರಿದಂತೆ ಇನ್ನಿತರ ರೋಗಗಳಿಗೆ ಕಾರಣವಾಗುತ್ತದೆ. ನಿಯಮಿತ ವ್ಯಾಯಾಮ, ವರ್ಗಾವಣೆಯಲ್ಲಿ ಪಾರದರ್ಶಕತೆ ನಿಯಮ ಮತ್ತು ವೈದ್ಯಕೀಯ ವ್ಯವಸ್ಥೆಗೆ ಉತ್ತೇಜನೆ ಕೆಲವು ಪರಿಹಾರವಾಗಲಿದೆ ಎಂದು ಟಾಸ್ಕ್​ ಫೋರ್ಸ್​ ಇಲಾಖೆಗೆ ಕರಡನ್ನು ತಯಾರಿಸಿ ನೀಡಿತ್ತು.

ಕುಟುಂಬದೊಂದಿಗೆ ಬಹಳ ಕಾಲದಿಂದ ದೂರ ಇರುವುದು. ರಜೆಗಳಿಲ್ಲದೆ ಕಾರ್ಯನಿರ್ವಹಣೆಯಂತಹ ಕ್ರಮವನ್ನು ಬಲವಂತಗೊಳಿಸುವುದನ್ನು ನಿರ್ವಹಣಾ ಸಂಸ್ಥೆ ಕೈ ಬಿಟ್ಟು, ಸುಧಾರಣೆ ತರಬೇಕು. ಸರಿಯಾದ ಸಮಯದಲ್ಲಿ ಹುದ್ದೆಗಳು ಭರ್ತಿಯಾದಾಗ ಮಾತ್ರ ಈ ಸಮಸ್ಯೆ ದೂರಾಗುತ್ತದೆ ಎಂದು ಟಾಸ್ಕ್​ ಫೋರ್ಸ್​​​ ಸಲಹೆ ನೀಡಿತ್ತು.

ಇದನ್ನೂ ಓದಿ: ಬಿಜೆಡಿ ಶಾಸಕನ ವಿರುದ್ಧ ಲೈಂಗಿಕ ಕಿರುಕುಳ ಆರೋಪ; ಕೇಸು ದಾಖಲಿಸಲು ಹೈಕೋರ್ಟ್‌ ಆದೇಶ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.