ETV Bharat / crime

ಗುಂಡಿಕ್ಕಿ ಹಸು ಕೊಂದ ಎರಡನೇ ಆರೋಪಿ ಬಂಧನ; ಕೊಡಗಿನಲ್ಲಿ ಉಳಿದವರಿಗೆ ಶೋಧಕಾರ್ಯ

ಮಡಿಕೇರಿ ಸಮೀಪದ ಕಗೊಡ್ಲುವಿನಲ್ಲಿ ಜೂ.6 ರಂದು ನಡೆದಿದ್ದ ಗೋಹತ್ಯೆ ಪ್ರಕರಣ ಸಂಬಂಧ ಮತ್ತೊಬ್ಬ ಪ್ರಮುಖ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

cow shootout case; second accused arrested in kodagu district
ಗುಂಡಿಕ್ಕಿ ಹಸು ಕೊಂದ ಎರಡನೇ ಆರೋಪಿ ಬಂಧನ; ಕೊಡಗಿನಲ್ಲಿ ಉಳಿದವರಿಗೆ ಶೋಧಕಾರ್ಯ
author img

By

Published : Jun 26, 2021, 3:23 AM IST

ಕೊಡಗು: ಮಡಿಕೇರಿ ಸಮೀಪ ನಡೆದಿದ್ದ ಗೋಹತ್ಯೆ ಪ್ರಕರಣದ ತನಿಖೆ ಚುರುಕು ಗೊಂಡಿದ್ದು, ಮತ್ತೊಬ್ಬ ಪ್ರಮುಖ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಮಹಮದ್ ರಿಯಾಜ್(33) ಬಂಧಿತ ಎರಡನೇ ಆರೋಪಿ. ಎರಡು ದಿನಗಳ ಹಿಂದಷ್ಟೇ ನಾಪೋಕ್ಲು ವಿನ ಕೊಳಕೇರಿಯಲ್ಲಿ ಆಶೀಕ್(26) ಎಂಬ ಆರೋಪಿಯನ್ನು ಅರೆಸ್ಟ್‌ ಮಾಡಲಾಗಿತ್ತು. ಈಗ ಮತ್ತೊಬ್ಬನನ್ನು ನಾಪೋಕ್ಲು ಸಮೀಪದ ಕಕ್ಕಬೆ ಗ್ರಾಮದಲ್ಲಿ ಬಂಧಿಸಲಾಗಿದೆ. ಕೃತ್ಯಕ್ಕೆ ಬಳಸಿದ ಮಾರುತಿ‌‌ ಆಲ್ಟೋ ಕಾರು ವಶಕ್ಕೆ ಪಡೆಯಲಾಗಿದೆ. ಮಡಿಕೇರಿ ಗ್ರಾಮಾಂತರ ಪೊಲೀಸರು ಮಿಂಚಿನ ಕಾರ್ಯಚರಣೆ ನಡೆಸುತ್ತಿದ್ದು, ಉಳಿದ ಆರೋಪಿಗಳಿಗಾಗಿ ಮುಂದುವರೆದ ಶೋಧ ಮುಂದು ವರೆಸಿದ್ದಾರೆ.

ಮಡಿಕೇರಿ ಸಮೀಪದಲ್ಲಿ ಜೂ.6 ರಂದು ಕಗೊಡ್ಲುವಿನಲ್ಲಿ ಗೋವನ್ನು ಕೊಂದು ಅದರ ಮಾಂಸ ತೆಗೆಯುತ್ತಿದ್ದಾಗ ಸ್ಥಳೀಯರು ದಾಳಿಮಾಡಿದ್ದರು. ನಂತ್ರ ದುಷ್ಕರ್ಮಿಗಳು ಮುಂಚೂಣಿ ತಂಡದ ಕಾರ್ಯಕರ್ತನ ಎದೆಗೆ ಕೋವಿಯಿಟ್ಟು ಬೆದರಿಸಿ ಕತ್ತಲಲ್ಲಿ ಪರಾರಿಯಾಗಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದ ಪೊಲೀಸರು, ಇಬ್ಬರು ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.