ಚಿಕ್ಕಮಗಳೂರು: ಜಿಲ್ಲೆಯ ಬಾಳೆಹೊನ್ನೂರಿನ ಕಳವು ಪ್ರಕರಣದಲ್ಲಿ ಇಬ್ಬರಿಗೆ ಜೈಲು ಶಿಕ್ಷೆ ಜೊತೆಗೆ ದಂಡ ವಿಧಿಸಲಾಗಿದೆ.
2019ರಲ್ಲಿ ಬಾಳೆಹೊನ್ನೂರು ವ್ಯಾಪ್ತಿಯ ಕಡ್ಲೆಮಕ್ಕಿಯಲ್ಲಿ ನಡೆದಿದ್ದ ಕಳ್ಳತನ ಪ್ರಕರಣದಲ್ಲಿ ಎನ್.ಆರ್ ಪುರ ತಾಲೂಕಿನ ಜೆ.ಎಂ.ಎಫ್.ಸಿ ನ್ಯಾಯಾಲಯ ತೀರ್ಪು ನೀಡಿದ್ದು, ಇಬ್ಬರು ಆರೋಪಿಗಳಿಗೆ ನಾಲ್ಕು ವರ್ಷ ಜೈಲು ಶಿಕ್ಷೆ ಜೊತೆಗೆ ಎಂಟು ಸಾವಿರ ರೂ. ದಂಡವನ್ನು ವಿಧಿಸಿದೆ.
ಕಡ್ಲೆಮಕ್ಕಿಯ ನಯಾಜ್ ಎಂಬುವರ ತಾಜ್ ಕಾಫಿ ಲಿಂಕ್ಸ್ ಅಂಗಡಿಯ ಗೋಡೌನ್ನಲ್ಲಿ ಕಳ್ಳತನ ನಡೆದಿತ್ತು. ಸಂತೋಷ್ ಹಾಗೂ ಗೋವಿಂದ ಎನ್ನುವವರು ಮಳಿಗೆಯ ಒಳ ಭಾಗಕ್ಕೆ ನುಗ್ಗಿ ಆರು ಚೀಲ ಕಾಳು ಮೆಣಸು ಕದಿದ್ದರು. ಬಾಳೆಹೊನ್ನೂರು ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿತ್ತು.
ನ್ಯಾಯಧೀಶರಾದ ಬಿ. ಪ್ರಿಯಾಂಕಾ ಅವರು ಈ ಆದೇಶ ನೀಡಿದ್ದು, ಸಂತೋಷ್ ಹಾಗೂ ಗೋವಿಂದ ಎನ್ನುವ ಇಬ್ಬರು ಆರೋಪಿಗಳಿಗೆ ನಾಲ್ಕು ವರ್ಷ ಜೈಲು ಹಾಗೂ ಎಂಟು ಸಾವಿರ ರೂ. ದಂಡ ವಿಧಿಸಿದ್ದಾರೆ.