ETV Bharat / crime

ಕೋವಿಡ್​ ಸೋಂಕಿತೆ ಮೇಲೆ ನರ್ಸ್​ನಿಂದಲೇ ಅತ್ಯಾಚಾರ: 24 ಗಂಟೆಗಳಲ್ಲೇ ಸಂತ್ರಸ್ತೆ ಸಾವು

ಮಧ್ಯಪ್ರದೇಶದ ಭೋಪಾಲ್​ನ ಸರ್ಕಾರಿ ಆಸ್ಪತ್ರೆಯಲ್ಲಿ ನರ್ಸ್​ನಿಂದಲೇ ಅತ್ಯಾಚಾರಕ್ಕೆ ಒಳಗಾಗಿದ್ದ ಕೊರೊನಾ ಸೋಂಕಿತೆ ಮೃತಪಟ್ಟಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

corona Patient Raped By Nurse In Bhopal Hospital
ಕೋವಿಡ್​ ಸೋಂಕಿತೆ ಮೇಲೆ ನರ್ಸ್​ನಿಂದಲೇ ಅತ್ಯಾಚಾರ
author img

By

Published : May 14, 2021, 8:57 AM IST

ಭೋಪಾಲ್‌ (ಮಧ್ಯಪ್ರದೇಶ): ಕೊರೊನಾ ಸೋಂಕಿಗೆ ಒಳಗಾಗಿ ಮಧ್ಯಪ್ರದೇಶದ ಭೋಪಾಲ್​ನ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ ಚಕಿತ್ಸೆ ಪಡೆಯುತ್ತಿದ್ದ ಮಹಿಳೆಯ ಮೇಲೆ ಪುರುಷ ನರ್ಸ್​ ಒಬ್ಬ ಅತ್ಯಾಚಾರ ಎಸಗಿದ್ದು, 24 ಗಂಟೆಗಳಲ್ಲೇ ಸಂತ್ರಸ್ತೆ ಕೊನೆಯುಸಿರೆಳೆದಿದ್ದಾರೆ.

ಭೋಪಾಲ್ ಮೆಮೋರಿಯಲ್​​ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ಒಂದು ತಿಂಗಳ ಮುಂಚೆಯೇ ಘಟನೆ ನಡೆದಿದ್ದು, ಈಗ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಏಪ್ರಿಲ್ 6 ರಂದು ಸಂತ್ರಸ್ತೆ ಪೊಲೀಸರಿಗೆ ದೂರು ನೀಡಿ, ವೈದ್ಯರ ಬಳಿ ಆರೋಪಿ ಯಾರೆಂಬ ಸುಳಿವು ನೀಡಿದ್ದರು. ಆದರೆ ತಕ್ಷಣವೇ ಮಹಿಳೆಯ ಸ್ಥಿತಿ ಗಂಭೀರವಾಗಿದ್ದು, ಐಸಿಯುಗೆ ಸ್ಥಳಾಂತರಿಸಲಾಗಿತ್ತು. ಅವರು ಅದೇ ದಿನ ಸಂಜೆ ಮೃತಪಟ್ಟಿದ್ದರು.

ಇದನ್ನೂ ಓದಿ: ಅತ್ಯಾಚಾರದ ವೇಳೆ ರೆಡ್​ಹ್ಯಾಂಡ್ ಆಗಿ ಸಿಕ್ಕಿಬಿದ್ದ ಎಎಸ್​ಐ.. ಪೊಲೀಸ್ ಠಾಣೆಯಲ್ಲೇ ಆತ್ಮಹತ್ಯೆ ಯತ್ನ

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಆರೋಪಿ ನರ್ಸ್​ ಸಂತೋಷ್ ಅಹಿರ್ವಾರ್​ನನ್ನು ಬಂಧಿಸಿದ್ದಾರೆ. ಸಂತ್ರಸ್ತೆ ದೂರಿನಲ್ಲಿ ತನ್ನ ಗುರುತು ಬಹಿರಂಗವಾಗಬಾರದೆಂದು ತಿಳಿಸಿದ್ದರು. ಹೀಗಾಗಿ ತನಿಖಾ ತಂಡವನ್ನು ಹೊರತುಪಡಿಸಿ ಯಾರೊಂದಿಗೂ ಮಾಹಿತಿಯನ್ನು ಹಂಚಿಕೊಳ್ಳಲಾಗಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿ ಇರ್ಷಾದ್ ವಾಲಿ ಹೇಳಿದ್ದಾರೆ.

ಇನ್ನು ಆರೋಪಿಯು ಈ ಹಿಂದೆ 24 ವರ್ಷದ ಸ್ಟಾಫ್ ನರ್ಸ್ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಮತ್ತು ಕರ್ತವ್ಯದಲ್ಲಿದ್ದಾಗ ಮದ್ಯ ಸೇವಿಸಿದ್ದಕ್ಕಾಗಿ ಆತನನ್ನು ಕೆಲಕಾಲ ಅಮಾನತು ಮಾಡಲಾಗಿತ್ತು ಎಂದು ಮೂಲಗಳು ತಿಳಿಸಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.