ಚಿಕ್ಕಬಳ್ಳಾಪುರ: ಕೆರೆಯಲ್ಲಿ ಕುರಿಗಳನ್ನು ತೊಳೆಯಲು ಹೋದ ಮೂವರು ಯುವಕರು ನೀರು ಪಾಲಾದ ಘಟನೆ ಚಿಂತಾಮಣಿ ತಾಲೂಕಿನ ಕೊಡದವಾಡಿ ಗ್ರಾಮದಲ್ಲಿ ನಡೆದಿದೆ. ಕೊಡದವಾಡಿ ಗ್ರಾಮದ ಸುರೇಶ್ ರವರ ಪುತ್ರ ಶೋದನ್ (19), ಚೌಡಪ್ಪ ಪುತ್ರ ಸುದರ್ಶನ್ (17), ಹಾಗೂ ರಮೇಶ್ ಅವರ ಪುತ್ರ ಸತೀಶ್ (18) ಕೆರೆಯಲ್ಲಿ ಮುಳಗಿ ಸಾವನ್ನಪ್ಪಿರುವ ದುರ್ದೈವಿಗಳು.
ಮೂವರು ಯುವಕರು ಒಂದೇ ಕುಟುಂಬದ ಅಣ್ಣ - ತಮ್ಮಂದಿರ ಮಕ್ಕಳಾಗಿದ್ದು, ಮೂವರು ತಮ್ಮ ಕುರಿಗಳನ್ನು ತೊಳೆಯಲು ಹೋಗಿದ್ದಾಗ ದುರಂತ ಸಂಭವಿಸಿದೆ. ಮೂವರ ಪೈಕಿ ಇಬ್ಬರ ದೇಹಗಳು ಪತ್ತೆಯಾಗಿದ್ದು, ಇನ್ನೊಬ್ಬ ಯುವಕನ ದೇಹಕ್ಕಾಗಿ ಗ್ರಾಮಸ್ಥರು ಹಾಗೂ ಅಗ್ನಿಶಾಮಕ ದಳ ಹುಡುಕಾಟ ನಡೆಸುತ್ತಿದ್ದಾರೆ. ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿರುವ ಚಿಂತಾಮಣಿ ಗ್ರಾಮಾಂತರ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.