ETV Bharat / crime

ಫೇಸ್‌ಬುಕ್‌ ಬಳಕೆದಾರರ ಡೇಟಾ ಬಳಕೆ: ಕೇಂಬ್ರಿಡ್ಜ್ ಅನಾಲಿಟಿಕಾ, ಜಿಎಸ್​ಆರ್​ಎಲ್ ವಿರುದ್ಧ ಕೇಸ್​

ಕಾನೂನು ಬಾಹಿರವಾಗಿ ಭಾರತೀಯ ಫೇಸ್‌ಬುಕ್‌ ಬಳಕೆದಾರರ ವೈಯಕ್ತಿಕ ಡೇಟಾ ಬಳಸಿಕೊಂಡ ಆರೋಪದ ಮೇಲೆ ಕೇಂಬ್ರಿಡ್ಜ್ ಅನಾಲಿಟಿಕಾದ ಮಾಜಿ ಸಿಇಒ ಅಲೆಕ್ಸಾಂಡರ್ ನಿಕ್ಸ್ ಹಾಗೂ ಗ್ಲೋಬಲ್ ಸೈನ್ಸ್ ರಿಸರ್ಚ್ ಲಿಮಿಟೆಡ್ ನಿರ್ದೇಶಕ ಡಾ. ಅಲೆಕ್ಸಾಂಡರ್ ಕೊಗಾನ್ ವಿರುದ್ಧ ಕೇಸ್​ ದಾಖಲಾಗಿದೆ.

author img

By

Published : Jan 22, 2021, 1:12 PM IST

Cambridge Analytica
ಕೇಂಬ್ರಿಡ್ಜ್ ಅನಾಲಿಟಿಕಾ

ನವದೆಹಲಿ: ಭಾರತದ ಸುಮಾರು 5.62 ಲಕ್ಷ ಫೇಸ್‌ಬುಕ್‌ ಬಳಕೆದಾರರ ವೈಯಕ್ತಿಕ ಡೇಟಾ ಬಳಸಿಕೊಂಡ ಆರೋಪದ ಮೇಲೆ ಬ್ರಿಟನ್​ ಸಂಸ್ಥೆಗಳಾದ ಕೇಂಬ್ರಿಡ್ಜ್ ಅನಾಲಿಟಿಕಾ ಲಿಮಿಟೆಡ್ ಮತ್ತು ಗ್ಲೋಬಲ್ ಸೈನ್ಸ್ ರಿಸರ್ಚ್ ಲಿಮಿಟೆಡ್ ವಿರುದ್ಧ ಕೇಂದ್ರೀಯ ತನಿಖಾ ದಳ (ಸಿಬಿಐ) ಪ್ರಕರಣ ದಾಖಲಿಸಿದೆ.

ಗ್ಲೋಬಲ್ ಸೈನ್ಸ್ ರಿಸರ್ಚ್ ಲಿಮಿಟೆಡ್ (ಜಿಎಸ್​ಆರ್​ಎಲ್​) ಸ್ಥಾಪಕ, ನಿರ್ದೇಶಕ ಡಾ. ಅಲೆಕ್ಸಾಂಡರ್ ಕೊಗಾನ್ ಹಾಗೂ ಕೇಂಬ್ರಿಡ್ಜ್ ಅನಾಲಿಟಿಕಾದ ಮಾಜಿ ಸಿಇಒ ಅಲೆಕ್ಸಾಂಡರ್ ನಿಕ್ಸ್ ಪ್ರಕರಣದ ಆರೋಪಿಗಳಾಗಿದ್ದಾರೆ ಎಂದು ಸಿಬಿಐ ತಿಳಿಸಿದೆ.

ಇದನ್ನೂ ಓದಿ: ಜೈಪುರದಲ್ಲಿ ಐಟಿ ದಾಳಿ: 1,400 ಕೋಟಿ ರೂ. ತೆರಿಗೆ ವಂಚನೆ ಬಯಲು

ಫೇಸ್‌ಬುಕ್‌ ಬಳಕೆದಾರರ ವೈಯಕ್ತಿಕ ದತ್ತಾಂಶವನ್ನು ಅಕ್ರಮವಾಗಿ ಈ ಎರಡು ಕಂಪನಿಗಳು ಬಳಸಿಕೊಂಡಿವೆ ಎಂದು 2018ರಲ್ಲಿ ಮಾಧ್ಯಮಗಳು ವರದಿ ಮಾಡಿದ್ದ ಬೆನ್ನಲ್ಲೇ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ದೂರು ನೀಡಿತ್ತು. ಕೇಂಬ್ರಿಡ್ಜ್ ಅನಾಲಿಟಿಕಾವು, ನಾವು ಇಂಗ್ಲೆಂಡ್​ ನಾಗರಿಕರಿಗೆ ಸಂಬಂಧಿಸಿದ ಡೇಟಾವನ್ನು ಮಾತ್ರ ಜಿಎಸ್​ಆರ್​ಎಲ್​ನಿಂದ ಪಡೆದಿದ್ದೆವು ಎಂದು ಹೇಳಿ ಸಚಿವಾಲಯದ ಇತರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿರಲಿಲ್ಲ. ಹೀಗಾಗಿ ಈ ಪ್ರಕರಣವನ್ನು ಸಿಬಿಐಗೆ ವಹಿಸಲಾಗಿತ್ತು.

ಜಿಎಸ್​ಆರ್​ಎಲ್ ನಿರ್ದೇಶಕ ಅಲೆಕ್ಸಾಂಡರ್ ಕೊಗಾನ್​ 'thisisyourdigitallife' ಎಂಬ ಹೆಸರಿನ ಆ್ಯಪ್ ರಚಿಸಿ, ಕಾನೂನುಬಾಹಿರವಾಗಿ ಫೇಸ್‌ಬುಕ್‌ ಬಳಕೆದಾರರ ಮಾಹಿತಿಗಳನ್ನು ಸಂಗ್ರಹಿಸುತ್ತಿದ್ದರು ಎಂಬುದು ಸಿಬಿಐ ತನಿಖೆಯಲ್ಲಿ ಬಯಲಾಗಿದೆ. ಈ ಡೇಟಾವನ್ನು ವಾಣಿಜ್ಯ ಉದ್ದೇಶಗಳಿಗಾಗಿ ಕೇಂಬ್ರಿಡ್ಜ್ ಅನಾಲಿಟಿಕಾಕ್ಕೆ ನೀಡುತ್ತಿದ್ದರು ಎಂದು ಸಿಬಿಐ ಆರೋಪಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.