ETV Bharat / crime

ನಾರದ ಲಂಚ ಪ್ರಕರಣ: ಬಂಗಾಳದ ಇಬ್ಬರು ಟಿಎಂಸಿ ಸಚಿವರನ್ನು ಬಂಧಿಸಿದ ಸಿಬಿಐ - ನಾರದ ಸ್ಟಿಂಗ್ ಟೇಪ್​ ಪ್ರಕರಣ

2016ರ ನಾರದ ಲಂಚ ಪ್ರಕರಣ ಸಂಬಂಧ ​ಪಶ್ಚಿಮ ಬಂಗಾಳದ ಇಬ್ಬರು ಸಚಿವರು, ಓರ್ವ ಶಾಸಕ ಹಾಗೂ ಓರ್ವ ಮಾಜಿ ಸಚಿವರನ್ನು ಸಿಬಿಐ ಅರೆಸ್ಟ್ ಮಾಡಿದೆ.

CBI arrests two west bengal ministers
ಪಶ್ಚಿಮ ಬಂಗಾಳದ ಸಾರಿಗೆ ಸಚಿವ ಫಿರ್ಹಾದ್ ಹಕೀಮ್
author img

By

Published : May 17, 2021, 10:26 AM IST

Updated : May 17, 2021, 10:56 AM IST

ಕೋಲ್ಕತ್ತಾ (ಪಶ್ಚಿಮ ಬಂಗಾಳ): ನಾರದ ಲಂಚ ಪ್ರಕರಣ ಸಂಬಂಧ ಪಶ್ಚಿಮ ಬಂಗಾಳದ ಸಾರಿಗೆ ಸಚಿವ ಫಿರ್ಹಾದ್ ಹಕೀಮ್ ಹಾಗೂ ಸಚಿವ ಸುಬ್ರತಾ ಮುಖರ್ಜಿ ಅವರನ್ನು ಕೇಂದ್ರ ತನಿಖಾ ದಳ (ಸಿಬಿಐ) ಬಂಧಿಸಿದೆ.

ಇವರೊಂದಿಗೆ ತೃಣಮೂಲ ಕಾಂಗ್ರೆಸ್ ಶಾಸಕ ಮದನ್ ಮಿತ್ರಾ, ಮಾಜಿ ಸಚಿವ ಸೋವನ್ ಚಟರ್ಜಿಯನ್ನೂ ಸಹ ತನಿಖಾ ದಳ ಬಂಧಿಸಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಬಂಗಾಳದ ಸಚಿವರ ಬಂಧನ - ಟಿಎಂಸಿ ಬೆಂಬಲಿಗರ ಪ್ರತಿಭಟನೆ

ಕಳೆದ ವಾರವಷ್ಟೇ ನಾರದ​ ಪ್ರಕರಣಕ್ಕೆ ಸಂಬಂಧಿಸಿದಂತೆ ಟಿಎಂಸಿ ನಾಯಕರಾದ ಸುಬ್ರತಾ ಮುಖರ್ಜಿ, ಮದನ್ ಮಿತ್ರಾ ಮತ್ತು ಸೋವನ್ ಚಟರ್ಜಿ, ಫಿರ್ಹಾದ್ ಹಕೀಮ್ ವಿರುದ್ಧ ಕಾನೂನು ಕ್ರಮ ಜರುಗಿಸಲು ಸಿಬಿಐಗೆ ಪಶ್ಚಿಮ ಬಂಗಾಳ ರಾಜ್ಯಪಾಲರು ಅನುಮತಿ ನೀಡಿದ್ದರು.

ಏನಿದು ನಾರದ ಸ್ಟಿಂಗ್ ಟೇಪ್​ ಪ್ರಕರಣ?

2016ರ ಪಶ್ಚಿಮ ಬಂಗಾಳ ಚುನಾವಣೆಗೂ ಮುನ್ನ ನಾರದ ಎಂಬ ಸುದ್ದಿ ವಾಹಿನಿ ನಡೆಸಿದ ಸ್ಟಿಂಗ್(ಕುಟುಕು ಕಾರ್ಯಾಚರಣೆ) ಆಪರೇಷನ್​ನಲ್ಲಿ ಟಿಎಂಸಿ ನಾಯಕರು ಲಂಚ ತೆಗೆದುಕೊಳ್ಳುತ್ತಿರುವುದು ಬಯಲಾಗಿತ್ತು. ಈ ವಿಡಿಯೋ ಮಾಧ್ಯಮಗಳಲ್ಲಿ ಪ್ರಸಾರವಾಗಿತ್ತು. 2017ರ ಮಾರ್ಚ್​ನಲ್ಲಿ ಕೋಲ್ಕತ್ತಾ ಹೈಕೋರ್ಟ್​ ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿತ್ತು.

Last Updated : May 17, 2021, 10:56 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.