ಜೌನ್‌ಪುರ (ಉತ್ತರ ಪ್ರದೇಶ): ದೇಶದ ತ್ರಿವರ್ಣಧ್ವಜದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿರುವ ಆರೋಪದಡಿ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ವಿರುದ್ಧ ಉತ್ತರ ಪ್ರದೇಶದ ಜೌನ್‌ಪುರದಲ್ಲಿ ಪ್ರಕರಣ ದಾಖಲಾಗಿದೆ.
ಜಮ್ಮು ಮತ್ತು ಕಾಶ್ಮೀರಕ್ಕೆ ಈ ಹಿಂದೆ ಇದ್ದ ರಾಜ್ಯ ಧ್ವಜವನ್ನು ಮರಳಿ ಅಧಿಕೃತಗೊಳಿಸುವವರೆಗೂ ತಮ್ಮ ಪೀಪಲ್ಸ್ ಡೆಮಾಕ್ರಟಿಕ್ ಪಕ್ಷ(ಪಿಡಿಪಿ)ದ ಸದಸ್ಯರು ರಾಷ್ಟ್ರಧ್ವಜವನ್ನು ಹಾರಿಸುವುದಿಲ್ಲ ಎಂದು ಮುಫ್ತಿ ಈ ಹಿಂದೆ ಹೇಳಿಕೆ ನೀಡಿದ್ದರು. ಇದಕ್ಕೆ ಸ್ವಪಕ್ಷ ಸದಸ್ಯರು ಸೇರಿದಂತೆ ಅನೇಕರು ವಿರೋಧ ವ್ಯಕ್ತಪಡಿಸಿದ್ದರು.
ಇದನ್ನೂ ಓದಿ: ಚಾಕು ಇರಿದು ಪತ್ನಿ ಕೊಂದ ವೈದ್ಯ.. ಕೆಲ ಕ್ಷಣಗಳಲ್ಲೇ ಕಾರು ಅಪಘಾತಕ್ಕೀಡಾಗಿ ಉಸಿರು ನಿಲ್ಲಿಸಿದ ಪತಿ
ರಾಷ್ಟ್ರಧ್ವಜಕ್ಕೆ ಮಾಡಿದ ಅಪಮಾನ, ದೇಶದ್ರೋಹ ಎಂದು ಆರೋಪಿಸಿರುವ ಜೌನ್‌ಪುರದ ವಕೀಲ ಹಿಮಾಂಶು ಶ್ರೀವಾಸ್ತವ್ ಜಿಲ್ಲಾ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದು, ನ್ಯಾಯಾಧೀಶರು ಮೆಹಬೂಬಾ ಮುಫ್ತಿಗೆ ನೋಟಿಸ್ ನೀಡಿದ್ದಾರೆ.